ಬೆಂಗಳೂರು: ರಾಜ್ಯದಲ್ಲಿ ನಿನ್ನೆ ರಾತ್ರಿ 9 ಗಂಟೆಯಿಂದ ಕ್ಲೋಸ್​ಡೌನ್ ಜಾರಿಯಾಗಿದೆ. ಈ ಹಿನ್ನೆಲೆ ನಗರದಲ್ಲಿ ರಾತ್ರಿಯಿಂದ ಬಸ್ ಸಂಚಾರ ಬಂದ್​ ಆಗಿದೆ. ಇಂದು ಮೆಜೆಸ್ಟಿಕ್ ಬಸ್ ನಿಲ್ಧಾಣ ಬಸ್​​ಗಳಿಲ್ಲದೇ  ಬಿಕೋ ಅನ್ನುತ್ತಿದೆ.

ಮೆಜೆಸ್ಟಿಕ್ ಸುತ್ತಮುತ್ತ ಪೊಲೀಸ್ರು ಬ್ಯಾರಿಕೇಡ್​ಗಳನ್ನ ಹಾಕಿದ್ದಾರೆ. ಬಿಎಂಟಿಸಿ ಬಸ್ ನಿಲ್ಥಾಣದಲ್ಲಿ ಒಂದೇ ಒಂದು ಬಸ್ ಇಲ್ಲ. ಸದ್ಯಕ್ಕೆ ಒಂದು ವೋಲ್ವೋ ಬಸ್ ಮಾತ್ರ ಏರ್ಪೋರ್ಟ್ಗೆ ಹೊರಟು ನಿಂತಿದೆ. ನಿಲ್ದಾಣದ ಬಳಿ ಆಟೋಗಳು ಸಂಚಾರ ಮಾಡ್ತಿವೆ. ಇಂದು ಬೆಳ್ಳಂಬೆಳಗ್ಗೆ ಮೆಜೆಸ್ಟಿಕ್ ಸುತ್ತಮುತ್ತ ಪೊಲೀಸರು ಗಸ್ತು ಹಾಕ್ತಿದ್ದು, ಅನಾವಶ್ಯಕವಾಗಿ ಯಾರಾದ್ರೂ ಓಡಾಡ್ತಿದ್ದಾರಾ ಅಂತ ಗಮನಿಸುತ್ತಿದ್ದಾರೆ. ಆ ರೀತಿ ಕಂಡು ಬಂದ್ರೆ ಅಂಥವರನ್ನ  ವಿಚಾರಿಸುತ್ತಿದ್ದಾರೆ.

ರೈಲ್ವೇ ನಿಲ್ಧಾಣದಿಂದ ಮೆಜೆಸ್ಟಿಕ್ ಕಡೆಗೆ ಕೆಲ ಪ್ರಯಾಣಿಕರು ಬರುತ್ತಿದ್ದಾರೆ. ಆದ್ರೆ ಮೆಜೆಸ್ಟಿಕ್ ನಲ್ಲಿ ಯಾವುದೇ ಬಸ್ ಸಂಚಾರ ಇಲ್ಲದ ಕಾರಣ ಆಟೋಗಳ ಮೊರೆ ಹೋಗ್ತಿದ್ದಾರೆ. ಪ್ರಯಾಣಿಕರನ್ನ ಪೊಲೀಸ್ರು ತಡೆದಿದ್ದಲ್ಲಿ ಟಿಕೆಟ್ ತೋರಿಸಿ ತಮ್ಮ ಮನೆ ಸೇರಬಹುದು.

The post ಕ್ಲೋಸ್​​ಡೌನ್ ಹಿನ್ನೆಲೆ ಬಸ್​ ಸಂಚಾರ ಬಂದ್.. ಮೆಜೆಸ್ಟಿಕ್ ಸ್ತಬ್ಧ appeared first on News First Kannada.

Source: newsfirstlive.com

Source link