ಬಳ್ಳಾರಿ: ಕೊರೊನಾ ಸೋಂಕಿತರನ್ನು ಕೋವಿಡ್ ಕೇರ್‌ ಸೆಂಟರ್​ಗೆ ಶಿಫ್ಟ್ ಮಾಡಲು ಬಂದ ಅಧಿಕಾರಿಗಳ ಜೊತೆ ಗ್ರಾಮಸ್ಥರು ವಾಗ್ವಾದಕ್ಕೆ ಇಳಿದ ಘಟನೆ ಸಿರುಗುಪ್ಪ ತಾಲೂಕಿನ ಹಚ್ಚೋಳ್ಳಿ ಗ್ರಾಮದಲ್ಲಿ ನಡೆದಿದೆ.

ಅಧಿಕಾರಿಗಳು ಗ್ರಾಮದ ನಾಲ್ಕು ಮಂದಿ ಸೋಂಕಿತರನ್ನ ಕರೆದೊಯ್ಯಲು ಆ್ಯಂಬುಲೆನ್ಸ್​ ಸಮೇತ ಬಂದಿದ್ದರು. ಈ ವೇಳೆ ‘ಕೋವಿಡ್ ಕೇರ್ ಸೆಂಟರ್​​ನಲ್ಲಿ ನಮಗೆ ಏನಾದರೂ ಆದರೆ ಯಾರು ಹೊಣೆ? ನಮ್ಮ ಆರೋಗ್ಯದ ಬಗ್ಗೆ ಏನ್ ಗ್ಯಾರಂಟಿ ಕೊಡ್ತೀರಾ? ನಾವು ಅಲ್ಲಿಗೆ ಬರಲ್ಲ’ ಎಂದು ಅಧಿಕಾರಿಗಳಿಗೆ ಗ್ರಾಮಸ್ಥರು ಪ್ರಶ್ನೆ ಮಾಡಿದರು.

‘ನಿಮ್ಮ ಆರೋಗ್ಯ ಚೆನ್ನಾಗಿರಬೇಕು, ಅದಕ್ಕೆ ಕರೆದುಕೊಂಡು ಹೋಗಲು ಬಂದಿದ್ದೇವೆ’ ಎಂದು ಅಧಿಕಾರಿಗಳು ತಿಳಿ ಹೇಳಿದ್ದಾರೆ. ಅದಕ್ಕೆ ಒಪ್ಪದ ಗ್ರಾಮಸ್ಥರು ಮನೆಯಲ್ಲೇ ಇರುತ್ತೇವೆ ಎಂದು ವಾದಿಸಿದ್ದಾರೆ. ಹೀಗಾಗಿ ಅಧಿಕಾರಿಗಳು ಗ್ರಾಮಸ್ಥರಿಂದ ಮುಚ್ಚಳಿಕೆಯನ್ನ ಬರೆಸಿಕೊಂಡು ವಾಪಸ್​ ಹೋಗಿದ್ದಾರೆ.

ಗ್ರಾಮದ ಕೆಲವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಹೀಗಿದ್ದೂ ಗ್ರಾಮದಲ್ಲಿ ಬೇಕಾಬಿಟ್ಟಿ ಓಡಾಡುತ್ತದ್ದಾರೆ ಅನ್ನೋ ದೂರುಗಳು ಇದೆ. ಹೀಗಾಗಿ ಅವರನ್ನ ರಾವಿಹಾಳು ಗ್ರಾಮದ ಕೋವಿಡ್ ಕೇರ್ ಸೆಂಟರ್‌ಗೆ ಶಿಫ್ಟ್ ಮಾಡಲು ಅಧಿಕಾರಿಗಳು ಬೆಳಗ್ಗೆ ಬಂದಿದ್ದರು.

The post ‘ಕ್ವಾರಂಟೀನ್ ಕೇಂದ್ರಕ್ಕೆ ಬರಲ್ಲ’ ಎಂದು ವಾಗ್ವಾದ.. ಮುಚ್ಚಳಿಕೆ ಬರೆಸಿಕೊಂಡು ಅಧಿಕಾರಿಗಳು ವಾಪಸ್ appeared first on News First Kannada.

Source: newsfirstlive.com

Source link