ಬಾಗಲಕೋಟೆ: ಆಕ್ರಮವಾಗಿ ಕ್ಷೀರಭಾಗ್ಯ ಹಾಲಿನ ಪುಡಿ ಪ್ಯಾಕೆಟ್ ಸಂಗ್ರಹ ಮತ್ತು ಮಾರಾಟ ಮಾಡಿದ ಆರೋಪದ ಮೇರೆಗೆ ಸಿಐಡಿ ಪೊಲೀಸರು, ಪುರಸಭೆ ಅಧ್ಯಕ್ಷೆಯ ಪತಿಯನ್ನು ಬಂಧಿಸಿದ್ದಾರೆ.

ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರದಲ್ಲಿ ಘಟನೆ ನಡೆದಿದೆ. ಮಹಾಲಿಂಗಪುರ ಪುರಸಭೆ ಅಧ್ಯಕ್ಷೆ ಸ್ನೇಹಲ್ ಅಂಗಡಿಯವರ ಪತಿ ಶಿವಾನಂದ ಅಂಗಡಿನನ್ನು ಸಿಐಡಿ ಅಧಿಕಾರಿಗಳು ತಂಡ ನಿನ್ನೆ ರಾತ್ರಿ ಬಂಧನ ಮಾಡಿದೆ. ಕ್ಷೀರಭಾಗ್ಯ ಹಾಲಿನ ಪ್ಯಾಕೆಟ್​ಗಳ ಆಕ್ರಮ ಸಾಗಾಟ ದಂಧೆಯಲ್ಲಿ ಶಿವಾನಂದ ಅಂಗಡಿ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿದ ಸಿಐಡಿ ಅಧಿಕಾರಿಗಳು, ಮಹಾಲಿಂಗಪುರದ ಮನೆ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ.

ಏನಿದು ಪ್ರಕರಣ?
ಬರೋಬ್ಬರಿ 14 ಟನ್ ಕ್ಷೀರಭಾಗ್ಯ ಹಾಲಿನ ಪುಡಿ ಪ್ಯಾಕೆಟ್​ಗಳನ್ನ ಆಕ್ರಮವಾಗಿ ಸಂಗ್ರಹಿಸಿ ಮಾರಾಟಕ್ಕೆ ಮುಂದಾಗಿದ್ದ ಆರೋಪದಲ್ಲಿ 2020ರ ಅಕ್ಟೋಬರ್ 20ರಂದು ಜಮಖಂಡಿ ನಗರದ ಗೋಡೌನ್​ ಮೇಲೆ ಅಧಿಕಾರಿಗಳು, ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಆ ಬಳಿಕ ಮಹದೇವ ತೇಲಿ, ಗಿರೀಶ್ ತೇಲಿ, ಗೋಪಾಲ ತೇಲಿ ಎಂಬವರು ವಿರುದ್ಧ ಎಫ್​​ಐಆರ್ ದಾಖಲು ಮಾಡಿ ಜಮಖಂಡಿ ಠಾಣೆ ಪೊಲೀಸರು ತನಿಖೆ ನಡೆಸಿದ್ದರು.

ಬಳಿಕ ಬೆಳಗಾವಿ ಐಜಿಪಿ ನೇತೃತ್ವದಲ್ಲಿ ತನಿಖೆ ಮುಂದುವರಿಸಲಾಗಿತ್ತು. ತನಿಖೆಯನ್ನ ದಿಕ್ಕು ತಪ್ಪುತ್ತಿರುವ ಸಂಶಯದ ಹಿನ್ನೆಲೆಯಲ್ಲಿ ಮೇ 25ರಂದು ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿತ್ತು. ಸದ್ಯ ಪುರಸಭೆ ಅಧಕ್ಷೆ ಸ್ನೇಹಲ್ ಅಂಗಡಿ ಪತಿ ಶಿವಾನಂದ ಅಂಗಡಿಯನ್ನ ಬಂಧಿಸಿರುವ ಅಧಿಕಾರಿಗಳು ವಿಚಾರಣೆ ಮುಂದುವರೆಸಿದ್ದಾರೆ.

The post ಕ್ಷೀರಭಾಗ್ಯ ಹಾಲಿನಪುಡಿ ಪ್ಯಾಕೆಟ್ ಆಕ್ರಮ ಸಂಗ್ರಹ, ಮಾರಾಟ ಆರೋಪ- ಪುರಸಭೆ ಅಧ್ಯಕ್ಷೆ ಪತಿ ಅರೆಸ್ಟ್​ appeared first on News First Kannada.

Source: newsfirstlive.com

Source link