ಹುಬ್ಬಳ್ಳಿ: ಚಹಾ ಕೊಡುವ ವಿಚಾರಲ್ಲಿ ಗಲಾಟೆ ನಡೆದ ಗಲಾಟೆಯಲ್ಲಿ ಮಾತಿಗೆ ಮಾತು ಬೆಳೆದು ವ್ಯಕ್ತಿಯೊಬ್ಬ ಹೋಟೆಲ್​​ ಸಪ್ಲೈಯರ್​​ಗೆ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹುಬ್ಬಳ್ಳಿ ನಗರದ ಹಳೇ ಬಸ್ ನಿಲ್ದಾಣದ ಮುಂದಿರುವ ಅಯೋಧ್ಯಾ ಹೊಟೇಲ್​​​ನಲ್ಲಿ ಘಟನೆ ನಡೆದಿದೆ.

ಕಳೆದ ಮೂರು ದಿನದ ಹಿಂದೆ ನಡೆದ ಘಟನೆ ನಡೆದಿದ್ದು, ಗಲಾಟೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಲ್ಲಪ್ಪ ಶಿರಕೋಳ ಸಪ್ಲೈಯರ್ ಮೇಲೆ ದಾಳಿ ನಡೆಸಿದ ವ್ಯಕ್ತಿ ಎನ್ನಲಾಗಿದೆ. ಕಲ್ಲಪ್ಪ ಶಿರಕೋಳ ತನ್ನ ಸಹಚರನೊಂದಿಗೆ ಹೊಟೇಲ್​​ನಲ್ಲಿ ಚಹಾ ಆರ್ಡರ್ ಮಾಡಿದ್ದು, ಬೇರೆ ಗ್ರಾಹಕರು ಬಂದ ಹಿನ್ನೆಲೆಯಲ್ಲಿ ಈತನಿಗೆ ಚಹಾ ಕೊಡುವುದು ತಡವಾಗಿದೆ. ಅದನ್ನೇ ನೆಪ ಮಾಡಿಕೊಂಡ ಕಲ್ಲಪ್ಪ ಶಿರಕೋಳ ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಹುಬ್ಬಳ್ಳಿ ಉಪನಗರ ಠಾಣೆಯ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈಗಾಗಲೇ ಕಲ್ಲಪ್ಪ ಶಿರಕೋಳ ಕೊಲೆ ಪ್ರಕರಣವೊಂದರಲ್ಲಿ ಅಪರಾಧಿಯಾಗಿ ಎನ್ನಲಾಗಿದ್ದು, ಸದ್ಯ ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದಿದ್ದಾನಂತೆ. ಸದ್ಯ ಘಟನೆ ಸಂಬಂಧ ಶಿರಕೋಳ ವಿರುದ್ಧ ಹಲ್ಲೆ ಮಾಡಿದ ಆರೋಪದ ಮೇಲೆ ದೂರು ದಾಖಲಿಸಲಾಗಿದೆ.

The post ಕ್ಷುಲಕ ಕಾರಣಕ್ಕೆ ಹೋಟೆಲ್​​ ಸಪ್ಲೈಯರ್​​ಗೆ ಹಿಗ್ಗಾ-ಮುಗ್ಗಾ ಥಳಿಸಿದ ವ್ಯಕ್ತಿ appeared first on News First Kannada.

Source: newsfirstlive.com

Source link