ಖರೀದಿಗೆ ಅವಸರಿಸಬೇಡಿ, ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಸೋಮವಾರದಿಂದ ಆರಂಭವಾಗಲಿದೆ! | Wait for your shopping till Monday, Amazon Great Republic Day Sale will get underway from, Jan 17 22 ARB


ಖರೀದಿಗೆ ಅವಸರಿಸಬೇಡಿ, ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಸೋಮವಾರದಿಂದ ಆರಂಭವಾಗಲಿದೆ!

ಅಮೆಜಾನ್ ಗ್ರೇಟ್​ ರಿಪಬ್ಲಿಕ್ ಡೇ ಸೇಲ್

ಗೃಹೋಪಯೋಗಿ ವಸ್ತುಗಳು, ಎಲೆಕ್ಟ್ರಾನಿಕ್ ಸಾಮಗ್ರಿಗಳಲು, ಕಿಚನ್ ಮತ್ತು ಮನೆ ವಸ್ತುಗಳು ಮತ್ತು ಇತರ ಹಲವಾರು ಪದಾರ್ಥಗಳನ್ನು ಖರೀದಿಸುವ ಪ್ಲ್ಯಾನ್ ಇದೆಯಾ? ಹಾಗಿದ್ದರೆ ಸೋಮವಾರದವರೆಗೆ ಕಾಯುವುದು ಒಳ್ಳೆಯದು. ಯಾಕೆ ಅಂತೀರಾ? ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಸೋಮವಾರ ಅಂದರೆ, ಜನೆವರಿ 17ರಿಂದ ಅರಂಭವಾಗಲಿದ್ದು ಜನೆವರಿ 22ರವರೆಗೆ ಜಾರಿಯಲ್ಲಿರಲಿದೆ. ನೀವು ಪ್ರೈಮ್ ಸದಸ್ಯರಾಗಿದ್ದರೆ ಜನೆವರಿ 16 ರ ಮಧ್ಯರಾತ್ರಿಯಿಂದಲೇ ಖರೀದಿಗೆ ಶುರುಹಚ್ಚಿಕೊಳ್ಳಬಹುದು. ಮೇಲೆ ಹೇಳಿದ ವಸ್ತುಗಳಲ್ಲದೆ, ಸ್ಮಾರ್ಟ್ ಫೋನ್, ಜವಳಿ ಮತ್ತು ಇನ್ನೂ ಅನೇಕ ಸಾಮಗ್ರಿಗಳ ಮೇಲೆ ಅಮೆಜಾನ್ ಭಾರಿ ಪ್ರಮಾಣದ ರಿಯಾಯಿತಿಯನ್ನು ಒದಗಿಸಲಿದೆ.

ರಿಪಬ್ಲಿಕ್ ಡೇ ಸೇಲ್ ಅವಧಿಯಲ್ಲಿ ಅಮೆಜಾನ್ ತನ್ನ ಖರೀದಿದಾದರಿಗೆ ಬ್ಯಾಂಕ್ ಡಿಸ್ಕೌಂಟ್ ಗಳನ್ನು ಸಹ ಒದಗಿಸಲಿದೆ. ಎಸ್ ಬಿ ಐ ಕ್ರೆಡಿಟ್ ಹೊಂದಿರುವವರಿಗೆ ಶೇಕಡಾ 10 ರಷ್ಟು ದಿಢೀರ್ ರಿಯಾಯಿತಿ ಸಿಗಲಿದೆ. ಬಜಾಜ್ ಫಿನ್ಸರ್ವ್ ಈಎಮ್ಐ ಕಾರ್ಡ್, ಅಮೆಜಾನ್ ಪೇ ಐಸಿಐಸಿಐ ಕಾರ್ಡ್, ಅಮೆಜಾನ್ ಪೇ ಲೇಟರ್ ಕಾರ್ಡ್ ಮತ್ತು ಆಯ್ದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಹೊಂದಿರುವ ಖರೀದಿದಾರರು ಈ ಎಮ್ ಐ ಗಳ ಮೇಲೆ ಹೆಚ್ಚಿನ ಹಣ ತೆರಬೇಕಿಲ್ಲ ಎಂದು ಅಮೆಜಾನ್ ತನ್ನ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಬ್ಯಾಂಕ್ ಡಿಸ್ಕೌಂಟ್​ಗಳ ಹೊರತಾಗಿ ಖರೀದಿದಾರರು ಎಕ್ಸ್ಚೇಂಜ್ ಆಫರ್ ಅಡಿಯಲ್ಲಿ ರೂ,16,000 ಗಳಷ್ಟು ಆಫರ್ ಪಡೆಯಬಹುದಾಗಿದೆ. ಅಮೆಜಾನ್ ಇ-ಪೋರ್ಟಲ್ ನಲ್ಲಿ ಖರೀದಿಸಿದ ಅನುಭವ ಇಲ್ಲದವರಿಗೆ ಇಂಗ್ಲಿಷ್ ಭಾಷೆಯೂ ಸೇರಿದಂತೆ ಮರಾಠಿ, ಹಿಂದಿ, ಬೆಂಗಾಲಿ, ಕನ್ನಡ, ತಮಿಳು ಮತ್ತು ಮಲಯಾಳಂ ಮೊದಲಾದ 8 ಭಾಷೆಗಳಲ್ಲಿ ವ್ಯವಹರಿಸುವ ಅವಕಾಶವಿದೆ. ಅಮೆಜಾನ್ ಆನ್ಲೈನ್ ಶಾಪಿಂಗ್ ನಲ್ಲಿ ನೀವು ಧ್ವನಿಯ ಮೂಲಕವೂ ವಸ್ತುಗಳನ್ನು ಆರ್ಡರ್ ಮಾಡಬಹುದು, ಆದರೆ ಕೇವಲ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಮಾತಾಡುವ ಅವಕಾಶವಿದೆ.

ಹಾಗೆ ನೋಡಿದರೆ, ಎಲ್ಲ ಕೆಟೆಗೆರಿಯ ವಸ್ತುಗಳ ಮೇಲೆ ಅಮೆಜಾನ್ ಭಾರಿ ಪ್ರಮಾಣದ ಡಿಸ್ಕೌಂಟ್​ಗಳನ್ನು ನೀಡುತ್ತಿದೆಯಾದರೂ ಒಂದಷ್ಟು ವಸ್ತುಗಳನ್ನು ನಾವು ಉಲ್ಲೇಖಿಸಬಯಸುತ್ತೇವೆ. ಸ್ಮಾರ್ಟ್ ಫೋನ್ಗಳಲ್ಲಿ ಅತ್ಯಂತ ಜನಪ್ರಿಯ ಬ್ರ್ಯಾಂಡ್ ಎನಿಸಿರುವ ವನ್ ಪ್ಲಸ್, ಸ್ಯಾಮ್ಸಂಗ್, ಌಪಲ್ ಹಾಗೂ ಇನ್ನಿತರ ಫೋನ್ಗಳ ಮೇಲೆ ಭಾರಿ ರಿಯಾಯಿತಿಯನ್ನು ಅಮೆಜಾನ್ ಒದಗಿಸುತ್ತಿದೆ.

ರೆಡ್ಮಿ ನೋಟ್ 10 ಎಸ್ ಫೋನಿನ ಮೂಲಬೆಲೆ ರೂ.16,999 ಇದೆ. ಆದರೆ, ಇದರ ಮೇಲೆ ಅಮೆಜಾನ್ ಭಾರಿ ರಿಯಾಯಿತಿ ನೀಡಲಿದೆ. ಎಷ್ಟು ಅನ್ನೋದನ್ನ ಅದು ಇದುವರೆಗೆ ಬಹಿರಂಗಗೊಳಿಸಿಲ್ಲ. ವನ್ಪ್ಲಸ್ ನಾರ್ಡ್ 2 5ಜಿ ಫೋನ್ ಸಹ ರಿಯಾಯಿತಿ ದರದಲ್ಲಿ ಸಿಗಲಿದೆ.

5000 ಎಮ್ ಎ ಎಚ್ ಬ್ಯಾಟರಿಯುಕ್ತ ರೆಡ್ಮಿ 9ಎ ಸ್ಪೋರ್ಟ್, 6000 ಎಮ್ ಎಎಚ್ ಬ್ಯಾಟಿರಿಯುಳ್ಳ ಸ್ಯಾಮ್ಸಂಗ್ ಗೆಲಾಕ್ಸಿ ಎಮ್12 ಫೋನಿನ ಮೂಲ ಬೆಲೆ ರೂ. 12,999 ಆಗಿದ್ದರೂ ಅಮೆಜಾನ್ ಸೇಲ್ ನಲ್ಲಿ ಕಡಿಮೆ ಬೆಲೆಗೆ ಸಿಗಲಿದೆ. ರಿಯಾಯಿತಿ ದರದಲ್ಲಿ ಸಿಗಲಿರುವ ಇತರ ಫೋನ್ಗಳೆಂದರೆ, ರೆಡ್ಮಿ ನೋಟ್ 11ಜಿ, ಟೆಕ್ನೋ ಸ್ಪಾರ್ಕ್ 8ಟಿ, ಐಕ್ಯೂ00 ಜೆಡ್ 5ಜಿ, ರೆಡ್ಮಿ 10 ಪ್ರೈಮ್, ವನ್ ಪ್ಲಸ್ 9ಆರ್ ಮತ್ತು ಇನ್ನೂ ಹಲವು. ಅಮೆಜಾನ್ ಎಲ್ಲ ವಸ್ತುಗಳ ಆಫರ್ ಬೆಲೆ ನಿಗದಿಪಡಿಸಿದ ಬಳಿಕ ನಾವು ಅದನ್ನು ನಿಮ್ಮ ಗಮನಕ್ಕೆ ತರುತ್ತೇವೆ.

ಸ್ಮಾರ್ಟ್ಫೋನ್​ಗಳಲ್ಲದೆ, ಎಚ್ ಪಿ, ಎಲ್ ಜಿ, ಲೆನೊವೊ, ಎಮ್ ಐ, ಬೋಟ್, ಸ್ಯಾಮ್ಸಂಗ್, ಅಮೇಜ್ಫಿಟ್, ಫುಜಿಫಿಲ್ಮ್ ಮೊದಲಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ತಯಾರಿಸುವ ಕಂಪನಿಗಳ ಉತ್ಪಾದನೆಗಳ ಮೇಲೂ ಅಮೆಜಾನ್ ಭಾರಿ ಡಿಸ್ಕೌಂಟ್ ನೀಡುತ್ತಿದೆ.

TV9 Kannada


Leave a Reply

Your email address will not be published. Required fields are marked *