
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್
ಕಂಡವರ ಮಕ್ಕಳನ್ನು ಬಾವಿಗೆ ಹಾಕಿ ಆಳ ನೋಡಿದ್ರು. ತಮ್ಮ ಮಕ್ಕಳನ್ನು ವಿದೇಶದಲ್ಲಿ ಓದಿಸುತ್ತಿದ್ದಾರೆ. ಶಿಕ್ಷಣದಲ್ಲಿ ಸಂಪೂರ್ಣ ಕೇಸರಿಕರಣ ಮಾಡಲಾಗುತ್ತಿದೆ. ಹೆಡಗೇವಾರ್ ಅವರನ್ನು ಪಠ್ಯದಲ್ಲಿ ಸೇರಿಸಿ, ನಾರಾಯಣ ಗುರು, ಕುವೆಂಪು ಅವರನ್ನು ಬಿಟ್ಟಿದ್ದಾರೆ.
ಕಾರವಾರ: ಖಾಕಿ ಚಡ್ಡಿ ಕರಿ ಟೋಪಿಯಿಂದ ಯಾವ ಧರ್ಮ ಉಳಿಸೋಕೆ ಸಾಧ್ಯ. ಛಪ್ಪನ್ ಇಂಚ್ ಕಾ ಛಾತಿ ಹೊಂದಿರುವ ಮೋದಿಗೆ ಚೀನಾ ಎಂದು ಹೇಳಲು ಅವರಿಗೆ ಧೈರ್ಯವಿಲ್ಲ. ಮೋದಿ ಪ್ರಧಾನಿಯಾದ ಬಳಿಕ ಯಾವ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂದು ಹೇಳಲಿ ಎಂದು ಕುಮಟಾದ ಗಿಬ್ ಮೈದಾನದಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ. ಕರ್ನಾಟಕದಲ್ಲಿ 20 ಡ್ಯಾಂ ಕಾಂಗ್ರೆಸ್ ಕಟ್ಟಿದ್ರೆ, ಬಿಜೆಪಿ ಒಂದು ಕೆರೆನೂ ಕಟ್ಟಿಸಿಲ್ಲ. ಎಲ್ಲಾ ಜಾಗವನ್ನು ಬಿಜೆಪಿಯವರು ನುಂಗಿ ಹಾಕಿದ್ದಾರೆ. ಬಿಜೆಪಿ ಲೂಟಿ ಸರಕಾರ, ವೈಪಲ್ಯ ಮುಚ್ಚಿಸಲು ಧರ್ಮದ ನಡುವೆ ಬಿರುಕು ಮೂಡಿಸುತ್ತಾರೆ. ದೇಶದ ಪ್ರಪ್ರಥಮ ಉಗ್ರವಾದಿ ನಾಥೋರಾಮ್ ಗೋಡ್ಸೆ ಗಾಂದಿಯನ್ನು ಕೊಂದ. ಬಾಬರಿ ಮಸೀದಿ ಕೆಡವಿ ರಾಮ ಮಂದಿರ ನಿರ್ಮಿಸಿದ್ರು. ಆದರೆ, ಬಿಜೆಪಿಯವರು ಯಾರೂ ಪ್ರಾಣ ತ್ಯಾಗ ಮಾಡಿಲ್ಲ ಎಂದು ಹೇಳಿದರು.