ಮೃತ ವೃದ್ಧೆಯ ಹೆಬ್ಬೆಟ್ ಮುದ್ರೆ ಒತ್ತಿಸಿಕೊಂಡ ಸಂಬಂಧಿಕರು
ಮೈಸೂರು: ಖಾಲಿ ಪೇಪರ್ಗೆ ಮೃತಪಟ್ಟ ವೃದ್ಧೆ ಹೆಬ್ಬೆಟ್ ಮುದ್ರೆಯನ್ನು ಒತ್ತಿಸಿಕೊಂಡ ಘಟನೆ ಮೈಸೂರಿನ ಶ್ರೀರಾಂಪುರದಲ್ಲಿ ನಡೆದಿದೆ. ವೃದ್ಧೆ ಮೃತರಾಗಿದ್ದಾರೆ. ಆದರೆ ಮೃತ ಸಂಬಂಧಿಕರು ಈ ನಡುವೆ ಖಾಲಿ ಪೇಪರ್ಗೆ ಹೆಬ್ಬೆಟ್ ಮುದ್ರೆ ಒತ್ತಿಸಿಕೊಂಡಿದ್ದಾರೆ. ಖಾಲಿ ಪೇಪರ್ಗೆ ಮೃತ ವೃದ್ಧೆಯ ಮುದ್ರೆಯನ್ನು ಹಾಕಿಸಿಕೊಂಡ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಸುಮಾರು 11 ದಿನದ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಂಬಂಧಿಕರು ಮೃತ ವೃದ್ಧೆಯಿಂದ ಹೆಬ್ಬೆಟ್ ಮುದ್ರೆ ಹಾಕಿಸಿಕೊಳ್ಳುತ್ತಿದ್ದಾಗ ಮಹಿಳೆಯೊಬ್ಬರು ಪ್ರಶ್ನಿಸಿ, ಸಂಬಂಧಿಕರ ನಡೆಯನ್ನು ಮೋಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ. ವಿದ್ಯಾರಣ್ಯಾಪುರಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ವಿಡಿಯೋದಲ್ಲಿ ಇರುವವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ
‘ರೈಡ್ ಫಾರ್ ಅಪ್ಪು’: ಪುನೀತ್ ಸ್ಮರಣಾರ್ಥ ಬೈಕ್ ಮೆರವಣಿಗೆಗೆ ಸಿ.ಎನ್. ಅಶ್ವತ್ಥ ನಾರಾಯಣ ಚಾಲನೆ