ಖಾಸಗಿಯವರಿಗೆ ನೀರು ಪೂರೈಕೆ ಖಂಡಿಸಿ ಧಾರವಾಡದಲ್ಲಿ ಜಲಮಂಡಳಿ ನೌಕರರಿಂದ ಧರಣಿ! ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ | Water Board Employees at Dharwad protest against water supply to private


ಖಾಸಗಿಯವರಿಗೆ ನೀರು ಪೂರೈಕೆ ಖಂಡಿಸಿ ಧಾರವಾಡದಲ್ಲಿ ಜಲಮಂಡಳಿ ನೌಕರರಿಂದ ಧರಣಿ! ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ

ಖಾಸಗಿಯವರಿಗೆ ನೀರು ಪೂರೈಕೆ ಖಂಡಿಸಿ ಧಾರವಾಡದಲ್ಲಿ ಜಲಮಂಡಳಿ ನೌಕರರಿಂದ ಧರಣಿ! ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ

ಹುಬ್ಬಳ್ಳಿ: ಖಾಸಗಿಯವರಿಗೆ ನೀರು (Water) ಪೂರೈಕೆ ಮಾಡಿರುವುದನ್ನು ಖಂಡಿಸಿ ಜಲಮಂಡಳಿ ನೌಕರರು (Water Board Employees) ಇಂದು (ಮೇ 1) ಧರಣಿ ನಡೆಸಿದ್ದಾರೆ. ಜಲಮಂಡಳಿ ನೌಕರರ ಧರಣಿಗೆ ಕಾಂಗ್ರೆಸ್ ಬೆಂಬಲ ನೀಡಿದೆ. ಜಲಮಂಡಳಿ ಕಚೇರಿಯಿಂದ ಹೊರಟಿದ್ದ ಪಾದಯಾತ್ರೆಯನ್ನು ಪೊಲೀಸರು ತಡೆಯಲು ಮುಂದಾದರು. ಈ ವೇಳೆ ಪೊಲೀಸರು, ಪ್ರತಿಭಟನಾನಿರತರ ನಡುವೆ ವಾಗ್ವಾದ ನಡೆದಿದೆ. ವಾಗ್ವಾದ ನಡುವೆ ನೌಕರರು ಪಾದಯಾತ್ರೆ ಮುಂದುವರಿಸಿದ್ದಾರೆ. ರಾಯಾಪುರ ತಲುಪಿದ ಪಾದಯಾತ್ರೆಯಲ್ಲಿ ನೂರಾರು ನೌಕರರು ಭಾಗಿಯಾಗಿದ್ದಾರೆ. ನೀರು ಸರಬರಾಜು ಖಾಸಗೀಕರಣ ವಿರೋಧಿಸಿ ಪಾದಯಾತ್ರೆ ನಡೆಯುತ್ತಿದ್ದು, ಹುಬ್ಬಳ್ಳಿ ಸಿಎಂ ನಿವಾಸದೆದುರು ಪ್ರತಿಭಟಿಸಲು ನೌಕರರು ಹೊರಟಿದ್ದಾರೆ. ಪಾದಯಾತ್ರೆಗೆ ಕಾಂಗ್ರೆಸ್ ಮುಖಂಡರ ಸಾಥ್ ನೀಡಿದ್ದಾರೆ. ಸುಮಾರು 10 ಕಿಮೀ ಕ್ರಮಿಸಿದ ಪಾದಯಾತ್ರೆ, ರಾಯಾಪುರ ಬಳಿ ಊಟದ ವಿರಾಮ ನೀಡಿದ್ದು, ಬಳಿಕ ಪಾದಯಾತ್ರೆ ಮುಂದೆ ಸಾಗಿತ್ತು.

ಜಲಮಂಡಳಿ ನೌಕರರ ಪಾದಯಾತ್ರೆಗೆ ರಾಯಾಪುರ ಬಳಿ ಪೊಲೀಸರು ತಡೆದಿದ್ದಾರೆ. ಹುಬ್ಬಳ್ಳಿಯಲ್ಲಿರುವ ಸಿಎಂ ಮನೆಗೆ ಮುತ್ತಿಗೆ ಹಾಕಲು ಹೊರಟಿದ್ರು ಹುಬ್ಬಳ್ಳಿ ತಾಲೂಕು ಪ್ರವೇಶಕ್ಕೂ ಮೊದಲೇ ಪಾದಯಾತ್ರೆಗೆ ತಡೆಯಾಗಿದೆ. ರಾಯಾಪುರ ಸರ್ಕಲ್‌ನಲ್ಲೇ ಜಲಮಂಡಳಿ ನೌಕರರು ಧರಣಿ ಕುಳಿತ್ತಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ನಿತೇಶ್​​​ ಪಾಟೀಲ ಭೇಟಿ ನೀಡಿ ಜಲಮಂಡಳಿ ನೌಕರರ ಪಾದಯಾತ್ರೆಗೆ ಕಾಂಗ್ರೆಸ್ ಸಾಥ್ ನೀಡಿದೆ. ಖಾಸಗಿಯವರಿಗೆ ನೀರು ಪೂರೈಕೆ ನಿರ್ವಹಣೆ ನೀಡಿದ್ದಕ್ಕೆ ವಿರೋಧಿಸಿ ಧಾರವಾಡ ಜಲಮಂಡಳಿ ನಿರ್ಧಾರ ಖಂಡಿಸಿ ನೌಕರರು ಧರಣಿ ಮಾಡಿದ್ದಾರೆ.

ಅವಳಿ ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ: ಗದಗ-ಬೆಟಗೇರಿ ನಗರಸಭೆ ಗಪ್ ಚುಪ್​ 

ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿಲ್ಲದೇ ಜನರು ಗೋಳಾಡುತ್ತಿದ್ದಾರೆ. ಒಂದು ತಿಂಗಳಾಯ್ತು ಕುಡಿಯುವ ನೀರು ಪೂರೈಕೆ ಆಗದೇ ಜನರು ಪರದಾಡುತ್ತಿದ್ದಾರೆ. ಬೆಟಗೇರಿ ಗಣೇಶ ನಗರದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದ್ದು, ಕುಡಿಯುವ ನೀರಿನ ಸಮಸ್ಯೆ ತಲೆದೂರುತ್ತಿದ್ರೂ ನಗರಸಭೆ ಆಡಳಿತ ಡೋಂಟ್ ಕೇರ್ ಎನ್ನುತ್ತಿದ್ದಾರೆ. ನಗರಸಭೆಗೆ ಮುತ್ತಿಗೆ ಹಾಕಿ ಎಚ್ಚರಿಕೆ ನೀಡಿದ್ರೂ ಕುಡಿಯುವ ನೀರು ಪೂರೈಕೆ ಮಾಡಿಲ್ಲ ಅಂತ ಮಹಿಳೆಯರು ಖಾಲಿ‌ ಕೊಡಗಳ ಪ್ರದರ್ಶನ ಮಾಡಿ‌ ಮಹಿಳೆಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇಕೇ ಬೇಕು ನೀರು ಬೇಕು ಅಂತ ಘೋಷಣೆ ಕೂಗಿದ್ದಾರೆ. ಗದಗ-ಬೆಟಗೇರಿ ಅವಳಿ ನಗರದ ಬಹುತೇಕ ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಾಣವಾಗಿದ್ದು, ಗದಗ-ಬೆಟಗೇರಿ ನಗರಸಭೆ ಗಪ್ ಚುಪ್​ ಆಗಿದೆ.

ಇನ್ನಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

TV9 Kannada


Leave a Reply

Your email address will not be published. Required fields are marked *