‘ಖಾಸಗಿ ಆಸ್ಪತ್ರೆಗಳಲ್ಲಿ ಉಳಿಕೆಯಾದ ವ್ಯಾಕ್ಸಿನ್​ನ್ನು ರಾಜ್ಯಗಳಿಗೆ ಕೊಡಿ’- ಮೋದಿಗೆ ಆಂಧ್ರ ಸಿಎಂ ಮನವಿ

‘ಖಾಸಗಿ ಆಸ್ಪತ್ರೆಗಳಲ್ಲಿ ಉಳಿಕೆಯಾದ ವ್ಯಾಕ್ಸಿನ್​ನ್ನು ರಾಜ್ಯಗಳಿಗೆ ಕೊಡಿ’- ಮೋದಿಗೆ ಆಂಧ್ರ ಸಿಎಂ ಮನವಿ

ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಇಂದು ಪ್ರಧಾನಿ ಮೋದಿ ಜೊತೆ ನಡೆದ ವಿಡಿಯೋ ಮಾತುಕತೆಯಲ್ಲಿ ಖಾಸಗಿ ಆಸ್ಪತ್ರೆಗಳು ಬಳಸದೆ ಉಳಿಕೆಯಾಗುತ್ತಿರುವ ಕೊರೊನಾ ವ್ಯಾಕ್ಸಿನ್​ನ್ನು ಮರಳಿ ರಾಜ್ಯ ಸರ್ಕಾರಗಳಿಗೆ ಹಂಚಿಕೆ ಮಾಡಿ ಎಂದು ಮನವಿ ಮಾಡಿದ್ದಾರೆ.

ವಿಡಿಯೋ ಕಾನ್ಫರೆನ್ಸ್​ನಲ್ಲಿ ಮಾತನಾಡಿದ ಅವರು.. ಆಂಧ್ರಪ್ರದೇಶದ ಖಾಸಗಿ ಆಸ್ಪತ್ರೆಗಳಿಗೆ 17.71 ಲಕ್ಷ ಡೋಸ್ ಅಲಾಟ್ ಮಾಡಿದ್ದರೂ ಈವರೆಗೆ 4,20,209 ಡೋಸ್ ವ್ಯಾಕ್ಸಿನ್ ಅಷ್ಟೇ ಲಭ್ಯವಾಗಿದೆ. ಅಸಲಿಗೆ ಖಾಸಗಿ ಆಸ್ಪತ್ರೆಗಳು ಸರಿಯಾಗಿ ಸಂಪೂರ್ಣವಾಗಿ ವ್ಯಾಕ್ಸಿನೇಷನ್ ನಡೆಸುತ್ತಿಲ್ಲ. ಈ ಆಸ್ಪತ್ರೆಗಳು ಅದಕ್ಕೆ ಏನೇ ಸಮಜಾಯಿಷಿ ಕೊಡಬಹುದು.. ಆದ್ರೆ ಖಾಸಗಿ ಆಸ್ಪತ್ರೆಗಳು ಬಳಸದೆ ಉಳಿಕೆಯಾಗುತ್ತಿರುವ ವ್ಯಾಕ್ಸಿನ್​ನ್ನು ರಾಜ್ಯ ಸರ್ಕಾರಗಳಿಗೆ ನೀಡಿದ್ರೆ ಇದರಿಂದ ಸರ್ಕಾರಕ್ಕೆ ಸಹಾಯವಾಗಲಿದೆ ಎಂದಿದ್ದಾರೆ.

ಕೇಂದ್ರ ಸರ್ಕಾರ ನಮಗೆ ಈವರೆಗೆ 1,68,46,210 ಡೋಸ್​ಗಳನ್ನ ಅಲಾಟ್ ಮಾಡಲಾಗಿದ್ದು ನಾವು ಈವರೆಗೆ 1,76,70,642 ಮಂದಿಗೆ ವ್ಯಾಕ್ಸಿನ್ ನೀಡಿದ್ದೇವೆ. ನಮಗೆ ಪೂರೈಕೆಯಾದ ವ್ಯಾಕ್ಸಿನ್​ಗಿಂತಲೂ ಹೆಚ್ಚಿನ ಡೋಸ್ ನೀಡಲಾಗಿದೆ. ನಾವು ಉತ್ತಮವಾಗಿ ವ್ಯಾಕ್ಸಿನೇಷನ್ ನಡೆಸಿ ವ್ಯಾಕ್ಸಿನ್ ವೇಸ್ಟೇಜ್ ಆಗದಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.

The post ‘ಖಾಸಗಿ ಆಸ್ಪತ್ರೆಗಳಲ್ಲಿ ಉಳಿಕೆಯಾದ ವ್ಯಾಕ್ಸಿನ್​ನ್ನು ರಾಜ್ಯಗಳಿಗೆ ಕೊಡಿ’- ಮೋದಿಗೆ ಆಂಧ್ರ ಸಿಎಂ ಮನವಿ appeared first on News First Kannada.

Source: newsfirstlive.com

Source link