ಬೆಂಗಳೂರು: ಕೊರೊನಾ ಲಸಿಕೆ ವಿತರಣೆಯ ಸೇವಾ ಶುಲ್ಕವನ್ನ 100 ರಿಂದ 200 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.

ಈ ಹಿಂದೆ ಪ್ರತಿ ಡೋಸ್​​ಗೆ 100 ರೂಪಾಯಿಯನ್ನ ನಿಗದಿ ಮಾಡಲಾಗಿತ್ತು. ಆದ್ರೆ ಲಸಿಕೆ ನೀಡುವಿಕೆ ಶುಲ್ಕವನ್ನ ಪ್ರತಿ ಡೋಸ್​ಗೆ 300 ರೂಪಾಯಿಗೆ ಹೆಚ್ಚಿಸುವಂತೆ ಖಾಸಗಿ ಆಸ್ಪತ್ರೆಗಳು, ರಾಜ್ಯದ ಆರೋಗ್ಯ ಇಲಾಖೆಗೆ ಮನವಿ ಸಲ್ಲಿಸಿದ್ದವು. ಹೀಗಾಗಿ ಅಂತಿಮವಾಗಿ ಪ್ರತಿ ಡೋಸ್ ಲಸಿಕಾ ಶುಲ್ಕವನ್ನ, 100 ರಿಂದ 200 ರೂಪಾಯಿಗೆ ಹೆಚ್ಚಿಸಲಾಗಿದೆ ಅಂತ ಡಿಸಿಎಂ ಅಶ್ವತ್ ನಾರಾಯಣ್ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.

The post ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿ ಡೋಸ್ ಲಸಿಕೆಗೆ ಸೇವಾ ಶುಲ್ಕ ₹200ಕ್ಕೆ ಹೆಚ್ಚಳ appeared first on News First Kannada.

Source: newsfirstlive.com

Source link