ನವದೆಹಲಿ: ಖಾಸಗಿ ಆಸ್ಪತ್ರೆಗಳು ‘ಕೊರೊನಾ ವ್ಯಾಕ್ಸಿನ್​’ಗೆ ವಿಧಿಸುವ ಗರಿಷ್ಠ ಬೆಲೆಯನ್ನ ಕೇಂದ್ರ ಸರ್ಕಾರ ನಿಗದಿಪಡಿಸಿ ಆದೇಶ ಹೊರಡಿಸಿದೆ.

  1. ಕೋವಿಶೀಲ್ಡ್​ ಲಸಿಕೆಗೆ 780 ರೂಪಾಯಿ
  2. ಕೋವ್ಯಾಕ್ಸಿನ್ ಲಸಿಕೆಗೆ 1,410 ರೂಪಾಯಿ
  3. ಸ್ಪುಟ್ನಿಕ್ ವ್ಯಾಕ್ಸಿನ್​ಗೆ 1,145 ರೂಪಾಯಿ

 

ಈ ಮೂರು ವ್ಯಾಕ್ಸಿನ್​ಗಳಿಗೆ ಕೇಂದ್ರ ಸರ್ಕಾರ ಇಂದು ಬೆಲೆ ನಿಗದಿ ಮಾಡಿ ಆದೇಶ ಹೊರಡಿಸಿದೆ. ಸರ್ಕಾರ ನಿಗದಿ ಮಾಡಿರುವ ಈ ದರದೊಳಗೆ ಟ್ಯಾಕ್ಸ್ ಮತ್ತು ಸೇವಾ ಶುಲ್ಕ ಕೂಡ ಹೊಂದಿರುತ್ತದೆ. ಯಾವುದೇ ಕಾರಣಕ್ಕೂ ಸೇವಾ ಶುಲ್ಕವನ್ನ ಮತ್ತೆ ಪಡೆಯುವಂತಿಲ್ಲ ಎಂದು ಹೇಳಿದೆ.

ಇನ್ನು ನಿನ್ನೆಯಷ್ಟೇ ಕೇಂದ್ರ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಶೇಕಡಾ 25 ರಷ್ಟು ವ್ಯಾಕ್ಸಿನ್ ಖರೀದಿಸಲು ಅವಕಾಶ ಮಾಡಿಕೊಟ್ಟಿದೆ. ಜೊತೆಗೆ ಸರ್ವೀಸ್ ಚಾರ್ಜ್​ 150 ರೂಪಾಯಿಗಿಂತ ಹೆಚ್ಚು ವಿಧಿಸುವಂತಿಲ್ಲ ಎಂದು ಖಡಕ್​ ಆಗಿ ಸೂಚನೆ ನೀಡಿದೆ. ಅದರಂತೆ ಇಂದು ಸೇವಾ ಶುಲ್ಕವನ್ನ ಸೇರಿ ಒಟ್ಟು ಗರಿಷ್ಠ ದರವನ್ನ ನಿಗದಿ ಮಾಡಿದೆ.

The post ಖಾಸಗಿ ಆಸ್ಪತ್ರೆಗಳಿಗೆ ವ್ಯಾಕ್ಸಿನ್ ಗರಿಷ್ಠ ಬೆಲೆ ನಿಗದಿ; ಯಾವ ಲಸಿಕೆಗೆ ಎಷ್ಟು ರೂಪಾಯಿ? appeared first on News First Kannada.

Source: newsfirstlive.com

Source link