ಬೆಂಗಳೂರು: ಇಂದು ನಡೆದ ಕ್ಯಾಬಿನೆಟ್ ಮೀಟಿಂಗ್​​ನಲ್ಲಿ ಆರೋಗ್ಯ ಇಲಾಖೆ ಏನೆಲ್ಲಾ ಚರ್ಚೆ ನಡೆದಿದೆ ಎಂಬುದರ ಬಗ್ಗೆ ಸುದ್ದಿಗೋಷ್ಟಿ ನಡೆಸಿದ ಆರೋಗ್ಯ ಸಚಿವ ಡಾ. ಸುಧಾಕರ್ ಮಾಹಿತಿ ನೀಡಿದರು.

ಸುಧಾಕರ್ ಸುದ್ದಿಗೋಷ್ಟಿಯ ಮುಖ್ಯಾಂಶಗಳು..

  • ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ನೀಡಲು ಸಿಎಂ ಈಗಾಗಲೇ ಘೋಷಿಸಿದ್ದಾರೆ.
  • ಎರಡನೇ ಅಲೆ ರೀತಿ 3 ನೇ ಅಲೆ 4 ನೇ ಅಲೆ ಬರಬಹುದು. ಅದನ್ನ ತಡೆಯಬೇಕಾದಲ್ಲಿ 18 ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಸಿಗುವಂತಾಗಬೇಕು ಎಂದು ಸಂಪುಟದಲ್ಲಿ ನಿರ್ಧರಿಸಲಾಗಿದೆ.
  • ರೂಪಾಯಿ ಲಸಿಕೆಗಾಗಿ 400 ಕೋಟಿ ಮೀಸಲಿಡಲು ಸಂಪುಟ ಸಭೆಯಲ್ಲಿ ಒಕ್ಕೊರಲಿನಿಂದ ತೀರ್ಮಾನ ಮಾಡಲಾಗಿದೆ. ಪ್ರತಿಯೊಬ್ಬರಿಗೂ ಲಸಿಕೆ ನೀಡುವುದು ನಮ್ಮ ಕರ್ತವ್ಯ.
  • ಖಾಸಗಿ ಆಸ್ಪತ್ರೆಗಳು ಒಪ್ಪಂದದ ಪ್ರಕಾರ 4,500 ಹಾಸಿಗೆ ನೀಡಬೇಕಿತ್ತು. 3,500 ಹಾಸಿಗೆ ಮಾತ್ರ ಕೋವಿಡ್‌ಗೆ ನೀಡಿದ್ದಾರೆ. 1000 ಹಾಸಿಗೆಗಳನ್ನು ನೀಡುವುದು ಇನ್ನೂ ಬಾಕಿಯಿದೆ.
  • ಪ್ರತಿ ಝೋನ್‌ಗೆ IAS, IPS ನೇಮಕ ಮಾಡಲಾಗಿದೆ.
  • ಮೊದಲ ಅಲೆಯಲ್ಲಿ ದಿನಕ್ಕೆ 4,500 ಕೇಸ್‌ ಬರ್ತಿತ್ತು.. 2ನೇ ಅಲೆಯಲ್ಲಿ 5 ಪಟ್ಟು ಸೋಂಕು ಹೆಚ್ಚಾಗಿದೆ ಹೀಗಾಗಿ ಬೆಡ್​ಗಳು, ಆಕ್ಸಿಜನ್, ವೆಂಟಲೇಟರ್​​ ಸಮಸ್ಯೆ ಎದುರಾಗಿವೆ.
  • ಆಸ್ಪತ್ರೆಗಳು ರಾಜಕೀಯ ಪ್ರಭಾವಕ್ಕೆ ಒಳಗಾಗಬಾರದು.. ಅಗತ್ಯವಿದ್ದವರಿಗೆ ಚಿಕಿತ್ಸೆ ಸಿಗುವಂತಾಗಬೇಕು.. ಚಿಕಿತ್ಸೆಗೆ ಬೇಕಾದವರಿಗೆ ಹಾಸಿಗೆ ಸಿಗದೇ ತೊಂದರೆ ಅನುಭವಿಸುವಂತಾಗಿದೆ. . ಆತಂಕದಿಂದ ಬಂದು ದಾಖಲಾಗುವವರನ್ನು ದಾಖಲಿಸಿಕೊಳ್ಳಬಾರದು
  • ಇಂದು ಸರ್ಕಾರ ಅಚಲ ನಿರ್ಧಾರ ಮಾಡಿದೆ, 30 ಹಾಸಿಗೆ ಮೇಲಿರುವ ಎಲ್ಲ ಆಸ್ಪತ್ರೆಗಳೂ ಶೇಕಡಾ 75 ಪರ್ಸೆಂಟ್​ನಷ್ಟು ಹಾಸಿಗೆಗಳನ್ನು ಕೋವಿಡ್​ಗೆ ಮೀಸಲಿಡಬೇಕು.
  • ಆರ್​ಟಿಪಿಸಿಆರ್​ ನಲ್ಲಿ ಕೆಲವರಿಗೆ ನೆಗೆಟಿವ್ ಬರ್ತಿದೆ. ಆದ್ರೆ ಸಿಟಿ ರಿಪೋರ್ಟ್​ನಲ್ಲಿ ಪಾಸಿಟಿವ್ ಬರ್ತಿದೆ. ಆರ್​ಟಿಪಿಸಿಆರ್​ನಲ್ಲಿ ನೆಗೆಟಿವ್ ಬಂದಿದ್ರೆ ಕೋವಿಡ್ ಸಿಂಡ್ರೋಮ್ ಎಂದು ಗುರುತಿಸಿ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. ಅದಕ್ಕೆ ಈಗಾಗಲೇ ಮಾರ್ಗಸೂಚಿ ಬಿಡುಗಡೆ ಮಾಡಿದ್ದೇವೆ
  • ಕ್ಯಾಬಿನೆಟ್​ನಲ್ಲಿ ಎಷ್ಟು ಮೆಡಿಸಿನ್ ಬೇಕೆಂದು ಅಂದಾಜು ಮಾಡಿ ಕ್ಯಾಬಿನೆಟ್​ನಿಂದ ಅನುಮತಿ ಪಡೆದಿದ್ದೇವೆ. ಬೆಂಗಳೂರಿನ ವಿಕ್ಟೋರಿಯಾ ಬೌರಿಂಗ್​ನಲ್ಲಿ 250 ಹಾಸಿಗೆಗಳನ್ನು ಹೆಚ್ಚಿಸಲು ಸೂಚನೆ ನೀಡಲಾಗಿದೆ. 2,500 ರಿಂದ 3000 ಹಾಸಿಗೆಗಳು ಸೂಪರ ಸ್ಟೆಷಾಲಿಟಿ ಆಸ್ಪತ್ರೆಗಳಲ್ಲಿ ಹೆಚ್ಚಲಿವೆ.

The post ಖಾಸಗಿ ಆಸ್ಪತ್ರೆಗಳು ಶೇಕಡಾ 75% ಬೆಡ್​ಗಳನ್ನು ಕೋವಿಡ್​ಗೆ ಮೀಸಲಿಡಬೇಕು- ಸುಧಾಕರ್ appeared first on News First Kannada.

Source: News First Kannada
Read More