ಚೆನ್ನೈ: ಖ್ಯಾತ ತಮಿಳು ನಟ ವಿವೇಕ್ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ವರದಿಗಳ ಅನುಸಾರ ಅವರನ್ನು ಚೆನ್ನೈನ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಟನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ವಿವೇಕ್ ಪ್ರಸ್ತುತ ತೀವ್ರ ನಿಗಾ ಘಟಕ (ಐಸಿಯು) ದಲ್ಲಿದ್ದಾರೆ ಅಲ್ಲಿ ಹೃದ್ರೋಗ ತಜ್ಞರ ತಂಡವು ಅವರನ್ನು ನಿರಂತರವಾಗಿ ಗಮನಿಸುತ್ತಿದೆ.

ಇನ್ನು ಗುರುವಾರವಷ್ಟೇ ವಿವೇಕ್ ಅವರು ಕೊರೋನಾವೈರಸ್ ಲಸಿಕೆ ಪಡೆದಿದ್ದರು.. ಲಸಿಕೆ ಪಡೆದ ನಂತರ, ವಿವೇಕ್, ಅರ್ಹರಾದ ಜನರು, ಕೋವಿಡ್  19 ಲಸಿಕೆಗಳನ್ನು ಪಡೆಯುವಂತೆ ಮನವಿ ಸಹ ಮಾಡಿದ್ದರು.  ಸಾಂಕ್ರಾಮಿಕ ರೋಗದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಕಟ್ಟುನಿಟ್ಟಾದ ಸಾಮಾಜಿಕ ಅಂತರ ಅನುಸರಿಸಬೇಕೆಂದು ಅವರು ಜನರಿಗೆ ಕರೆ ನೀಡಿದ್ದರು.

ವಿವೇಕ್ ಅವರನ್ನು ತಮಿಳು ಚಲನಚಿತ್ರೋದ್ಯಮದ ಅತ್ಯಂತ ಪ್ರತಿಭಾವಂತ ನಟ ಎಂದು ಪರಿಗಣಿಸಲಾಗಿದೆ.  ಅವರು 220 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ, ಮತ್ತು ಸಿನಿರಂಗಕ್ಕೆ ನೀಡಿದ ಕೊಡುಗೆಗಾಗಿ ಭಾರತ ಸರ್ಕಾರ ಅವರಿಗೆ 2009 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More