ಖ್ಯಾತ ನಟನಿಗೆ ಇದೆಂಥಾ ಗತಿ? ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಡಿಯೋ ನೋಡಿ ಕಣ್ಣೀರಿಟ್ಟ ಫ್ಯಾನ್ಸ್​​​ | Powerstar srinivasan admitted to hospital and video goes viral rmd


ಖ್ಯಾತ ನಟನಿಗೆ ಇದೆಂಥಾ ಗತಿ? ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಡಿಯೋ ನೋಡಿ ಕಣ್ಣೀರಿಟ್ಟ ಫ್ಯಾನ್ಸ್​​​

ತಮಿಳಿನ ಖ್ಯಾತ ಹಾಸ್ಯ ನಟ ‘ಪವರ್​ಸ್ಟಾರ್’​ ಶ್ರೀನಿವಾಸನ್ (Powerstar Srinivasan )​​ ಅವರು ಆಸ್ಪತ್ರೆಗೆ ದಾಖಲಾಗಿ ಕೆಲ ತಿಂಗಳು ಕಳೆದಿದೆ. ಇತ್ತೀಚೆಗೆ ಅವರಿಗೆ ಆರೋಗ್ಯ ತುಂಬಾನೇ ಕೈಕೊಟ್ಟಿದೆ. 2010ರಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿರುವ ಶ್ರೀನಿವಾಸನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ದೇಹ ಸಂಪೂರ್ಣ ಕುಗ್ಗಿ ಹೋಗಿದೆ. ಮತ್ತೊಬ್ಬರ ಸಹಾಯವಿಲ್ಲದೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳಲೂ ಆಗದೆ ಇರುವ ಪರಿಸ್ಥಿತಿಗೆ ಬಂದು ನಿಂತಿದ್ದಾರೆ. ಈ ವಿಡಿಯೋಗಳು ಈಗ ವೈರಲ್​ ಆಗಿದೆ. ಈ ಬಗ್ಗೆ ಕುಟುಂಬದವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ, ಈ ವಿಡಿಯೋ ನೋಡಿದ ಅಭಿಮಾನಿಗಳು ತುಂಬಾನೇ ಬೇಸರಗೊಂಡಿದ್ದಾರೆ. ಇನ್ನೂ ಕೆಲವರು ಕಣ್ಣೀರು ಹಾಕಿದ್ದಾರೆ. ನಟನ ಈ ಸ್ಥಿತಿ ನೋಡಿ ಕೆಲವರು ಸಹಾಯಕ್ಕೂ ಮುಂದೆ ಬಂದಿದ್ದಾರೆ.

ಕೆಲ ತಿಂಗಳ ಹಿಂದೆ ಶ್ರೀನಿವಾಸನ್​ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ರಕ್ತದ ಒತ್ತಡದಲ್ಲಿ ಏರುಪೇರಾಗಿದ್ದು ಇದಕ್ಕೆ ಪ್ರಮುಖ ಕಾರಣವಾಗಿತ್ತು. ಇಷ್ಟೇ ಆಗಿದ್ದರೆ ಅವರು ಆಸ್ಪತ್ರೆಯಿಂದ ಬಿಡುಗಡೆ ಹೊಂದಬೇಕಿತ್ತು. ಆದರೆ, ಅವರಿಗೆ ನಿಜಕ್ಕೂ ಆಗಿದ್ದೇನು ಎನ್ನುವ ವಿಚಾರವನ್ನು ಯಾರೂ ಬಿಟ್ಟುಕೊಟ್ಟಿಲ್ಲ. ಈ ಬಗ್ಗೆ ಆಸ್ಪತ್ರೆಯವರು ಕೂಡ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಇದು ಫ್ಯಾನ್ಸ್​ ಆತಂಕಕ್ಕೆ ಕಾರಣವಾಗಿದೆ. ಈ ಬೆನ್ನಲ್ಲೇ ಅವರ ವಿಡಿಯೋ ವೈರಲ್​ ಆಗಿದ್ದು ನೋಡಿ ಫ್ಯಾನ್ಸ್​ ನೊಂದುಕೊಂಡಿದ್ದಾರೆ. ಈ ಬಗ್ಗೆ ಕುಟುಂಬದವರು ಯಾವ ರೀತಿಯ ಅಪ್​ಡೇಟ್​ ನೀಡುತ್ತಾರೆ ಎಂದು ಕಾದು ಕೂತಿದ್ದಾರೆ.

ಶ್ರೀನಿವಾಸನ್​ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದರು. 2010ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಸಣ್ಣಪುಟ್ಟ ಪಾತ್ರಗಳಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದರು. ನಂತರ ಸಿನಿಮಾವನ್ನು ತಾವೇ ನಿರ್ಮಾಣ ಮಾಡಿ ಅದರಲ್ಲಿ ಹೀರೋ ಆಗಿ ನಟಿಸಿದರು. 2011ರಲ್ಲಿ ಬಿಡುಗಡೆಯಾದ ಈ ಸಿನಿಮಾಗೆ ‘ಲಥಿಕಾ’ ಎಂದು ಹೆಸರಿಡಲಾಗಿತ್ತು. ನಂತರ ಅವರಿಗೆ ಸಾಲುಸಾಲು ಸಿನಿಮಾ ಆಫರ್​ಗಳು ಬಂದವು. ಕಾಮಿಡಿಯನ್​ ಆಗಿ ಶ್ರೀನಿವಾಸನ್​ ಹೆಚ್ಚು ಗುರುತಿಸಿಕೊಂಡರು.

ಇದನ್ನೂ ಓದಿ: ವಿಕ್ಕಿ ಕೌಶಲ್​ಗಿಂತ ಕತ್ರಿನಾ ಕೈಫ್​ ಎಷ್ಟು ವರ್ಷ ದೊಡ್ಡವರು? ಮದುವೆಗೆ ಅಡ್ಡಿ ಆಗಲಿಲ್ಲ ವಯಸ್ಸಿನ ಅಂತರ

ಅಂಡರ್​​​ವಾಟರ್​​ನಲ್ಲಿ ಲಿಪ್​ಲಾಕ್​ ಮಾಡಿದ ಪ್ರೆಗ್ನೆಂಟ್ ನಟಿ; ​ಫೋಟೋ ವೈರಲ್

TV9 Kannada


Leave a Reply

Your email address will not be published. Required fields are marked *