ಉತ್ತರ ಪ್ರದೇಶ: ಕೊರೊನಾ ಕಾಲದಲ್ಲಿ ಪವಿತ್ರ ಗಂಗೆಗೆ ಪದೇ ಪದೇ ಪರೀಕ್ಷೆಗಳು ಎದುರಾಗ್ತಾಯಿದೆ. ಈಗ ಗಂಗೆಯ ತಟದಲ್ಲಿ ರಾಶಿ ರಾಶಿ ಮೃತ ದೇಹಗಳು ತೇಲಿ ಬರ್ತಾಯಿದ್ದು, ಆ ಕೋವಿಡ್​ ಮೃತದೇಹಗಳಿಂದಲೇ ಉತ್ತರಭಾರತದಲ್ಲಿ ಕೊರೊನಾ ಹೆಚ್ಚಾಗ್ತಿದೆ ಎನ್ನಲಾಗಿದೆ.

ಗಂಗೆ.. ಹಿಂದೂಗಳ ಭಾವನೆಯ ಪ್ರತೀಕ. ಉತ್ತರ ಭಾರತದ ಜೀವನದಿಯೂ ಹೌದು. ಆಧ್ಯಾತ್ಮಿಕತೆಯ ಮಡಿಲು ಹೌದು. ಗಂಗೆ ಹಿಮಾಲಯದಿಂದ ಇಳಿದಿಳಿದು ಬರುತ್ತಿದ್ದರೆ ಅದು ಬೇರೆಲ್ಲ ನದಿಗಳಿಗಿಂತ ಭಿನ್ನವಾಗಿಯೇ ಕಾಣುತ್ತೆ. ಗಂಗೆಯ ಪವಿತ್ರ ಜಲ, ಹಿಂದುಗಳ ಮನೆ ಮನೆಗಳಲ್ಲೂ ಇಟ್ಟುಕೊಳ್ಳೋದು ಸಂಪ್ರದಾಯ. ಆದ್ರೆ, ಕೊರೊನಾ ಕಾಲದಲ್ಲಿ ಗಂಗೆಯ ತಟದಲ್ಲಿ  ಶವಗಳ ರಾಶಿ ತೇಲಿ ಬರುತ್ತಿರೋದನ್ನ ಕಂಡು ನಿಜಕ್ಕೂ ಆತಂಕ ಶುರುವಾಗಿದೆ.

ದಶಕಗಳಿಂದ ಗಂಗಾ ನದಿಯಲ್ಲಿ ಬೆಳೆದು ಬಂದ ನಾಗರಿಕತೆ, ಈಗಿನ ಜನಸಂಖ್ಯೆ, ಬೆಳೆಯುತ್ತ ಹೋದ ನಗರ, ಪಟ್ಟಣಗಳ ಕಲುಷಿತ ನೀರು, ಗಂಗೆಯ ದಡದಲ್ಲೇ ನೆಲೆ ನಿಂತ ಕಾರ್ಖಾನೆಗಳ ತ್ಯಾಜ್ಯ ಎಲ್ಲವೂ ಸೇರುತ್ತಿದೆ. ಹೀಗಾಗಿ ಗಂಗಾ ನದಿಯನ್ನ ಸ್ವಚ್ಛ ಮಾಡಲು ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದ ಕಾಲದಿಂದಲೂ ಪ್ರಯತ್ನ ನಡೀತಾನೇ ಇದೆ. ಆದರೆ ಗಂಗೆಯ ನೀರು ಸ್ವಚ್ಛವಾಗಿಲ್ಲ. ಗಂಗೆಯಲ್ಲಿ ಮಾಲಿನ್ಯ ಕಡಿಮೆ ಆಗುತ್ತಿಲ್ಲ. ಕೋವಿಡ್​ ಮೊದಲನೇ ಅಲೆಯಲ್ಲಿ ಮೃತರಾದ ಸೋಂಕಿತರ ಶವವನ್ನ ನದಿಗೆ ಹಾಕಿ ಹೋಗ್ತಿದ್ದಾರೆ. ಈ ಕೃತ್ಯವನ್ನು ಎಸಗಿದವರು ಯಾರು ಎನ್ನುವುದು ಇಲ್ಲಿವರೆಗೂ ತಿಳಿದಿಲ್ಲ. ಅಥವಾ ಆ ಮೃತದೇಹವನ್ನು ಗುರುತಿಸಲಾಗಲಿಲ್ಲ. ಆದರೆ ಅಲ್ಲಿ ಸಿಕ್ಕ ಸೋಂಕಿತನ ಶವದಿಂದಲೇ ಬಿಹಾರ್ ಹಾಗೂ ಉತ್ತರ ಪ್ರದೇಶದಲ್ಲಿ ವೈರಸ್ ಹರಡಿರುವ ಅನುಮಾನಗಳು ಹೆಚ್ಚಾಗಿ ಕಾಡುತ್ತಿವೆ.

ಬಿಹಾರ್ ಹಾಗೂ ಉತ್ತರ ಪ್ರದೇಶದಲ್ಲಿ ಕೋವಿಡ್ ಎರಡನೇ ಅಲೆ ಹೆಚ್ಚಾಗಿ ಕಾಣಿಸತೊಡಗಿದವು. ಸೋಂಕಿತರ ಸಂಖ್ಯೆಯಲ್ಲೂ ಹೆಚ್ಚಾಗಿ, ಸಾವಿನ ಪ್ರಮಾಣದಲ್ಲಿ ಈ ಎರಡು ರಾಜ್ಯ ಎಲ್ಲರಿಗಿಂತ ಮುಂದು ಎಂಬಂತೆ ಸಾಗುತ್ತಿತ್ತು. ಈ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದ ಅಲ್ಲಿನ ಜನತೆಗೆ ಇದು ಗಂಗಾ ನದಿಯಲ್ಲಿ ಹರಿದುಬಂದ ಸೋಂಕಿತ ಶವಗಳಿಂದ ಹರಡಿದೆ ಎನ್ನುವ ಅನುಮಾನಗಳು ಶುರುವಾದವು. ಕಾರಣ ಅಲ್ಲಿನ ಸುತ್ತ ಮುತ್ತಲಿನ ಊರು, ಗ್ರಾಮ ಹಾಗೂ ನಗರಗಳಿಗೆ ಇದೇ ಗಂಗಾ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಹೀಗಾಗಿ, ಸೋಂಕಿತನ ಶವದಿಂದ ವೈರಸ್ ನೀರಿನಲ್ಲಿ ಸೇರಿ ಮನೆಮನೆಯ ನಲ್ಲಿಗಳಲ್ಲಿ ಹರಿದು ಬಂದಿರುವುದೇ ಎರಡನೇ ಅಲೆ ಹೆಚ್ಚಾಗಿ ಈ ರಾಜ್ಯದಲ್ಲಿ ಕಾಣಿಸಿರೋದಕ್ಕೆ ಕಾರಣವಿರಬಹುದು ಎನ್ನಲಾಗಿದೆ.

ನೀರನ್ನ ಪರೀಕ್ಷೆ ಮಾಡಿಸಿ ಎಂದು ಆದೇಶ
ವೈರಸ್ ಇರೋ ಆ ನೀರು ಸೇವಿಸಿದ ಎಲ್ಲರಿಗೂ ಸೋಂಕು ಹರಡಿದೆಯಾ? ಎಂದು ಇಡೀ ಗ್ರಾಮ ಆತಂಕಕ್ಕೀಡಾಯಿತು. ಇದೇ ಆತಂಕ ಸರ್ಕಾರಕ್ಕೂ ಶುರುವಾದ ಬೆನ್ನಲ್ಲೆ ತಕ್ಷಣವೇ ತಜ್ಞರ ಕಮಿಟಿ ರಚಿಸಿ, ಆ ನೀರನ್ನು ಪರೀಕ್ಷಿಸಲು ಹೇಳಲಾಗಿತ್ತು. ಹೀಗಾಗಿ, ಗಂಗಾ ನದಿಯಲ್ಲಿ ಕೊರೊನಾ ವೈರಸ್ ಇರಬಹುದಾ ಎನ್ನುವ ಅಧ್ಯಯನಕ್ಕೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟಾಕ್ಸಿಕಾಲಜಿ ರಿಸರ್ಚ್​ನ ನಿರ್ದೇಶಕ ಸರೋಜ್ ಬಟ್ಕಿ ಎನ್ನುವವರ ಮುಂದಾಳತ್ವದಲ್ಲಿ ಒಂದು ಕಮಿಟಿ ರಚನೆ ಆಗಿದೆ. ನದಿ ಹರಿಯುವ ಪ್ರದೇಶಗಳಿಗೆ ತೆರಳಿ, ಆ ನೀರಿನ ಸ್ಯಾಂಪಲ್ ಕಲೆಕ್ಟ್ ಮಾಡಿ ಆರ್ಟಿಪಿಸಿಆರ್ ಪರೀಕ್ಷೆ ನಡೆಸಲಾgಇದೆ. ಈಗಾಗ್ಲೆ ಈ ಟೀಂ ಕಾರ್ಯ ನಿರ್ವಹಿಸುತ್ತಲಿದ್ದು, ಕುನ್ನಾಜ್​​​​ನಿಂದ ಪಾಟ್ನವರೆಗೂ 13 ಪ್ರದೇಶಗಳಲ್ಲಿ ಗಂಗಾ ನದಿಯ ಸ್ಯಾಂಪಲ್ ಕಲೆಕ್ಟ್ ಮಾಡಿ ಟೆಸ್ಟ್​​ಗೆ ಒಳಪಡಿಸಲಾಗಿದೆ.

ನೀರಿನಲ್ಲಿ ವೈರಸ್​ನ ಯಾವುದಾದರು ಆರ್ಎನ್ಎ ಕಾಣಿಸಿದರೆ ಅದನ್ನು ಆರ್ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗುವುದು ಎನ್ನತ್ತಿದ್ದಾರೆ ಅಧ್ಯಯನ ಮಾಡುತ್ತಿರುವ ತಜ್ಞರು. ಕೊರೊನಾ ವೈರಸ್ ದೇಹವನ್ನು ಬಿಟ್ಟು ದೂರಾದ ಮೇಲೆ ತುಂಬ ಹೊತ್ತು ಜೀವಿಸಲು ಸಾಧ್ಯವಿಲ್ಲ. ಈ ವೈರಸ್ ಮತ್ತೆ ತನ್ನ ರೂಪವನ್ನು ತೋರಿಸಲು ಇನ್ನೊಂದು ಜೀವದ ಸಪೋರ್ಟ್ ಬೇಕಾಗುತ್ತದೆ. ಈ ರಿಪೋರ್ಟ್ ನಿಂದ ತಿಳಿಯುವುದೇನೆಂದರೆ ನದಿಯಲ್ಲಿ ವೈರಸ್ ಇರಲು ಸಾಧ್ಯವಿಲ್ಲ. ಆದರು ತಜ್ಞರು ಪರೀಕ್ಷೆ ಮಾಡಲು ಮುಂದಾಗಿರುವ ಕಾರಣ, ನದಿಯಲ್ಲಿರುವ ಮೀನುಗಳು ವೈರಸ್ ಸೇವಿಸಿ, ಮೀನಿಂದ ಮಾನವರಿಗೆ ಬರಬಹುದು ಎನ್ನುವ ಒಂದು ಅನುಮಾನ ಇದೆ.

The post ಗಂಗಾಮಾತೆಗೂ ನಡೆಸಿಬಿಟ್ಟರೂ RTPCR ಪರೀಕ್ಷೆ.. ರಿಸಲ್ಟ್​ ಏನಾಯ್ತು? appeared first on News First Kannada.

Source: newsfirstlive.com

Source link