ಭಾರತೀಯಾ ಕ್ರಿಕೆಟ್​​ ಇತಿಹಾಸದಲ್ಲಿ ಮಾಜಿ ನಾಯಕ ಸೌರವ್​ ಗಂಗೂಲಿಗೆ ಮಹತ್ವದ ಸ್ಥಾನವಿದೆ. ಮ್ಯಾಚ್​​ ಫಿಕ್ಸಿಂಗ್​ ಕಳಂಕ ಅಂಟಿಕೊಂಡ ಸಂದರ್ಭದಲ್ಲಿ ಇಡೀ ವಿಶ್ವವೇ, ಭಾರತೀಯ ಕ್ರಿಕೆಟ್​​ ಅನ್ನ ಕೊಂಡಾಡುವಂತೆ ಮಾಡಿದ್ದು ಗಂಗೂಲಿ ಅಂದ್ರೆ ತಪ್ಪಾಗಲ್ಲ.!!! ಆದ್ರೆ ಈ ಸಾಧನೆಯೊಂದಿಗೆ ಕೋಚ್​ ಜೊತೆಗಿನ ತಿಕ್ಕಾಟವೂ ಗಂಗೂಲಿ ಕರಿಯರ್​ನ ಕಪ್ಪುಚುಕ್ಕೆ. ಅಂದಿನ ಕೋಚ್​​ ಗ್ರೇಗ್​ ಚಾಪೆಲ್​, ಗಂಗೂಲಿ ನಡುವಿನ ತಿಕ್ಕಾಟ ವಿವಾದದ ಕಿಡಿಯನ್ನೇ ಹೊತ್ತಿಸಿತ್ತು. ಇದೀಗ ಈ ವಿವಾದದ ಬಗ್ಗೆ ಕೋಚ್​​ ಚಾಪೆಲ್​ ಮತ್ತೇ ಮಾತನಾಡಿರೋದು ಚರ್ಚೆಗೆ ಕಾರಣವಾಗಿದೆ.

ಈ ವಿವಾದದ ಬಗ್ಗೆ ಮಾತನಾಡಿರುವ ಚಾಪೆಲ್​, ‘ಸೌರವ್​ ಗಂಗೂಲಿಗೆ ನಾಯಕತ್ವದ ಹುಚ್ಚಿತ್ತು. ಎಲ್ಲಾ ಆಟಗಾರರು ತನ್ನ ಹಿಡಿಡತದಲ್ಲಿರಬೇಕೆಂದು ಬಯಸಿದ್ರು. ಆದ್ರೆ ವ್ಯಯಕ್ತಿಕವಾಗಿ ಬ್ಯಾಟಿಂಗ್​ ಬಗ್ಗೆ ಅವರು ಗಮನ ಹರಿಸುತ್ತಿರಲಿಲ್ಲ. ಆತ ಕೇವಲ ತಂಡದ ನಾಯಕನಾಗಿರಬೇಕು ಎಂದು ಬಯಸಿದ್ದರು ಎಂದು ಚಾಪೆಲ್​ ಹೇಳಿದ್ದಾರೆ. ಪಾಡ್​​ಕಾಸ್ಟ್​​ವೊಂದರಲ್ಲಿ ಮಾತನಾಡಿರುವ ಚಾಪೆಲ್​, ಸೆಹ್ವಾಗ್​, ದ್ರಾವಿಡ್​​, ಕುಂಬ್ಳೆ, ಸಚಿನ್​ ಜೊತೆಗೆ ಕಾರ್ಯ ನಿರ್ವಹಿಸಿದ್ದು ನನಗೆ ಖುಷಿ ನೀಡಿದೆ ಎಂದೂ ಹೇಳಿದ್ದಾರೆ.

The post ಗಂಗೂಲಿಗೆ ಆಟಗಾರರನ್ನ ಕಂಟ್ರೋಲ್ ಮಾಡಲು ನಾಯಕತ್ವ ಬೇಕಿತ್ತು…! ಗ್ರೇಗ್ ಚಾಪೆಲ್ appeared first on News First Kannada.

Source: newsfirstlive.com

Source link