ಸೌರವ್​ ಗಂಗೂಲಿಗೆ ನಾಯಕತ್ವದ ಹುಚ್ಚಿತ್ತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ, ಇದೀಗ ರಾಹುಲ್​ ದ್ರಾವಿಡ್​ರನ್ನು ನಾಯಕನ್ನಾಗಿ ಮಾಡಿದ್ದೇಕೆ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಗ್ರೆಗ್​ ಚಾಪೆಲ್ ಬಹಿರಂಗಪಡಿಸಿದ್ದಾರೆ. 2007ರ ಏಕದಿನ ವಿಶ್ವಕಪ್​​​ನಲ್ಲಿ ಗ್ರೂಪ್​ ಹಂತದಿಂದಲೇ ಹೊರಬಿದ್ದ ಭಾರತದ ಕೋಚ್​ ಆಗಿದ್ದ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಗ್ರೆಗ್​ ಚಾಪೆಲ್​​, ಆಟಗಾರರನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಗಂಗೂಲಿಗೆ ನಾಯಕತ್ವದ ಆಸೆ ಅತಿಯಾಗಿತ್ತು ಎಂದು ಹೇಳಿದ್ದಾರೆ. ಇದು ಭಾರತೀಯ ಕ್ರಿಕೆಟ್​ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಟೀಮ್​ ಇಂಡಿಯಾವನ್ನ ಅತ್ಯುತ್ತಮ ತಂಡವಾಗಿ ಜಗತ್ತಿಗೆ ಪರಿಚಯಿಸಲು ದ್ರಾವಿಡ್​ ತುದಿಗಾಲಲ್ಲಿ ನಿಂತಿದ್ದರು. ಆದರೆ ತಂಡದ ಇತರೆ ಆಟಗಾರರು, ಅವರಿಗೆ ನೆರವಾಗುವ ಭಾವನೆ ಹೊಂದಿರಲಿಲ್ಲ. ಕೇವಲ ಅವರು ತಂಡದಲ್ಲಿ ಉಳಿದುಕೊಳ್ಳಲಷ್ಟೇ ಯತ್ನಿಸಿದರು. ತಮ್ಮ ವೃತ್ತಿ ಜೀವನದ ಅಂತ್ಯಕ್ಕೆ ಬಂದಿದ್ದರು. ಹೀಗಾಗಿ ದ್ರಾವಿಡ್​​ ಸಲಹೆಗೆ ಹಿರಿಯ ಆಟಗಾರರು ವಿರೋಧ ಕೂಡ ಮಾಡುತ್ತಿದ್ದರು ಎಂದಿದ್ದಾರೆ ಚಾಪೆಲ್

ಗಂಗೂಲಿಯನ್ನ ತಂಡದಿಂದ ಕೈಬಿಟ್ಟಾಗ, ಉಳಿದ ಆಟಗಾರರು ತನ್ನೊಂದಿಗೆ ಬರುತ್ತಾರೆ ಎಂದು ಗಂಗೂಲಿ ಭಾವಿಸಿದ್ದರು. ಆದರೆ 12 ತಿಂಗಳಾದರೂ ಅದಾಗಲಿಲ್ಲ. ಹೀಗಾಗಿ ಮತ್ತೆ ಗಂಗೂಲಿ ತಂಡಕ್ಕೆ ಸೇರಿಕೊಂಡರು. ಅಷ್ಟೊತ್ತಿಗಾಗಲೇ ನಾಯಕನಾಗಿ ರಾಹುಲ್​​ ದ್ರಾವಿಡ್​ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದರು. ಗಂಗೂಲಿ ತಂಡಕ್ಕೆ ಮರಳುತ್ತಿದ್ದಂತೆ ಮತ್ತೆ ನಾಯಕನ ಪಟ್ಟ ನೀಡುವ ಮಾತು ಕೇಳಿ ಬಂದಿತ್ತು. ಆದರೆ ಆ ಸಂದರ್ಭದಲ್ಲಿ ಆಟಗಾರರು ಒಟ್ಟಾಗಿ ನಮಗೆ ನಾಯಕತ್ವ ಬದಲಾವಣೆ ಬೇಡ ಎಂದಿದ್ದರು ಎಂದರು.

ಗಂಗೂಲಿ ವೈಯಕ್ತಿವಾಗಿ ಬ್ಯಾಟಿಂಗ್​ ಕಡೆ ಗಮನ ನೀಡುತ್ತಿರಲಿಲ್ಲ. ಬದಲಾಗಿ ಆಟಗಾರರು ತನ್ನ ಅಂಗೈನಲ್ಲಿ ಇರಬೇಕು ಅನ್ನೋದು ಅವರ ಆಸೆಯಾಗಿತ್ತು ಎಂದು ಚಾಪೆಲ್​ ಹೇಳಿದ್ದರು.

The post ಗಂಗೂಲಿಗೆ ಕೊಕ್ ಕೊಟ್ಟು, ದ್ರಾವಿಡ್​ಗೆ ನಾಯಕ ಪಟ್ಟ ನೀಡಿದ್ದೇಕೆ..? ಗ್ರೇಗ್ ಚಾಪೆಲ್ ಹೇಳಿದ್ದೇನು..? appeared first on News First Kannada.

Source: newsfirstlive.com

Source link