ಟೀಮ್​ ಇಂಡಿಯಾ ವಿಕೆಟ್​ ಕೀಪರ್​ ರಿಷಭ್​ ಪಂತ್​ಗೆ ಕೊರೊನಾ ಪಾಸಿಟಿವ್​ ಬಂದಿದ್ದು ಇಂಡೋ-ಇಂಗ್ಲೆಂಡ್ ಸರಣಿ ಮೇಲೆ ಕೊರೊನಾ ಕರಿ ಛಾಯೆ ಮೂಡಿದೆ. ಇದರ ಬೆನ್ನಲ್ಲೇ ಇದಕ್ಕೆ ಆಟಗಾರರ ಬೇಜವಾಬ್ದಾರಿ ಕಾರಣಾನಾ.? ವಿಶ್ರಾಂತಿ ಹೆಸರಲ್ಲಿ ಬಿಸಿಸಿಐ ನೀಡಿದ್ದ ರಿಲೀಫ್​ ಕಾರಣನಾ..? ಎಂಬ ಚರ್ಚೆ ಎದ್ದಿದೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಮುಗಿದ ಬೆನ್ನಲ್ಲೇ ಭಾರತೀಯ ಆಟಗಾರರಿಗೆ, 20 ದಿನಗಳ ರಜೆ ನೀಡಲಾಗಿತ್ತು. ಇದೇ ಸಮಯ ಬಳಸಿಕೊಂಡಿದ್ದ ಆಟಗಾರರು, ಕೊರೊನಾದ ಕರಿಛಾಯೆಯ ನಡುವೆ ಹಾದಿಬೀದಿಗಳಲ್ಲಿ ಸುತ್ತಿದ್ದರು. ಒಂದು ಡೋಸ್​ ವ್ಯಾಕ್ಸಿನ್​ ಆಗಿದೆ ಧೈರ್ಯದಲ್ಲಿ ಸುತ್ತಿದ್ದು ಇದೀಗ ಕೊರೊನಾ ಸೋಂಕಿಗೆ ರೆಡ್​ ಕಾರ್ಪೆಟ್​ ಸ್ವಾಗತ ನೀಡಿದೆ. ವಿಕೆಟ್​ ಕೀಪರ್​​ ರಿಷಭ್​​ ಪಂತ್​ಗೆ ಸೋಂಕು ಧೃಡಪಟ್ಟಿದ್ದು, ತಂಡವನ್ನ ಆತಂಕಕ್ಕೆ ಒಳಗಾಗುವಂತೆ ಮಾಡಿದೆ.

ಕಳೆದ ಎಂಟು ದಿನಗಳಿಂದ ಐಸೋಲೆಷನ್​ನಲ್ಲಿ ಪಂತ್..!
ಕೊರೊನಾಗೆ ತುತ್ತಾಗಿರುವ ರಿಷಭ್​ ಪಂತ್​​, ಕಳೆದ 8 ದಿನಗಳಿಂದಲೂ ಐಸೋಲೆಷನ್​​​ಲ್ಲಿದ್ದಾರೆ ಅಂತಾ ಸ್ವತಃ ಬಿಸಿಸಿಐ ತಿಳಿಸಿದೆ. 8 ದಿನಗಳ ಹಿಂದೆ ಗಂಟಲು ನೋವಿನ ಕಾರಣ, ಕೋವಿಡ್ ಟೆಸ್ಟ್​ಗೆ ಒಳಪಡಿಸಿದ್ದಾಗ ಕೊರೊನಾ ದೃಢಪಟ್ಟಿದೆ. ಆದ್ರೆ, ಪಂತ್ ಕಳೆದೆಂಟು ದಿನಗಳಿಂದ ಐಸೋಲೇಷನ್​​ನಲ್ಲಿದ್ದರು, ಬಿಸಿಸಿಐ ಗುಟ್ಟು ಬಿಟ್ಟುಕೊಟ್ಟಿಲ್ಲ. ಇದು ಹಲವು ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ. ಇದಕ್ಕೆ ಬಿಸಿಸಿಐ ನೀಡಿದ್ದ 20 ದಿನಗಳ ರಜೆಯ ವಿನಾಯ್ತಿ ಹಾಗೂ ಆಟಗಾರರ ಬೇಜಾವ್ದಾರಿಯುತ ನಡೆಗಳ ಬಗ್ಗೆ ಚರ್ಚೆ ಎದ್ದಿದೆ.

ಭವಿಷ್ಯದ ಆಟಗಾರ ಪಂತ್​​, ಬಿಟ್ಟಿಲ್ವಾ ಹುಡುಗಾಟ?
ಈ ಪ್ರಶ್ನೆಗೆ ಕಾರಣ ರಜಾದಿನಗಳಲ್ಲಿ ಪಂತ್ ನಡೆದುಕೊಂಡ ರೀತಿ. ಒಂದೆಡೆ ಡೆಲ್ಟಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ರೆ, ಪಂತ್ ಮಾತ್ರ ಜನಸಂದಣೆ ಪ್ರದೇಶಗಳಿಗೆ ಸುತ್ತಾಡಿದ್ರು. ಅದ್ರಲ್ಲೂ ಯುರೋ ಕಪ್​​​ ಪುಟ್ಬಾಲ್​​ ಪಂದ್ಯಕ್ಕೆ ಸ್ನೇಹಿತರೊಂದಿಗೆ ಹಾಜರಾಗಿ ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗಿದ್ದರು. ಕೋವಿಡ್ ನಡುವೆ ಜನಸಂದಣೆ ಪ್ರದೇಶಕ್ಕೆ ತೆರಳಬೇಕಿತ್ತಾ ಎಂದು ಅಂದೇ ಅಭಿಮಾನಿಗಳು ಪ್ರಶ್ನಿಸಿದ್ರು.

ಬಿಗ್​​ಬಾಸ್​​ಗಳ ಆದೇಶ ದಿಕ್ಕರಿಸಿದ್ರಾ ಆಟಗಾರರು?
ಬ್ರಿಟನ್​ನಲ್ಲಿ ಡೆಲ್ಟಾ ವೈರಸ್​ ಉಲ್ಬಣ ಕಾರಣ, ಜನಸಂದಣೆ ಪ್ರದೇಶಕ್ಕೆ ಹೋಗದಂತೆ ಬಿಸಿಸಿಐ ಸೂಚಿಸಿತ್ತು. ಆಟಗಾರರಿಗೆ ಕಳುಹಿಸಲಾಗಿದ್ದ ಇಮೇಲ್​ನಲ್ಲಿ ಯುರೋ ಕಪ್‌ ಫುಟ್ಬಾಲ್‌, ವಿಂಬಲ್ಡನ್‌ ಟೆನಿಸ್‌ ಟೂರ್ನಿಗೆ ತೆರಳಬಾರದೆಂದು ಆದೇಶಿಸಿತ್ತು. ಆದ್ರೆ, ಟೀಮ್​ ಇಂಡಿಯಾ ಆಟಗಾರರು ಇವನ್ನೆಲ್ಲಾ ದಿಕ್ಕರಿಸಿ ಜನಸಂದಣೆ ಪ್ರದೇಶಗಳಲ್ಲೇ ಓಡಾಟ ನಡೆಸಿದ್ರು. ಈ ಬೇಜಾವಾಬ್ದಾರಿಯುತ ನಡೆಯೇ ಇದು ಇಡೀ ಸರಣಿಯ ಮೇಲೆ ಕೊರೊನಾ ಕರಿಛಾಯೆ ಮೂಡುವಂತೆ ಮಾಡಿದೆ.

ಇದನ್ನೂ ಓದಿ: ಟೀಮ್ ಇಂಡಿಯಾಗೆ ಕೊರೊನಾಘಾತ -ರಿಷಭ್ ಪಂತ್​ಗೆ ಸೋಂಕು ದೃಢ

The post ಗಂಗೂಲಿ ಮಾತಿಗೆ ಡೋಂಟ್​ ಕೇರ್​​; ಹುಡುಗಾಟ ಮಾಡಿ ತಂಡವನ್ನೇ ಸಂಕಷ್ಟಕ್ಕೆ ಸಿಲುಕಿಸಿದ ಪಂತ್..! appeared first on News First Kannada.

Source: newsfirstlive.com

Source link