ಬೆಂಗಳೂರು: ಜೂನ್ 14ರಿಂದ ಲಾಕ್​ಡೌನ್ ಸಡಿಲಿಕೆಯಾಗುವ ಬಗ್ಗೆ ರಾಜ್ಯ ಸರ್ಕಾರ  ಘೋಷಣೆ ಮಾಡಿದ ಬೆನ್ನಲ್ಲೇ ಹಳ್ಳಿಗಳಿಗೆ ಹೋಗಿದ್ದ ಜನರು ಬೆಂಗಳೂರಿನತ್ತ ವಾಪಸ್ ಆಗ್ತಿದ್ದಾರೆ. ಈ ಹಿನ್ನೆಲೆ ನಗರದ ಸಂಗೊಳ್ಳಿ ರಾಯಣ್ಣ ರೇಲ್ವೇ ನಿಲ್ದಾಣದಲ್ಲಿ ಜನ ಸಾಗರವೇ ನೆರೆದಿದೆ.

ಈಗಾಗಲೇ ರಾಜ್ಯ ಸರ್ಕಾರ ಖಾಸಗಿ ಕಂಪನಿಗಳಿಗೆ ಕೆಲಸ ಮಾಡಲು ಅವಕಾಶ ಕೊಟ್ಟಿದೆ. ಹೀಗಾಗಿ ನೌಕರರು ತಮ್ಮ ಊರುಗಳಿಂದ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾರೆ. ವಿವಿಧ ಜಿಲ್ಲೆಗಳು ಹಾಗೂ ಬೇರೆ ರಾಜ್ಯಗಳಿಂದ ಗಂಟುಮೂಟೆ ಸಮೇತವಾಗಿ ಕಾರ್ಮಿಕರು ಬೆಂಗಳೂರಿಗೆ  ವಾಪಸ್​ ಬರ್ತಿದ್ದಾರೆ.

ಬೆಂಗಳೂರಿನಲ್ಲಿ ಕೆಲಸವಿಲ್ಲದೆ ಊರು ಸೇರಿದ್ದ ಕಾರ್ಮಿಕರು, ಲಾಕ್​ಡೌನ್ ಸಡಿಲಿಕೆ ಆಗ್ತಿದ್ದಂತೆ ಮತ್ತೆ ಸಿಲಿಕಾನ್ ಸಿಟಿ ಕಡೆ ಮುಖ ಮಾಡ್ತಿದ್ದಾರೆ.

The post ಗಂಟುಮೂಟೆ ಸಮೇತ ಬೆಂಗಳೂರಿಗೆ ವಾಪಸ್​.. ಮೆಜೆಸ್ಟಿಕ್​​ನಲ್ಲಿ ಜನವೋ ಜನ appeared first on News First Kannada.

Source: newsfirstlive.com

Source link