‘ಗಂಟು ಮೂಟೆ ಕಟ್ಟಿಕೊಂಡು ಮನೆಗೆ ಹೋಗ್ತೀವಿ’ -ಜಡೇಜಾ ಹೀಗಂದಿದ್ದು ಯಾಕೆ..?


ಟೀಮ್ ಇಂಡಿಯಾ ದೊಡ್ಡ ಅಂತರದಿಂದ ಸ್ಕಾಟ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಸೆಮಿಫೈನಲ್ ಹಾದಿಯನ್ನು ಜೀವಂತವಾಗಿರಿಸಿಕೊಂಡಿದೆ. ಪಂದ್ಯ ಗೆದ್ದ ನಂತರ ಟೀಮ್ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜರಿಗೆ ಕೇಳಿದ ಪ್ರಶ್ನೆಯೊಂದು ಇಕ್ಕಟ್ಟಿಗೆ ಸಿಲುಕಿಸಿತ್ತು.

ಈ ವೇಳೆ ನೇರವಾಗಿ ಹಾಗೂ ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದ ರವೀಂದ್ರ ಜಡೇಜಾ, ” ಅಂಥ ಸಂದರ್ಭದಲ್ಲಿ ಗಂಟು-ಮೂಟೆ ಕಟ್ಟಿಕೊಂಡು ಮನೆಗೆ ಹೋಗುತ್ತೇವೆ, ಮುಂದೇನು ಮಾಡಲಿಕ್ಕೆ ಆಗುತ್ತದೆ?” ಅಂತಾ ಹೇಳಿದ್ದಾರೆ. ಸದ್ಯ ಜಡೇಜಾರ ಈ ಪ್ರತಿಕ್ರಿಯೆ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ 15 ರನ್​ ನೀಡಿ 3 ವಿಕೆಟ್​ ಪಡೆದ ಜಡೇಜಾ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಸದ್ಯ ಟೀಂ ಇಂಡಿಯಾ ಐಸಿಸಿ ಟಿ-20 ವಿಶ್ವಕಪ್ ಅಂಕಪಟ್ಟಿಯಲ್ಲಿ 4 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿದೆ. ಇನ್ನು ಪಟ್ಟಿಯಲ್ಲಿ ಪಾಕಿಸ್ತಾನ ಸತತ ನಾಲ್ಕು ಗೆಲುವು ಪಡೆದು ಸೆಮೀಸ್​​ಗೆ ಸೇರಿದ್ದು, ಮೂರು ಗೆಲುವು ಪಡೆದಿರುವ ನ್ಯೂಜಿಲೆಂಡ್​ 2ನೇ ಸ್ಥಾನದಲ್ಲಿದೆ.

The post ‘ಗಂಟು ಮೂಟೆ ಕಟ್ಟಿಕೊಂಡು ಮನೆಗೆ ಹೋಗ್ತೀವಿ’ -ಜಡೇಜಾ ಹೀಗಂದಿದ್ದು ಯಾಕೆ..? appeared first on News First Kannada.

News First Live Kannada


Leave a Reply

Your email address will not be published. Required fields are marked *