ಬೆಂಗಳೂರು: ತನ್ನ ಗಂಡನಿಗೆ ಯಾವ ಆಸ್ಪತ್ರೆಯಲ್ಲೂ ಬೆಡ್ ಸಿಗದೆ ಪರದಾಡಿದ  ಮಹಿಳೆಯೊಬ್ಬರು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರ ಮನೆ ಮುಂದೆ ಇಂದು ಪ್ರತಿಭಟನೆ ನಡೆಸಿದ್ರು.

ರಾಮೋಹಳ್ಳಿಯ ಚಿಕ್ಕಲ್ಲೂರಿನಿಂದ ಬಂದಿರೋ ಸತೀಶ್ ಎಂಬ ರೋಗಿಯ ಸಂಬಂಧಿಕರು ಬೆಡ್​​ಗಾಗಿ ಅಲೆದಾಡಿದ್ದಾರೆ. ಆದ್ರೆ ಎಲ್ಲೂ ಬೆಡ್​ ಸಿಗ್ತಿಲ್ಲ ಎಂದು ಸಿಎಂ ನಿವಾಸ ಕಾವೇರಿ ಎದುರು ಪ್ರತಿಭಟಿಸಿದ್ರು.

ಹೆಲ್ಪ್​​​ಲೈನ್ ಫುಲ್ ಬ್ಯುಸಿ ಬರ್ತಿದೆ. ಬೆಡ್, ವೆಂಟಿಲೇಟರ್, ಐಸಿಯು ಬೆಡ್ ಸಿಗ್ತಿಲ್ಲ. ಎಲ್ಲಿ ಹೋದ್ರು ಬೆಡ್ ಇಲ್ಲ ಅಂತಿದ್ದಾರೆ. ನನ್ನ ಗಂಡನನ್ನ ಉಳಿಸಿ ಕೊಡಿ ಅಂತ ರೋಗಿಯ ಪತ್ನಿ ಕಣ್ಣೀರಿಟ್ಟರು. ಈಗಾಗಲೇ ಬಿಜಿಎಸ್, ಆರ್.ಆರ್ ನಗರ ಆಸ್ಪತ್ರೆಗೆ ಹೋಗಿಬಂದಿರುವ ರೋಗಿ ಸಂಬಂಧಿಕರು, ಎಲ್ಲೂ ಬೆಡ್​ ಸಿಕ್ಕಿಲ್ಲ ಎಂದರು.

ಬಳಿಕ ಸ್ಥಳದಲ್ಲಿದ್ದ ಪೊಲೀಸರು ಸತೀಶ್ ಅವರ​ ಆಧಾರ್ ಇನ್ನಿತರೆ ವಿವರಗಳನ್ನ ಪಡೆದು, ರೋಗಿ ಇರುವ ಆಂಬ್ಯುಲೆನ್ಸನ್ನು ರಾಮಯ್ಯ ಆಸ್ಪತ್ರೆಗೆ ಕಳಿಸಿದ್ದಾರೆ. ಸೋಂಕಿತ ರೋಗಿಗೆ ಸಿಎಂ ಯಡಿಯೂರಪ್ಪ ಬೆಡ್ ವ್ಯವಸ್ಥೆ ಮಾಡಿದ್ದಾರೆ.

The post ಗಂಡನನ್ನು ಉಳಿಸಿಕೊಡಿ ಎಂದು ಸಿಎಂ ಮನೆ ಬಳಿ ಮಹಿಳೆ ಪ್ರತಿಭಟನೆ, ರೋಗಿಗೆ ಬೆಡ್​ ವ್ಯವಸ್ಥೆ ಮಾಡಿದ ಬಿಎಸ್​ವೈ appeared first on News First Kannada.

Source: newsfirstlive.com

Source link