ಗಂಡನಿಂದ ಕಿರುಕುಳ- ತಲಾಖ್ ವಂಚನೆ ಆರೋಪ: ವಿಡಿಯೋ ಮಾಡಿ ಪ್ರಧಾನಿ ಮೋದಿಗೆ ದೂರು ನೀಡಿ, ಆತ್ಮಹತ್ಯೆಗೆ ಯತ್ನಿಸಿದ ಮಾಜಿ ಉಪಮೇಯರ್ | Bangalore former deputy mayor on facebook live video alleges husband harassment and complaint to pm narendra modi


ಪತಿ ಅನ್ವರ್, 2011 ರಲ್ಲಿ ತಲಾಕ್ ನೀಡಿದ್ದರು. ಆದರೆ ಪತ್ನಿ ಮಾಜಿ ಉಪಮೇಯರ್ ಶಹತಾಜ್ ಬೇಗಂ ಆ ತಲಾಕ್ ಪ್ರಶ್ನಿಸಿ ಕೊರ್ಟ್ ಮೊರೆ ಹೊಗಿದ್ದರು. ಇತ್ತೀಚಿಗೆ ತಲಾಕ್ ವಿರುದ್ಧ ಕೊರ್ಟ್ ನಲ್ಲಿ ಶಹತಾಜ್ ಗೆದ್ದಿದ್ದರು.

ಗಂಡನಿಂದ ಕಿರುಕುಳ- ತಲಾಖ್ ವಂಚನೆ ಆರೋಪ: ವಿಡಿಯೋ ಮಾಡಿ ಪ್ರಧಾನಿ ಮೋದಿಗೆ ದೂರು ನೀಡಿ, ಆತ್ಮಹತ್ಯೆಗೆ ಯತ್ನಿಸಿದ ಮಾಜಿ ಉಪಮೇಯರ್

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಮಾಜಿ ಉಪಮೇಯರ್ ಗೆ ಗಂಡನಿಂದ ವಂಚನೆ, ಹಲ್ಲೆಯಾಗಿರುವ ಆರೋಪ ಪ್ರಕರಣದಲ್ಲಿ ಫೇಸ್ ಬುಕ್ ನಲ್ಲಿ ವಿಡಿಯೋ ಮಾಡಿ ಪ್ರಧಾನ ಮಂತ್ರಿ ನರೇಂದ್ರ ಮೊದಿಗೆ ಪತಿಯ ವಿರುದ್ಧ ದೂರು ಸಲ್ಲಿಸಲಾಗಿದೆ. ಮಾಜಿ ಉಪಮೇಯರ್ ಶಹತಾಜ್ ಬೇಗಂ ಅವರು ಫೇಸ್ ಬುಕ್ ವಿಡಿಯೋದಲ್ಲಿ ನೇಣು ಕುಣಿಗೆ ಕೊರಳೊಡ್ಡಿಕೊಂಡು ವಿಡಿಯೋ ಮಾಡಿದ್ದಾರೆ. ತಲಾಕ್ ನೀಡಿದ್ದಾಗಿ ಹೇಳಿ ಜೊತೆಗಿರಲು, ಸಂಸಾರ ಮಾಡಲು ಪತಿ ನಿರಾಕಾರಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ.

ಪತಿ ಅನ್ವರ್, 2011 ರಲ್ಲಿ ತಲಾಕ್ ನೀಡಿದ್ದರು. ಆದರೆ ಪತ್ನಿ ಮಾಜಿ ಉಪಮೇಯರ್ ಶಹತಾಜ್ ಬೇಗಂ ಆ ತಲಾಕ್ ಪ್ರಶ್ನಿಸಿ ಕೊರ್ಟ್ ಮೊರೆ ಹೊಗಿದ್ದರು. ಇತ್ತೀಚಿಗೆ ತಲಾಕ್ ವಿರುದ್ಧ ಕೊರ್ಟ್ ನಲ್ಲಿ ಶಹತಾಜ್ ಗೆದ್ದಿದ್ದರು. ಬಳಿಕ ಮೇಡಳ್ಳಿಯ ಗಂಡನ ಮನೆಗೆ ತೆರಳಿದ್ದರು. ಈ ವೇಳೆ ಪೊಲೀಸರು ಆಕೆಗೆ ಸಹಾಯ ಮಾಡೋದಾಗಿ ಹೇಳಿ ನಂತರ ದಬ್ಬಾಳಿಕೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಕೆಆರ್ ಪುರಂ ಇನ್ಸ್ ಪೆಕ್ಟರ್, ಮಹಿಳಾ ಸಬ್ ಇನ್ಸ್ ಪೆಕ್ಟರ್ ವಿರುದ್ಧ ಈ ಆರೋಪ ಕೇಳಿಬಂದಿದೆ. 15 ನಿಮಿಷದ ಫೇಸ್ ಬುಕ್ ಲೈವ್ ವಿಡಿಯೋ ಆರೋಪದಲ್ಲಿ ತನಗಾದ ಅನ್ಯಾಯದ ವಿರುದ್ಧ ನ್ಯಾಯ ನೀಡುವಂತೆ ಮಾಜಿ ಉಪಮೇಯರ್ ಶಹತಾಜ್ ಕೋರಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *