ರಾಜ್ಯದಲ್ಲಿ ಹೆಂಡತಿ ವಿರುದ್ಧ ದೌರ್ಜನ್ಯದ ಕೇಸ್ ಹೆಚ್ಚಳವಾಗಿದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ. ಕಳೆದ ಬಾರಿ ಶೇ.20.6ರಷ್ಟಿದ್ದ ವಿವಾಹಿತ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಈ ಸಲ ಶೇ.44.4ರಷ್ಟಕ್ಕೆ ಏರಿಕೆಯಾಗಿದೆ.
ಮನಸೋ ಇಚ್ಛೆ ಹೊಡೆಯುವುದು, ತೋಳುಗಳನ್ನು ತಿರುಗಿಸುವುದು, ಕಾಲಿನಿಂದ ಒದೆಯುವುದು, ಮುಷ್ಟಿಯಿಂದ ಗುದ್ದುವುದು ಹೀಗೆ ಹಲವು ರೂಪದಲ್ಲಿ ಮಹಿಳೆಯರನ್ನು ಹಿಂಸಿಸಲಾಗುತ್ತಿದೆ. ತಮಗೆ ಇಷ್ಟವಿಲ್ಲದಿದ್ದರೂ ಬಲವಂತದಿಂದ ದೈಹಿಕವಾಗಿ ಹಲ್ಲೆ ನಡೆಸಲಾಗುತ್ತಿದೆ ಎಂದು ಸರ್ವೇ ಹೇಳುತ್ತಿದೆ. ಹೀಗಿರುವಾಗಲೇ ಶೇ.82ರಷ್ಟು ಮಹಿಳೆಯವರು ಗಂಡ ಹೆಂಡತಿ ಮೇಲೆ ಕೈ ಮಾಡುವುದನ್ನು ನ್ಯಾಯಯುತ ಎಂದ ಶಾಕಿಂಗ್ ಸುದ್ದಿಯೊಂದು ಬಯಲಿಗೆ ಬಂದಿದೆ. ಅದರಲ್ಲೂ ಶೇ.77 ರಷ್ಟು ಕನ್ನಡದ ಮಹಿಳೆಯರು ಹೀಗೆ ಸರ್ವೇಯಲ್ಲಿ ಹೇಳಿರೋದು ಅಚ್ಚರಿಗೆ ಕಾರಣವಾಗಿದೆ.
ಯಾವ ರಾಜ್ಯದಲ್ಲಿ ಎಷ್ಟು ಪರ್ಸೆಂಟ್ ಮಹಿಳೆಯರು ಇದನ್ನು ಸಪೋರ್ಟ್ ಮಾಡಿದ್ರು
- ತೆಲಂಗಾಣ- 84%
- ಆಂಧ್ರ ಪ್ರದೇಶ- 84%
- ಕರ್ನಾಟಕ 77-%
- ಮಣಿಪುರ 66-%
- ಕೇರಳ 52-%
- ಜಮ್ಮು ಮತ್ತು ಕಾಶ್ಮೀರ- 49%
- ಮಹಾರಾಷ್ಟ್ರ- 44%
- ಪಶ್ಚಿಮ ಬಂಗಾಳ- 42%
ಹೆಂಡತಿ ಮೇಲೆ ಗಂಡ ಕೈ ಮಾಡೋದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ ಮಹಿಳೆಯರು ಅತ್ತೆಗೆ ಅಗೌರವ ತೋರುವ, ಮನೆಗೆ ವಿಶ್ವಾಸದ್ರೋಹ ಬಗೆಯುವ, ಮಕ್ಕಳನ್ನು ನಿರ್ಲಕ್ಷಿಸುವ ಸಂದರ್ಭದಲ್ಲಿ ಹೀಗೆ ಮಾಡಬಹುದು ಎಂದಿದ್ದಾರೆ ಎಂದು ಸರ್ವೇಯಿಂದ ತಿಳಿದು ಬಂದಿದೆ. ಕರ್ನಾಟಕ, ಆಂಧ್ರ ಮತ್ತು ತೆಲಂಗಾಣದಲ್ಲಿ ಮಹಿಳೆಯರೇ ಹೊಡೆಯುವ ಗಂಡನನ್ನು ಸಪೋರ್ಟ್ ಮಾಡಿದ್ದಾರೆ.