ಗಂಡನ ಪಾತ್ರಕ್ಕೆ ಇವರನ್ನೇ ಚೂಸ್​​ ಮಾಡಿ ಎಂದ ನಯನತಾರ; ಮೆಗಸ್ಟಾರ್​​ ಸಿನಿಮಾದಲ್ಲೀಗ ಸುದೀಪ್​​


ಮೆಗಾಸ್ಟಾರ್​ ಚಿರಂಜೀವಿ ಮುಂದಿನ ಸಿನಿಮಾದ ”ಗಾಡ್​ ಫಾದರ್”​ ನಲ್ಲಿ ನಯನತಾರಾ ನಟಿಸುತ್ತಿದ್ದು, 4 ಕೋಟಿ ಸಂಭಾವನೆಯನ್ನ ಕೇಳುತ್ತಿದ್ದಾರೆ ಅನ್ನೋ ಗಾಸಿಫ್​ ಇನ್ನು ಚೆರ್ಚೆ ಆಗುತ್ತಿರುವಾಗಲೇ, ನಯನತಾರಾ ಬಗ್ಗೆ ಮತ್ತೊಂದು ವಿಷಯ ಗಾಸಿಪ್​​ ಪಂಡಿತರ ಬಾಯಿಗೆ ಸಿಕ್ಕಿದೆ.

ಚಿರಂಜೀವಿಯವರ ”ಗಾಡ್​ ಫಾದರ್”​ ಸಿನಿಮಾ ಮಲಯಾಳಂನಲ್ಲಿ ಬಂದ ಮೋಹನ್​ ಲಾಲ್​ ನಟನೆಯ ”ಲೂಸಿಫರ್”​ ಸಿನಿಮಾದ ರಿಮೇಕ್​. ”ಗಾಡ್​ ಫಾದರ್”​ ಸಿನಿಮಾದಲ್ಲಿ ನಯನ ತಾರಾ ಮಾಡುತ್ತಿರುವ ಪಾತ್ರವನ್ನು ”ಲೂಸಿಫರ್”​ ನಲ್ಲಿ ಮಂಜು ವಾರಿಯರ್ ಮಾಡಿದ್ದು, ಮಂಜು ವಾರಿಯರ್​ ಗಂಡನ ಪಾತ್ರದಲ್ಲಿ ಬಾಲಿವುಡ್​ನ ವಿವೇಕ್​ ಒಬೆರಾಯ್​ ನಟಿಸಿದ್ರು. ತೆಲುಗು ರಿಮೇಕ್​ ”ಗಾಡ್​ ಫಾದರ್”​ನಲ್ಲಿ ನಯನತಾರಾ ಗಂಡನ ಪಾತ್ರದಲ್ಲಿ ಟಾಲಿವುಡ್​ ಯುವ ಪ್ರತಿಭೆ ಸತ್ಯದೇವ್ ನಟಿಸುತ್ತಿದ್ದಾರೆ.

ಆದರೆ ಈಗ ಎದ್ದಿರುವ ಗಾಳಿ ಸುದ್ದಿಯ ಪ್ರಕಾರ ನಯನತಾರಾ ತನ್ನ ಗಂಡನ ಪಾತ್ರ ಮಾಡುತ್ತಿರುವ ಸತ್ಯದೇವ್​ ಬದಲಾಗಿ ಬೇರೆಯವರನ್ನು ಆಯ್ಕೆ ಮಾಡುವಂತೆ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಸೂಚನೆ ನೀಡಿದ್ದಾರಂತೆ. ಮತ್ತೊಂದು ಮಾಹಿತಿ ಪ್ರಕಾರ ನಯನತಾರಾಗೆ ಜೋಡಿಯಾಗಿ ಸ್ಯಾಂಡಲ್​ವುಡ್​ ಸೂಪರ್​ ಸ್ಟಾರ್ ಕಿಚ್ಚ ಸುದೀಪ್​ರನ್ನು ಅಪ್ರೋಚ್​ ಮಾಡೋ ಪ್ಲಾನ್​​ನಲ್ಲಿದೆಯಂತೆ ”ಗಾಡ್​ ಫಾದರ್”​ ಚಿತ್ರ ತಂಡ. ಈ ವಿಚಾರ ನಿಜ ಆದರೆ, ಮತ್ತೊಮ್ಮೆ ಚಿರಂಜೀವಿ ಮತ್ತು ಸುದೀಪ್​ರನ್ನು ಒಂದೇ ಸ್ರ್ಕೀನ್ ಮೇಲೆ​ ನೋಡೋ ಭಾಗ್ಯ ಚಿತ್ರ ಪ್ರೇಮಿಗಳ ಪಾಲಾಗಲಿದೆ.​

ಇದನ್ನೂ ಓದಿ: ಅಭಿಮಾನಿಗಳ​​ ಎದೆಬಡಿತ ಹೆಚ್ಚಿಸಿದ ಮರ್ಡರ್​ ಬೆಡಗಿ: ಜಾಕ್ವೆಲಿನ್​​ ಹೊಸ ಅವತಾರಕ್ಕೆ ಫ್ಯಾನ್ಸ್​​ ಖಲ್ಲಾಸ್​!

News First Live Kannada


Leave a Reply

Your email address will not be published. Required fields are marked *