ಗಂಡನ ಮೀನುಗಾರಿಕೆ ಅಭ್ಯಾಸಕ್ಕೆ ಬೇಸತ್ತ ಮಹಿಳೆ: ಪತಿಯನ್ನೇ ಆನ್ಲೈನ್​ನಲ್ಲಿ ಹರಾಜಿಗಿಟ್ಟು ಮಾರಲು ಮುಂದಾದ ಪತ್ನಿ | Woman puts the husband up for in online site for sale in auction


ಗಂಡನ ಮೀನುಗಾರಿಕೆ ಅಭ್ಯಾಸಕ್ಕೆ ಬೇಸತ್ತ ಮಹಿಳೆ: ಪತಿಯನ್ನೇ ಆನ್ಲೈನ್​ನಲ್ಲಿ ಹರಾಜಿಗಿಟ್ಟು ಮಾರಲು ಮುಂದಾದ ಪತ್ನಿ

ಪತಿಯನ್ನು ಹರಾಜಿಗಿಟ್ಟ ಮಹಿಳೆ

ಹರಾಜಿನಲ್ಲಿ ವಸ್ತುಗಳನ್ನು, ವಾಹನಗಳನ್ನು ಅಥವಾ ಮನೆಯನ್ನೋ ಹರಾಜಿಗಿಟ್ಟಿರುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬಳು ಮಹಿಳೆ ಗಂಡನನ್ನೇ ಹರಾಜಿಗಿಟ್ಟಿದ್ದಾಳೆ. ಗಂಡ ಆಕೆಯನ್ನು ಮತ್ತು ಇಬ್ಬರನ್ನು ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಮೀನುಗಾರಿಕೆಗೆ ತೆರಳಿದ ಕಾರಣ ಆನ್ಲೈನ್​ ಹರಾಜು ಸೈಟ್​ನಲ್ಲಿ ಮಾರಾಟಕ್ಕಿಟ್ಟಿದ್ದಾಳೆ. ಇದಕ್ಕೆ ಹರಾಜಿನಲ್ಲಿ ಮಾರಾಟವಾದ ಮೇಲೆ ಬದಲಾವಣೆ ಅಥವಾ ವಾಪಸ್​ ಪಡೆಯುವ ಪ್ರಮೇಯವೇ ಇಲ್ಲ ಎಂದಿದ್ದಾಳೆ. ಸದ್ಯ  ಈ ಸುದ್ದಿ ಜಗತ್ತಿನಾದ್ಯಂತ ವೈರಲ್​ ಆಗಿದೆ. ಐರಿಷ್​ನ ಲಿಂಡಾ ಮ್ಯಾಕ್​ ಅಲಿಸ್ಟರ್​ ಎನ್ನುವ ಮಹಿಳೆ ತನ್ನ ಪತಿ ಜಾನ್​ರನ್ನು ಹರಾಜಿಗಿಟ್ಟಿದ್ದಾಳೆ.

ನ್ಯೂಜಿಲ್ಯಾಂಡ್​ನ ಇಬೇ ಸ್ಟೈಲ್​ ಸೈಟ್​, ಟ್ರೇಡ್​ ಮೀ ಎನ್ನುವ ಆನ್ಲೈನ್​ ಸೈಟ್​ಗಳಲ್ಲಿ ಗಂಡನ ಫೋಟೋ ಮತ್ತು ಆತನ ಬಗೆಗಿನ ವಿವರಗಳನ್ನು ನೀಡಿ ಹರಾಜಿಗಿಟ್ಟಿದ್ದಾಳೆ. ಪತಿಯ ಬಗ್ಗೆ ಮಾಹಿತಿ ನೀಡಿದ ಆಕೆ ಜಾನ್​ ಆರು ಅಡಿ ಒಂದು ಇಂಚು ಎತ್ತರವಿದ್ದಾನೆ. 37 ವರ್ಷ ವಯಸ್ಸಾಗಿದೆ. ಮೀನುಗಾರಿಗೆ ಮತ್ತು ಬೇಟೆಯಲ್ಲಿ ಪರಿಣಿತಿಯನ್ನು ಪಡೆದಿದ್ದು, ಆಹಾರ ಮತ್ತು ನೀರನ್ನು ನೀಡಿದರೆ ಸಾಕು ನ್ಯಾಯಯುತವಾಗಿರುತ್ತಾನೆ ಅಲ್ಲದೇ ಈತ ಗೋ ಮಾಂಸ ಕೃಷಿಯನ್ನು ಮಾಡುತ್ತಾನೆ. ಕೆಲವೊಮ್ಮೆ ಅತಿಯಾದ ಜಲಸಂಚಯನವು ಅಪಾಯಕಾರಿಯಾಗಿರುತ್ತದೆ. ಅದನ್ನು ಅರ್ಥಮಾಡಿಕೊಳ್ಳಬೇಕಿದೆ. ಅಲ್ಲದೆ ಆತನಿಗೆ ಕೆಲವು ಮನೆಯ ಕೆಲಸಗಳನ್ನೂ ಕಲಿಸುವ ಅಗತ್ಯವಿದೆ. ಅದನ್ನು ಕಲಿಸುವಷ್ಟು ಸಮಯವಾಗಲೀ ತಾಳ್ಮೆಯಾಗಲಿ ನನಗೆ ಇಲ್ಲ ಎಂದು ಗಂಡನನ್ನು ಹರಾಜಿಗಿಟ್ಟ ಜಾಹೀರಾತಿನಲ್ಲಿ ಮಹಿಳೆ ತಿಳಿಸಿದ್ದಾಳೆ.

ಮುಂದುವರೆದು ಆಕೆ, ಮೀನುಗಾರಿಕೆ ಮಾಡುವುದು ಕೆಟ್ಟದ್ದಲ್ಲ. ಆದರೆ ಶಾಲೆ ರಜಾ ಇರುವ ದಿನಗಳಲ್ಲಿ ಹೀಗೆ ಮಕ್ಕಳನ್ನು, ನನ್ನನ್ನು ಬಿಟ್ಟು ಹೋಗುವುದು ಸರಿಯಲ್ಲ. ಅಲ್ಲದೆ ಮಧ್ಯರಾತ್ರಿ ಮನೆಗೆ ಬರುವ ಅಭ್ಯಾಸ ನನ್ನ ತಾಳ್ಮೆಯನ್ನು ಕೆಡಿಸಿದೆ ಹೀಗಾಗಿ ಹರಾಜಿಗೆ ಇಟ್ಟಿದ್ದೇನೆ. ಇದೇ ಅಂತಿಮ ನಿರ್ಧಾರವಾಗಿದೆ. ಯಾವುದೆ ಬದಲಾವಣೆ ಮತ್ತು ವಾಪಸ್​  ಮಾಡಲು ಅವಕಾಶವಿಲ್ಲ ಎಂದು ಹೇಳಿದ್ದಾರೆ.

ಐರಿಷ್​ನ ಲಿಂಡಾ ಮ್ಯಾಕ್​ ಅಲಿಸ್ಟರ್​ ಮತ್ತು ಜಾನ್ 2019ರಲ್ಲಿ ಮದುವೆಯಾಗಿದ್ದು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಅದೂ ಅಲ್ಲದೆ ಲಿಂಡಾ ನೀಡಿದ ಜಾಹೀರಾತಿನ ಬಗ್ಗೆ ಜಾನ್​ಗೆ ಸ್ನೇಹಿತರು ತಿಳಿಸಿದ ಬಳಿಕವೇ ಗೊತ್ತಾಗಿದೆ. ಹೀಗಿದ್ದರೂ ಅದನ್ನು ಆತ ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ವರದಿಯಾಗಿದೆ. ಕೊನೆಯಲ್ಲಿ ಟ್ರೇಡ್​ ಮಿ ಸೈಟ್​ನ ನಿಯಮ ಉಲ್ಲಂಘನೆಯಾಗಿದೆ ಎಂದು ಜಾಹೀರಾತನ್ನು ತೆಗೆಯಲಾಗಿತ್ತು. ಅಷ್ಟರಲ್ಲಾಗಲೇ ಲಿಂಡಾ ಕೊಟ್ಟ ಜಾಹೀರಾತಿಗೆ 63 ಯುರೋಗಳಿಗೆ ಬಿಟ್ಟಿಂಗ್ ಆಗಿತ್ತು ಎಂದು ವರದಿ ತಿಳಿಸಿದೆ.

TV9 Kannada


Leave a Reply

Your email address will not be published.