ಬೆಂಗಳೂರು: ನಗರದಲ್ಲಿ ಛಲವಾದಿಪಾಳ್ಯದ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಅವರನ್ನ ಇಂದು ಹಾಡಹಗಲೇ ಕೊಲೆ ಮಾಡಲಾಗಿದೆ. ಪತಿ ಕದಿರೇಶ್​​ ಕೊಲೆಯಾಗಿ ಮೂರು ವರ್ಷಗಳ ಬೆನ್ನಲ್ಲೆ ರೇಖಾ ಕೂಡ ಹತ್ಯೆಗೀಡಾಗಿದ್ದಾರೆ.

2108ರ ಫೆಬ್ರವರಿ 8ರಂದು ಶೋಭನ್ ಮತ್ತು ಗ್ಯಾಂಗ್ ಕದಿರೇಶ್ ಅವರನ್ನ ಕೊಲೆ ಮಾಡಿತ್ತು. ಈಗ ರೇಖಾ ಕೊಲೆ ಹಿಂದೆಯೂ ಅದೇ ಗ್ಯಾಂಗ್​ನ ಕೈವಾಡವಿರುವ ಅನುಮಾನ ಮೂಡಿದೆ. ಶೋಭನ್ ಗ್ಯಾಂಗ್​​ ಜೊತೆ ಇದ್ದ ಹಳೇ ರೌಡಿಶೀಟರ್ ಪೀಟರ್​ನಿಂದ ರೇಖಾ ಅವರ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಪಶ್ಚಿಮ ವಿಭಾಗದ ಡಿಸಿಪಿ ಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ಅಂದ್ಹಾಗೆ ಪೀಟರ್ ರೇಖಾ ಅವರ ಬಾಡಿಗಾರ್ಡ್​​​​ ಆಗಿದ್ದ. ಇಂದು ರೇಖಾ ಫುಡ್ ಕಿಟ್ ಹಂಚಲು ಬಿಜೆಪಿ ವಾರ್ಡ್​ ಕಚೇರಿಗೆ ಬಂದಿದ್ದ ವೇಳೆ ಜೊತೆಗೇ ಇದ್ದ ಪೀಟರ್ ಮತ್ತು ಸಹಚರರಿಂದ ಹಲ್ಲೆ ನಡೆಸಲಾಗಿದೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ರೇಖಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕೊಲೆಗೆ ಮುಂಚೆಯೇ ಪ್ಲಾನ್ ಮಾಡಿಕೊಂಡಿದ್ದ ಆರೋಪಿಗಳು ಸಿಸಿ ಕ್ಯಾಮಾರಾಗಳನ್ನು ಮೇಲ್ಭಾಗಕ್ಕೆ ತಿರುಗಿಸಿದ್ದರು. ಸಾಕ್ಷಿ ಸಿಗದಂತೆ ಪ್ಲಾನ್ ಮಾಡಿ ಕೃತ್ಯ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

 

The post ಗಂಡನ ಹತ್ಯೆಯಾಗಿ 3 ವರ್ಷದಲ್ಲೇ ರೇಖಾ ಕೊಲೆ.. ಬಾಡಿಗಾರ್ಡ್​ನಿಂದಲೇ ಕೃತ್ಯ ನಡೆದಿರೋ ಶಂಕೆ appeared first on News First Kannada.

Source: newsfirstlive.com

Source link