ಖ್ಯಾತ ಗಾಯಕಿ ಶ್ರೇಯಾ ಘೋಷಲ್​​ ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಕುರಿತ ಮಾಹಿತಿಯನ್ನು ತಮ್ಮ ಇನ್​​ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ಇಂದು ಮಧ್ಯಾಹ್ನ ದೇವರು ಗುಂಡು ಮಗುವನ್ನ ಆರ್ಶೀವದಿಸಿದ್ದಾನೆ. ಹಿಂದೆಂದೂ ಪಡೆಯದ ಅನುಭವನನ್ನು ಪಡೆದುಕೊಂಡಿದ್ದೇನೆ. ಪತಿ ಶಿಲಾದಿತ್ಯ, ನಾನು ಮತ್ತು ಕುಟುಂಬ ಸಂತಸಗೊಂಡಿದ್ದೇವೆ. ನಿಮ್ಮ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದ ಎಂದು ಘೋಷಾಲ್​ ತಿಳಿಸಿದ್ದಾರೆ. ಘೋಷಾಲ್ ಅವರ ಪೋಸ್ಟ್​ಗೆ ಪ್ರತಿಕ್ರಿಯೆ ನೀಡಿರುವ ಹಲವು ಅಭಿಮಾನಿಗಳು, ದಂಪತಿಗೆ ಶುಭ ಹಾರೈಸಿದ್ದಾರೆ.

The post ಗಂಡು ಮಗುವಿಗೆ ಜನ್ಮ ನೀಡಿದ ಗಾಯಕಿ ಶ್ರೇಯಾ ಘೋಷಾಲ್ appeared first on News First Kannada.

Source: newsfirstlive.com

Source link