ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ಖ್ಯಾತ ನಿರ್ದೇಶಕ ಎ.ಪಿ ಅರ್ಜುನ್​ ಸದ್ಯ ಖುಷಿಯ ಅಲೆಯಲ್ಲಿ ತೇಲಾಡ್ತಿದ್ದಾರೆ. ಏಪ್ರಿಲ್​ 30ರಂದು ಈ ಖುಷಿಯನ್ನ ಒಂದು ಹಂತಕ್ಕೆ ಹಂಚಿಕೊಂಡಿದ್ದ ಅರ್ಜುನ್​, ಇದೀಗ ತಮ್ಮ ಖುಷಿ ದುಪ್ಪಟ್ಟಾಗಿರುವ ಬಗ್ಗೆ ಬಹಿರಂಗವಾಗಿ ಟ್ವೀಟ್​ ಮಾಡಿದ್ದಾರೆ. ಯೆಸ್​…. ಮುದ್ದು ಗಂಡು ಮಗುವಿನ ತಂದೆಯಾಗಿದ್ದಾರೆ ನಿರ್ದೇಶಕ ಎ.ಪಿ ಅರ್ಜುನ್​. ಈ ವಿಚಾರವನ್ನ ಖುದ್ದು ಅರ್ಜುನ್​ ಹಂಚಿಕೊಂಡಿದ್ದು, ನಿನ್ನೆ ಮಧ್ಯಾಹ್ನ ಗಂಡು ಮಗು ಜನಿಸಿರೋದಾಗಿ ತಿಳಿಸಿದ್ದಾರೆ.

ಏಪ್ರಿಲ್​ 30ರಂದು ಅರ್ಜುನ್​ ಪತ್ನಿ ಅನ್ನಪೂರ್ಣ ಅವರ ಸೀಮಂತ ಶಾಸ್ತ್ರ ಮನೆಯಲ್ಲಿಯೇ ಸಿಂಪಲ್​ ಆಗಿ ಆಪ್ತರ ಸಮ್ಮುಖದಲ್ಲಿ ನೆರವೇರಿತ್ತು. ಅಲ್ಲಿಂದ ಒಂದು ವಾರದಲ್ಲೇ ಮಗುವಿನ ಆಗಮನ ಆಗಿರೋದು ಇಡೀ ಕುಟುಂಬಕ್ಕೆ ಸಂತಸ ನೀಡಿದೆ. ಅಂದ್ಹಾಗೇ ನಿರ್ದೇಶಕ ಅರ್ಜುನ್​ ಹಾಗೂ ಅನ್ನಪೂರ್ಣ ವಿವಾಹ ಕಳೆದ ಬಾರಿ ಲಾಕ್​ಡೌನ್​ನಲ್ಲಿ ನಡೆದಿತ್ತು. 2020ರ ಮೇ 10ರಂದು ಮನೆಯಲ್ಲಿಯೇ ವೈವಾಹಿಕ ಜೀವನಕ್ಕೆ ಇಬ್ಬರೂ ಕಾಲಿಟ್ಟಿದ್ದರು.

ಸೀಮಂತದ ಫೋಟೋಗಳನ್ನ ಹಂಚಿಕೊಂಡಿದ್ದ ಅರ್ಜುನ್, ‘ಮುದ್ದು ಮಡದಿಯ ಸೀಮಂತ. ಎಲ್ಲರ ಪ್ರೀತಿ, ಆಶೀರ್ವಾದ ಇರಲಿ’ ಅಂತ ಕೇಳಿಕೊಂಡಿದ್ದರು. ಇದೀಗ ಮಗನ ಆಗಮನವನ್ನ ಎಲ್ಲಾ ಅಭಿಮಾನಿಗಳಿಗೆ ತಿಳಿಸಿ ಗುಡ್​ ನ್ಯೂಸ್​ ನೀಡಿದ್ದಾರೆ.

The post ಗಂಡು ಮಗುವಿಗೆ ತಂದೆಯಾದ ನಿರ್ದೇಶಕ ಎ.ಪಿ ಅರ್ಜುನ್ appeared first on News First Kannada.

Source: newsfirstlive.com

Source link