ಗಂಡು ಮೆಟ್ಟಿದ ನಾಡಿನಲ್ಲಿ ಗಾಂಜಾ ಘಮಲು..ಹುಬ್ಬಳ್ಳಿಯಲ್ಲಿ ವ್ಯವಹಾರ ಜೋರು..ಕೇಳೋಱರು?


ಹುಬ್ಬಳ್ಳಿ: ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಗಾಂಜಾ ಘಾಟು ಎದ್ದಿದೆ. ವಾಣಿಜ್ಯನಗರಿ ಸದ್ಯ ಮಾದಕ ವಸ್ತಗಳ ಹಾಟ್​ಸ್ಪಾಟ್​ ಆಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ನಗರದಲ್ಲಿ ಎಗ್ಗಿಲ್ಲದೆ ಗಾಮಜಾ ಸೇರದಂತೆ ಹಲವಾರು ಮಾದಕ ವಸ್ತುಗ ಸರಬರಾಜು ನಡೆಯುತ್ತಿದೆ ಎನ್ನಲಾಗಿದೆ.

ಛೋಟಾ ಮುಂಬೈ ಎಂದೇ ಖ್ಯಾತಿ ಗಳಿಸಿದ ಹುಬ್ಬಳ್ಳಿ ಉತ್ತರ ಕರ್ನಾಟಕ ಭಾಗದ ಅತಿದೊಡ್ಡ ವಾಣಿಜ್ಯ ಕೇಂದ್ರವಾಗಿ ಗುರುತಿಸಿಕೊಂಡಿದೆ. ಮಧ್ಯ ಭಾಗದಲ್ಲಿರೋದ್ರಿಂದ ಹಲವಾರು ಪ್ರವಾಸಿ ತಾಣಗಳಿಗೆ ಮತ್ತು ನೆರೆಯ ರಾಜ್ಯಗಳಿಗೆ ಇಲ್ಲಿಂದ ಸುಲಭವಾಗಿ ಡ್ರಗ್​ ಸಪ್ಲೈ ಆಗುತ್ತಿದೆ ಎನ್ನಲಾಗಿದೆ. ಇದಕ್ಕೆ ಪೂರಕವೆಂಬಂತೆ ವರ್ಷದ ಹತ್ತೆ ತಿಂಗಳಲ್ಲಿ 42 ಪ್ರಕರಣಗಳು ಎನ್‌ಡಿಪಿಎಸ್‌ ನಲ್ಲಿ (ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ) ದಾಖಲಾಗಿವೆ. ಜೊತೆಗೆ 2019 ರಲ್ಲಿ 16 ಪ್ರಕರಣಗಳು ರಿಜಿಸ್ಟರ್​ ಆಗಿವೆ..

ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ಈ ಮೂರು ರಾಜ್ಯಗಳ ಸಂಪರ್ಕ ಕೊಂಡಿಯಾಗಿ ನಗರ ಬಿಂಬಿಸಿಕೊಂಡಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣ ಸುತ್ತಮುತ್ತಲಿನ ಪ್ರದೇಶದಿಂದ ರೈಲು, ರಸ್ತೆ ಮಾರ್ಗದ ಮೂಲಕ ರಾತ್ರೋರಾತ್ರಿ ಪ್ರಯಾನಿಕರ ಸೋಗಿನಲ್ಲಿ ಗಾಂಜಾ ಹೊತ್ತು ಬರುತ್ತಿರೋ ಖದೀಮರು ಹುಬ್ಬಳ್ಳಿಗೆ ಬಂದಿಳಿಯುತ್ತಿದ್ದಾರೆ. ಆ ಮೂಲಕ ಗಾಂಜಾ ಖರೀದಿಸಿದ ಸ್ಥಳೀಯ ಮಧ್ಯವರ್ತಿಗಳು ಕಾರವಾರ, ಗೋವಾ, ಗೋಕರ್ಣದ ಓಂ ಬೀಚ್‌ ಸೇರಿದಂತೆ ಮತ್ತಿತರ ಪ್ರದೇಶಗಳಿಗೆ ರವಾನೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಇದನ್ನೂ ಓದಿ:ವಿದ್ಯಾಕಾಶಿಯಲ್ಲಿ ಗಾಂಜಾ ಘಾಟು..ವಿದ್ಯಾರ್ಥಿಗಳಿಗೆ ಡ್ರಗ್​ ಸಪ್ಲೈ ಮಾಡ್ತಿದ್ದ ಇಬ್ಬರು ಅಂದರ್​

ಇನ್ನು ಗೋವಾ, ಕಾರವಾರ, ಓಂ ಬೀಚ್‌ಗೆ ವಿದೇಶಿಯರ ಆಗಮನ ಹೆಚ್ಚು. ಅಲ್ಲಿ ಸಹಜವಾಗಿಯೇ ಗಾಂಜಾಗೆ ಹೆಚ್ಚಿನ ಬೇಡಿಕೆಯಿದೆ ಇದನ್ನೆ ಎನ್ಕ್ಯಾಶ್​​ ಮಾಡಿಕೊಂಡ ಖದೀಮರು ಹುಬ್ಬಳ್ಳಿಯನ್ನು ಕೇಂದ್ರ ಬಿಂದುವಾಗಿ ಇರಿಸಿಕೊಂಡು ವ್ಯವಸ್ಥಿತವಾಗಿ ಸಪ್ಲೈ ಮಾಡಲಾಗುತ್ತಿದೆ. ಇನ್ನು ಈ ಜಾಲವನ್ನು ಆದಷ್ಟು ಬೇಗ ಕಂಡು ಹಿಡಿದು ವಾಣಿಜ್ಯ ನಗರಿಯನ್ನು ಗಾಂಜಾ ಮುಕ್ತ ನಗರವನ್ನಾಗಿಸಬೇಕೆಂದು ಜನರು ಆಗ್ರಹಿಸಿದ್ದಾರೆ.

News First Live Kannada


Leave a Reply

Your email address will not be published. Required fields are marked *