ಗಂಡು-ಹೆಣ್ಣು ಇಬ್ಬರ ಜತೆಗೂ ಲೈಂಗಿಕ ಆಸಕ್ತಿ ಇರುವ ಮಹಿಳೆ ಪಾತ್ರದಲ್ಲಿ ಸಮಂತಾ; ಮತ್ತೆ ವಿವಾದಕ್ಕೆ ನಾಂದಿ? | Samantha’s Bisexual role in Arrangements of Love may lead to controversy in Tamil Nadu again


ಗಂಡು-ಹೆಣ್ಣು ಇಬ್ಬರ ಜತೆಗೂ ಲೈಂಗಿಕ ಆಸಕ್ತಿ ಇರುವ ಮಹಿಳೆ ಪಾತ್ರದಲ್ಲಿ ಸಮಂತಾ; ಮತ್ತೆ ವಿವಾದಕ್ಕೆ ನಾಂದಿ?

ಸಮಂತಾ

ನಟಿ ಸಮಂತಾ ರುತ್​ ಪ್ರಭು (Samantha) ಅವರು ಸಿನಿಮಾಗಳ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ಡಿಫರೆಂಟ್​ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅದರಲ್ಲೂ ನಾಗ ಚೈತನ್ಯ (Naga Chaitanya) ಜತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಬಳಿಕ ಅವರ ಜೀವನ ಸಂಪೂರ್ಣ ಬದಲಾಗಿದೆ. ಅವರಿಬ್ಬರ ಸಂಸಾರದಲ್ಲಿ ಬಿರುಕು ಮೂಡಲು ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸರಣಿಯಲ್ಲಿ ಸಮಂತಾ ಮಾಡಿದ ಬೋಲ್ಡ್​ ಪಾತ್ರವೇ ಕಾರಣ ಎಂದು ಹೇಳಲಾಗಿತ್ತು. ಆದರೆ ಈಗ ಅವರು ಅದಕ್ಕಿಂತಲೂ ಹೆಚ್ಚು ಬೋಲ್ಡ್​ ಆದಂತಹ ಪಾತ್ರ ಮಾಡಲು ತೀರ್ಮಾನಿಸಿದ್ದಾರೆ. ಇಂಗ್ಲಿಷ್​ ಸಿನಿಮಾ ನಿರ್ದದೇಶಕ ಫಿಲಿಪ್​ ಜಾನ್ (Philip John)​ ಆ್ಯಕ್ಷನ್​-ಕಟ್​ ಹೇಳಲಿರುವ ‘ಅರೇಂಜ್​ಮೆಂಟ್ಸ್​ ಆಫ್​ ಲವ್​’ (Arrangements of Love) ಸಿನಿಮಾದಲ್ಲಿ ಸಮಂತಾ ಬೈಸೆಕ್ಸುವಲ್​ (Bisexual) ತಮಿಳು ಮಹಿಳೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆ ವಿಚಾರ ಈಗ ಚರ್ಚೆಗೆ ಕಾರಣ ಆಗುತ್ತಿದೆ.

ಸಮಂತಾ ನಟಿಸಿದ್ದ ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ ಬಗ್ಗೆ ತಮಿಳುನಾಡಿನ ಜನರು ಅಸಮಾಧಾನ ವ್ಯಕ್ತಪಡಿಸಿದ್ದರು. ತಮಿಳರ ಭಾವನೆಗಳಿಗೆ ಸಮಂತಾ ಪಾತ್ರವು ಧಕ್ಕೆ ಉಂಟುಮಾಡುತ್ತದೆ ಎಂದು ಆರೋಪಿಸಲಾಗಿತ್ತು. ಈಗ ‘ಅರೇಂಜ್​ಮೆಂಟ್ಸ್​ ಆಫ್​ ಲವ್​’ ಸಿನಿಮಾದಲ್ಲಿ ಬೈಸೆಕ್ಸುವಲ್​ ತಮಿಳು ಮಹಿಳೆಯಾಗಿ ಸಮಂತಾ ನಟಿಸಿದರೆ ಮತ್ತೆ ವಿವಾದ ಭುಗಿಲೇಳುವ ಸಾಧ್ಯತೆ ಇದೆ. ಬೈಸೆಕ್ಸುವಲ್​ ಎಂದರೆ ಗಂಡು ಮತ್ತು ಹೆಣ್ಣು ಇಬ್ಬರಲ್ಲೂ ಲೈಂಗಿಕ ಆಸಕ್ತಿ ಹೊಂದಿರುವ ವ್ಯಕ್ತಿ. ತಮಿಳುನಾಡಿನ ಮಹಿಳೆಯನ್ನು ಆ ರೀತಿಯ ಪಾತ್ರದಲ್ಲಿ ತೋರಿಸಲಾಗುತ್ತದೆ ಎಂಬ ವಿಷಯ ಕೇಳಿಬಂದ ಬಳಿಕ ಅನೇಕರು ಅದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಸದ್ಯ ಸಮಂತಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ವಿಚ್ಛೇದನದ ಬಳಿಕ ಈ ಇಂಟರ್​ನ್ಯಾಷನಲ್​ ಪ್ರಾಜೆಕ್ಟ್​ ಒಪ್ಪಿಕೊಂಡಿರುವುದು ಸಮಂತಾಗೆ ಖುಷಿ ನೀಡಿದೆ. ಈ ಬಗ್ಗೆ ಇತ್ತೀಚೆಗಷ್ಟೇ ಅನೌನ್ಸ್​ ಮಾಡಿದ್ದ ಅವರು, ತಮ್ಮ ಮನದ ಸಂತಸವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ನಿರ್ದೇಶಕ ಫಿಲಿಪ್​ ಜಾನ್​ ಜತೆ ತಾವು ಇರುವ ಫೋಟೋವನ್ನು ಶೇರ್​ ಮಾಡಿಕೊಂಡು ಸಿಹಿ ಸುದ್ದಿ ನೀಡಿದ್ದರು.

‘ಇದು ನನಗೆ ಹೊಸ ಪ್ರಪಂಚ. ನಾನು ಕೊನೆ ಬಾರಿಗೆ ಆಡಿಷನ್​ ನೀಡಿದ್ದು 2009ರಲ್ಲಿ ‘ಏ ಮಾಯ ಚೇಸಾವೆ’ ಚಿತ್ರಕ್ಕಾಗಿ. 12 ವರ್ಷಗಳ ಬಳಿಕ ಮತ್ತೆ ಆಡಿಷನ್​ ನೀಡಿದ್ದೇನೆ. ಮತ್ತೆ ಅದೇ ರೀತಿ ನರ್ವಸ್​ ಆಗಿದ್ದೇನೆ. ಫಿಲಿಪ್​ ಜಾನ್ ಜೊತೆ ಕೆಲಸ ಮಾಡುವುದು ತುಂಬ ಅಪರೂಪದ ಅವಕಾಶ. ಈ ಪಾತ್ರಕ್ಕೆ ಆಯ್ಕೆ ಆಗಿರುವುದು ತುಂಬ ಖುಷಿ ಆಗುತ್ತಿದೆ. ಈ ಪಯಣ ಆರಂಭಿಸಲು ಕಾತರದಿಂದ ಕಾಯುತ್ತಿದ್ದೇನೆ’ ಎಂದು ಸಮಂತಾ ಹೇಳಿದ್ದಾರೆ.​

ಇದನ್ನೂ ಓದಿ:

ಮಾಜಿ ಪತಿ ಬರ್ತ್​ಡೇ ಕಾರಣಕ್ಕೆ ಟೀಕೆ ಎದುರಿಸಿ, ಮರುದಿನವೇ ನಾಯಿ ಜನ್ಮದಿನ ಆಚರಿಸಿದ ಸಮಂತಾ

Samantha: ‘ಪುಷ್ಪ’ ಚಿತ್ರದ ಐಟಂ ಸಾಂಗ್​ನಲ್ಲಿ ಡ್ಯಾನ್ಸ್​ ಮಾಡಲು ಸಮಂತಾ ಕೇಳಿದ ಸಂಬಳ ಎಷ್ಟು ಕೋಟಿ?

TV9 Kannada


Leave a Reply

Your email address will not be published. Required fields are marked *