ಬೆಂಗಳೂರು: ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕೊಲೆಯೊಂದು ನಡೆದಿತ್ತು. ಪತ್ನಿಯೊಬ್ಬಳು ಗಂಡನನ್ನ ಬರ್ಬರವಾಗಿ ಕೊಲೆ ಮಾಡಿ ಠಾಣೆಗೆ ಶರಣಾಗಿದ್ದಳು.
ಸ್ವಾಮಿರಾಜ್ ಹೆಂಡತಿಯಿಂದಲೇ ಕೊಲೆಯಾದ ರಿಯಲ್ ಎಸ್ಟೇಟ್ ಉದ್ಯಮಿ. ನೇತ್ರಾ ಕೊಲೆ ಮಾಡಿದ ಆರೋಪಿ. ಈ ಪ್ರಕರಣದ ಜಾಡು ಹಿಡಿದು ಹೊರಟಿದ್ದ ಮಾದನಾಯಕನಹಳ್ಳಿ ಪೊಲೀಸರಿಗೆ ಮಹತ್ವದ ವಿಷಯಗಳು ಲಭ್ಯವಾಗಿವೆ. ಕೊಲೆ ಮಾಡಿದ್ದ ನೇತ್ರಾ, ನನ್ನ ಪತಿ ಹತ್ತಿರದ ಸಂಬಂಧಿಗಳೊಂದಿಗೆ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಹಿಂಸಿಸುತ್ತಿದ್ದ. ಹೀಗಾಗಿ ಕಬ್ಬಿಣದ ರಿಂಚ್ನಿಂದ ಹೊಡೆದು ಕೊಲೆ ಮಾಡಿದೆ ಎಂದು ಪೊಲೀಸರ ಮುಂದೆ ನೇತ್ರಾ ಹೇಳಿದ್ದಳು.
ಇದೀಗ ಪೊಲೀಸ್ ತನಿಖೆ ವೇಳೆ ಕೆಲವೊಂದಿಷ್ಟು ವಿಚಾರಗಳು ಗೊತ್ತಾಗಿದ್ದು, ಆರೋಪಿ ನೇತ್ರಾಗೆ ಕೋಟಿ ಬೆಲೆ ಬಾಳುವ ಬಂಗಲೆ, ಕಾರು, ಚಿನ್ನಾಭರಣಗಳನ್ನ ಕೊಡಿಸಿದ್ದನಂತೆ ಸ್ವಾಮಿರಾಜ್. ಆ ನಡುವೆ ನೇತ್ರಾಗೆ ಬೇರೊಬ್ಬನ ಮೇಲೆ ಮನಸ್ಸಾಗಿತ್ತು. ಈ ವಿಚಾರ ಸ್ವಾಮಿಗೆ ಗೊತ್ತಾಗಿ ಆತನ ಜೊತೆ ಹೋಗದಂತೆ, ಮಾತನಾಡದಂತೆ ವಾರ್ನಿಂಗ್ ಮಾಡಿದ್ದ. ಇದನ್ನ ಲೆಕ್ಕಿಸದೇ ಆತನ ಜೊತೆ ಪತ್ನಿ ನೇತ್ರಾ ಹೋಗಿದ್ದಳಂತೆ.
ಇದ್ರಿಂದ ಮನೆಯಲ್ಲಿ ನೇತ್ರಾ ಹಾಗೂ ಸ್ವಾಮಿ ಮಧ್ಯೆ ಜಗಳ ಆಗಿತ್ತಂತೆ. ತನ್ನ ಅಕ್ರಮ ಸಂಬಂಧಕ್ಕೆ ಗಂಡ ಅಡ್ಡಿಯಾಗ್ತಾನೇ ಎಂದು ಪ್ರಿಯಕರನ ಜೊತೆ ಸೇರಿ ಹತ್ಯೆಗೆ ಪ್ಲಾನ್ ಮಾಡಿದ್ದಾಳೆ. ಬಳಿಕ ಬಳಿಕ ಠಾಣೆಗೆ ಬಂದು ಕಥೆಯನ್ನ ಕಟ್ಟಿದ್ದಾಳೆ ಅನ್ನೋದು ತನಿಖೆಯಿಂದ ಗೊತ್ತಾಗಿದೆ. ಸದ್ಯ ಆಕೆಯ ಪ್ರಿಯಕರ ಹಾಗೂ ಆತನ ಸ್ನೇಹಿತನನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಪತಿಯನ್ನ ಬರ್ಬರವಾಗಿ ಕೊಲೆಗೈದು ಪೊಲೀಸರಿಗೆ ಶರಣಾದ ಎರಡನೇ ಪತ್ನಿ.