‘ಗಂಧದಗುಡಿ’ ಅಂದಾಗ ಅಪ್ಪು ಕಣ್ಣಲ್ಲಿ ಮೂಡುತ್ತಿದ್ದ ಮಿಂಚು ನನಗಿನ್ನೂ ನೆನಪಿದೆ-ಯಶ್​


ಪವರ್​ ಸ್ಟಾರ್​ ಪುನೀತ್ ರಾಜ್​ಕುಮಾರ್​ ಅವರ ಕನಸಿನ ಯೋಜನೆಯಾದ ‘ಗಂಧದಗುಡಿ’ ವೈಲ್ಡ್​ ಡಾಕ್ಯಮೆಂಟರಿ ಟೀಸರ್​ ಬಗ್ಗೆ ರಾಕಿಂಗ್​ ಸ್ಟಾರ್​ ಯಶ್​ ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಫಸ್ಟ್​ ರಿಯಾಕ್ಷನ್​ ನೀಡಿದ್ದಾರೆ. ಅಪ್ಪು ಅವರ ತಾಯಿ ಪಾರ್ವತಮ್ಮ ರಾಜ್​ಕುಮಾರ್​ ಅವರ ಜನ್ಮದಿನದಂದು ‘ಗಂಧದಗುಡಿ‘’ ಟೀಸರ್​ ಅನ್ನು ಅಪ್ಪು ಪತ್ನಿ ಅಶ್ವಿನಿ ಪಿಆರ್​ಕೆ ಆಡಿಯೋನಲ್ಲಿ ರಿಲೀಸ್ ಮಾಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್​ ಅಪ್ಪು ಅವರ ಗಂಧದಗುಡಿ ಟೀಸರ್​ ಅನ್ನು ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನೀವು ಈ ಯೋಜನೆಯ ಬಗ್ಗೆ ಮಾತನಾಡಿದಾಗೆಲ್ಲ ನಿಮ್ಮ ಕಣ್ಣಿನಲ್ಲಿ ಮೂಡಿ ಬರುತ್ತಿದ್ದ ಆ ಮಿಂಚು ಈಗಲೂ ನನಗೆ ನೆನಪಿದೆ. ಈ ಚಿತ್ರದ ಬಗ್ಗೆ ನೀವು ಹೊಂದಿದ ಆ ಉತ್ಸಾಹವು ನಿಮ್ಮ ಹೃದಯಕ್ಕೆ ಎಷ್ಟು ಹತ್ತಿರವಾಗಿದೆ ಎಂದು ತಿಳಿಯುತ್ತದೆ. ನಮ್ಮ ಗಂಧದಗುಡಿಯನ್ನು ನಿಮ್ಮ ಕಣ್ಣಾರೆ ತೋರಿಸಿದಕ್ಕಾಗಿ ನಿಮಗೆ ಧನ್ಯವಾದಗಳು ಅಪ್ಪು ಸರ್​. ಇದು ನಿಜವಾಗಿಯೂ ಸ್ವರ್ಗದಂತಿದೆ. ಎಂದು ಯಶ್​ ಬರೆದುಕೊಂಡಿದ್ದಾರೆ. ಗಂಧದಗುಡಿ  ಟೀಸರ್​ಗೆ ಒಳ್ಳೆ ರೆಸ್ಪಾನ್ಸ್​ ಸಿಕ್ಕಿದು ಮುಂದಿನ ವರ್ಷ ಗಂಧದಗುಡಿ ಡಾಕ್ಯುಮೆಂಟರಿ ಥಿಯೇಟರ್​ನಲ್ಲಿ ರಿಲೀಸ್​ ಆಗಲಿದೆ.

The post ‘ಗಂಧದಗುಡಿ’ ಅಂದಾಗ ಅಪ್ಪು ಕಣ್ಣಲ್ಲಿ ಮೂಡುತ್ತಿದ್ದ ಮಿಂಚು ನನಗಿನ್ನೂ ನೆನಪಿದೆ-ಯಶ್​ appeared first on News First Kannada.

News First Live Kannada


Leave a Reply

Your email address will not be published. Required fields are marked *