‘ಗಂಧದ ಗುಡಿ’ಯಲ್ಲಿ ಪುನೀತ್ ಹೇಳುವ ಡೈಲಾಗ್​ಗೆ ವಿಧಿಯನ್ನು ಶಪಿಸಿದ ಫ್ಯಾನ್ಸ್​; ಅಂಥದ್ದೇನಿದೆ? – Gandhada Gudi Puneeth Rajkumar Dialogues Makes Fans Eye wet


‘ಗಂಧದ ಗುಡಿ’ ಡಾಕ್ಯುಮೆಂಟರಿ ಮಾದರಿಯಲ್ಲಿದೆ. ಇಲ್ಲಿ ಸಿನಿಮೀಯ ಅಂಶಗಳು ಇಲ್ಲ. ಪುನೀತ್ ಅವರು ಜನಸಾಮಾನ್ಯರಂತೆ ಕಾಣಿಸಿಕೊಂಡಿದ್ದಾರೆ. ಹಲವು ಕುಗ್ರಾಮಗಳಿಗೆ ತೆರಳುವ ಅವರು ಮಕ್ಕಳ ಜತೆ ಮಕ್ಕಳಂತೆ ಬೆರೆತಿದ್ದಾರೆ.

ಪುನೀತ್ ರಾಜ್​ಕುಮಾರ್ (Puneeth Rajkumar) ಅವರ ‘ಗಂಧದ ಗುಡಿ’ ಇಂದು (ಅಕ್ಟೋಬರ್ 28) ರಿಲೀಸ್ ಆಗಿದೆ. ಇದು ಪುನೀತ್ ಅವರ ಕನಸಿನ ಕೂಸಾಗಿತ್ತು. ಇದನ್ನು ನೋಡಿ ಫ್ಯಾನ್ಸ್ ಭಾವುಕರಾಗುತ್ತಿದ್ದಾರೆ. ಆ್ಯಂಕರ್ ಅನುಶ್ರೀ ಸೇರಿ ಅನೇಕರು ಕಣ್ಣೀರು ಹಾಕಿದ್ದಾರೆ. ಪುನೀತ್ ಅವರ ಕೊನೆಯ ಸಿನಿಮಾ ಇದು ಎಂಬ ಕಾರಣಕ್ಕೆ ಅಭಿಮಾನಿಗಳು ಭಾವುಕರಾಗುತ್ತಿದ್ದಾರೆ. ಈಗ ‘ಗಂಧದ ಗುಡಿ’ಯ (Gandhada Gudi) ಕೆಲ ಡೈಲಾಗ್​ಗಳನ್ನು ಕೇಳಿ ಫ್ಯಾನ್ಸ್ ಭಾವುಕರಾಗುತ್ತಿದ್ದಾರೆ. ಎಲ್ಲರೂ ವಿಧಿಯನ್ನು ಶಪಿಸುತ್ತಿದ್ದಾರೆ.

‘ಗಂಧದ ಗುಡಿ’ ಡಾಕ್ಯುಮೆಂಟರಿ ಮಾದರಿಯಲ್ಲಿದೆ. ಇಲ್ಲಿ ಸಿನಿಮೀಯ ಅಂಶಗಳು ಇಲ್ಲ. ಪುನೀತ್ ಅವರು ಜನಸಾಮಾನ್ಯರಂತೆ ಕಾಣಿಸಿಕೊಂಡಿದ್ದಾರೆ. ಹಲವು ಕುಗ್ರಾಮಗಳಿಗೆ ತೆರಳುವ ಅವರು ಮಕ್ಕಳ ಜತೆ ಮಕ್ಕಳಂತೆ ಬೆರೆತಿದ್ದಾರೆ. ಈ ಡಾಕ್ಯುಮೆಂಟರಿಯಲ್ಲಿ ಬರುವ ಕೆಲ ಸಂಭಾಷಣೆಗಳನ್ನು ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಪುನೀತ್ ರಾಜ್​ಕುಮಾರ್ ಅವರಿಗೆ ಹಾವೆಂದರೆ ಭಯ. ಚಿಕ್ಕ ವಯಸ್ಸಿನಲ್ಲಿ ಸಿನಿಮಾ ಮಾಡುವಾಗ ಪುನೀತ್ ಕತ್ತಿಗೆ ಹಾವನ್ನು ಸುತ್ತಲಾಗಿತ್ತು. ಹಾವು ಉಸಿರಾಡುವ ಶಬ್ದ ಪುನೀತ್​ಗೆ ಸರಿಯಾಗಿ ಕೇಳಿಸಿತ್ತು. ಆಗಿನಿಂದ ಪುನೀತ್​ಗೆ ಹಾವೆಂದರೆ ಭಯ. ಕಾಡಲ್ಲಿ ಸುತ್ತಾಡುವಾಗ ಹಾವಿದೆ ಎಂಬ ವಿಚಾರ ತಿಳಿದು ಪುನೀತ್ ಭಯಗೊಂಡಿದ್ದರು. ‘ಮೂರು ಸಿನಿಮಾ ಒಪ್ಪಿಕೊಂಡಿದ್ದೇನೆ. ಮನೆಯಲ್ಲಿ ಹೆಂಡತಿ ಮಕ್ಕಳು ಇದ್ದಾರೆ. ನಾವು ಸೇಫ್ ಆಗಿ ಬೆಂಗಳೂರು ತಲುಪುತ್ತೀವಿ ತಾನೇ’ ಎಂದು ಪುನೀತ್ ಪ್ರಶ್ನೆ ಮಾಡಿದ್ದರು. ಇದನ್ನು ನೆನಪಿಸಿಕೊಂಡು ಅಭಿಮಾನಿಗಳು ಭಾವುಕರಾಗಿದ್ದಾರೆ.

TV9 Kannada


Leave a Reply

Your email address will not be published.