‘ಗಂಧದ ಗುಡಿ’ ಡಾಕ್ಯುಮೆಂಟರಿ ಶೀರ್ಷಿಕೆ ಟೀಸರ್​ ನೋಡಿ ಶಾಕ್​ ಮತ್ತು ಬೇಸರ ಎರಡೂ ಆಯ್ತು; ಶಿವರಾಜ್​ಕುಮಾರ್​ | Shiva rajkumar Talks About Gandhada Gudi Teaser


ಪುನೀತ್​ ರಾಜ್​ಕುಮಾರ್​ ಅವರು ಕರುನಾಡಿನ ಪ್ರಕೃತಿ ಸೌಂದರ್ಯ ಮತ್ತು ವನ್ಯಜೀವಿಗಳ ಕುರಿತ ಸಾಕ್ಷ್ಯಚಿತ್ರದ ನಿರ್ಮಾಣದಲ್ಲಿ ಅಪಾರ ಆಸಕ್ತಿ ತೋರಿಸಿದ್ದರು. ಆದರೆ ಅದನ್ನು ಅಭಿಮಾನಿಗಳ ಮುಂದಿಡುವ ಮುನ್ನವೇ ಅವರು ಅಸುನೀಗಿದ್ದು ನೋವಿನ ಸಂಗತಿ. ಭೌತಿಕವಾಗಿ ಅವರ ಅನುಪಸ್ಥಿತಿಯಲ್ಲೇ ಇಂದು (ಡಿ.6) ‘ಗಂಧದ ಗುಡಿ’ ಡಾಕ್ಯುಮೆಂಟರಿಯ ಶೀರ್ಷಿಕೆ ಟೀಸರ್​ ಅನಾವರಣ ಆಗಿದೆ. ಪುನೀತ್​ ರಾಜ್​ಕುಮಾರ್​ ಅವರ ‘ಪಿಆರ್​ಕೆ ಆಡಿಯೋ’ ಮೂಲಕ ಟೈಟಲ್​ ಟೀಸರ್​ ರಿಲೀಸ್​ ಮಾಡಲಾಗಿದೆ. ಈ ದಿನಕ್ಕಾಗಿ ಅಪ್ಪು ಅಭಿಮಾನಿಗಳು ಕಾತರದಿಂದ ಕಾದಿದ್ದರು. ಟೈಟಲ್​ ಟೀಸರ್​ ನೋಡಿ ಎಲ್ಲರೂ ಖುಷಿಪಡುತ್ತಿದ್ದಾರೆ. ಈ ಟೀಸರ್​ ಬಗ್ಗೆ ಶಿವರಾಜ್​ಕುಮಾರ್​ ಮಾತನಾಡಿದ್ದಾರೆ. ‘ನನಗೆ ಶಾಕ್​ ಮತ್ತು ಬೇಸರ ಎರಡೂ ಆಯ್ತು’ ಎಂದಿದ್ದಾರೆ ಶಿವಣ್ಣ. ಹಾಗಾದರೆ, ಅವರು ಈ ಸಾಕ್ಷ್ಯಚಿತ್ರದ ಬಗ್ಗೆ ಏನೆಲ್ಲ ಹೇಳಿದ್ರು ಎಂಬುದಕ್ಕೆ ವಿಡಿಯೋ ನೋಡಿ.

TV9 Kannada


Leave a Reply

Your email address will not be published. Required fields are marked *