ಐಸಿಸಿ ಟಿ20 ವಿಶ್ವಕಪ್ನಲ್ಲಿ ಆರಂಭದಲ್ಲಿ ಎರಡು ಪಂದ್ಯಗಳಲ್ಲಿ ಸೋತ ಭಾರತ ಮೊದಲ ಜಯ ಸಾಧಿಸಿದೆ. ಇತ್ತೀಚೆಗೆ ಬುಧವಾರ ಅಫ್ಘಾನ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 66 ರನ್ ಅಂತರದ ಭರ್ಜರಿ ಗೆಲುವು ಕಂಡಿದೆ.
ಭಾರತದ ಪರ ಯಾವಾಗಲೂ ಮೊದಲು ಬ್ಯಾಟಿಂಟ್ಗೆ ಇಳಿದ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಮತ್ತು ರೋಹಿತ್ ಶರ್ಮಾ ಭದ್ರ ಬುನಾದಿ ಹಾಕಿದರು. ಮೊದಲ ವಿಕೆಟ್ಗೆ ಇವರಿಬ್ಬರು 140 ರನ್ ಪೇರಿಸಿದ್ರು. ರೋಹಿತ್ ಶರ್ಮಾ 74 ರನ್ ಗಳಿಸಿದರೆ, ರಾಹುಲ್ 69 ರನ್ ಗಳಿಸಿದರು.
ರೋಹಿತ್-ರಾಹುಲ್ ಈ ಜೊತೆಯಾಟದಿಂದ 14 ವರ್ಷಗಳ ದಾಖಲೆಯೊಂದು ಮುರಿಯಿತು. 2007ರ ಟಿ20 ವಿಶ್ವಕಪ್ನಲ್ಲಿ ಗೌತಮ್ ಗಂಭೀರ್ ಮತ್ತು ವೀರೆಂದ್ರ ಸೆಹವಾಗ್ ಅವರು ಇಂಗ್ಲೆಂಡ್ ವಿರುದ್ಧ ಮೊದಲ ವಿಕೆಟ್ಗೆ 136 ರನ್ ಜೊತೆಯಾಟ ನಡೆಸಿದ್ದರು. ಈ ದಾಖಲೆ ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ ರಾಹುಲ್-ರೋಹಿತ್ ಅವರಿಂದ ಮುರಿಯಲ್ಪಟ್ಟಿತು.