ಗಂಭೀರ ಆರೋಗ್ಯ ಸಮಸ್ಯೆ, ಸಂಬಂಧಿಕರು ನಿಧನರಾದರೆ ಮಾತ್ರ ರಜೆ: ಬೇಕಾಬಿಟ್ಟಿ ರಜೆ ಕೇಳಿದರೆ ಶಿಸ್ತುಕ್ರಮ ಎಂದ ಬೆಂಗಳೂರು ಡಿಸಿಪಿ – New Rules for police to get leave in North East DCP Limits New Letter from Bengaluru Police Gain Attention crime news in Kannada


ಬೇಕಾಬಿಟ್ಟಿ ರಜೆ ಕೇಳಿದರೆ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಸಿರುವ ಡಿಸಿಪಿ, ಯಾವ ಸಂದರ್ಭದಲ್ಲಿ ರಜೆ ಕೇಳಬಹುದು ಎಂಬ ನಿಯಮಗಳನ್ನು ಪಟ್ಟಿ ಮಾಡಿದ್ದಾರೆ.

ಗಂಭೀರ ಆರೋಗ್ಯ ಸಮಸ್ಯೆ, ಸಂಬಂಧಿಕರು ನಿಧನರಾದರೆ ಮಾತ್ರ ರಜೆ: ಬೇಕಾಬಿಟ್ಟಿ ರಜೆ ಕೇಳಿದರೆ ಶಿಸ್ತುಕ್ರಮ ಎಂದ ಬೆಂಗಳೂರು ಡಿಸಿಪಿ

ಅಧಿಕಾರಿಗಳಿಂದ ಸೂಚನೆ ಸ್ವೀಕರಿಸುತ್ತಿರುವ ಬೆಂಗಳೂರು ಪೊಲೀಸರು (ಸಂಗ್ರಹ ಚಿತ್ರ)

ಬೆಂಗಳೂರು: ಸಿಬ್ಬಂದಿ ಕೊರತೆ, ಇರುವ ಸಿಬ್ಬಂದಿಗೆ ಹತ್ತಾರು ಡ್ಯೂಟಿ ಸೇರಿದಂತೆ ಹಲವು ಸಮಸ್ಯೆಗಳಿಂದ ಜನರು ಪೊಲೀಸ್ ಠಾಣೆಗಳಲ್ಲಿ ಸಣ್ಣಪುಟ್ಟ ಕೆಲಸಗಳಿಗೂ ಪರದಾಡುವಂತಾಗಿದೆ. ಈ ಸಮಸ್ಯೆಯು ಬೆಂಗಳೂರು ನಗರದ ಆಗ್ನೇಯ (Bengaluru North East DCP) ವಿಭಾಗಕ್ಕೂ ಹೊರತಾಗಿಲ್ಲ. ಆದರೆ ಈ ಸಮಸ್ಯೆಗೆ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬು ವಿಶಿಷ್ಟ ರೀತಿಯಲ್ಲಿ ಪರಿಹಾರ ಕಂಡುಕೊಂಡಿದ್ದಾರೆ. ಬೇಕಾಬಿಟ್ಟಿ ರಜೆ ಕೇಳಿದರೆ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಸಿರುವ ಅವರು, ಯಾವ ಸಂದರ್ಭದಲ್ಲಿ ರಜೆ ಕೇಳಬಹುದು ಎಂಬ ನಿಯಮಗಳನ್ನು ಪಟ್ಟಿ ಮಾಡಿದ್ದಾರೆ.

ಅದರಂತೆ ಇನ್ನು ಮುಂದೆ ಗಂಭೀರ ಆರೋಗ್ಯ ಸಮಸ್ಯೆ, ಸಂಬಂಧಿಕರು ನಿಧನರಾದರೆ ಮಾತ್ರ ಸಿಬ್ಬಂದಿ ರಜೆ ಕೇಳಬಹುದು. ಅನಗತ್ಯ ರಜೆ ತೆಗೆದುಕೊಳ್ಳುವುದರಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಕಷ್ಟವಾಗುತ್ತದೆ. ಪೊಲೀಸ್ ಠಾಣೆಗಳು, ಕಚೇರಿ ಕೆಲಸದಲ್ಲಿ ತೊಂದರೆಯಾಗುತ್ತಿದೆ. ಆಗ್ನೇಯ ವಿಭಾಗದಲ್ಲಿ ಪಿಸಿಗಳಿಂದ ಹಿಡಿದು ಇನ್​ಸ್ಪೆಕ್ಟರ್ ದರ್ಜೆಯ ಅಧಿಕಾರಿಗಳಿಂದಲೂ ರಜೆಗೆ ನಿರಂತರ ಬೇಡಿಕೆ ಬರುತ್ತಿದೆ. ಕೆಲವರಂತೂ ಸಮರ್ಪಕ ಕಾರಣ ನೀಡದೆ ರಜೆ ಕೇಳುತ್ತಿದ್ದಾರೆ. ನಿತ್ಯದ ಕಾರ್ಯನಿರ್ವಹಣೆಗೆ ಸಮಸ್ಯೆಯಾದ ಹಿನ್ನೆಲೆಯಲ್ಲಿ ರಜೆ ಕುರಿತು ಡಿಸಿಪಿ ಸಿ.ಕೆ.ಬಾಬು ಆದೇಶ ಹೊರಡಿಸಿದ್ದಾರೆ.

‘ಆಗ್ನೇಯ ವಿಭಾಗದ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಸಿ ಹುದ್ದೆಯಿಂದ ಪಿಐ ಹುದ್ದೆಯ ತನಕ ಎಲ್ಲ ಪೊಲೀಸ್ ಸಿಬ್ಬಂದಿ ಬೇರೆಬೇರೆ ಕಾರಣಗಳಿಂದ ರಜೆ ಹೋಗುತ್ತಿದ್ದು, ಠಾಣಾ ಕರ್ತವ್ಯಕ್ಕೆ ಹಾಗೂ ಕಚೇರಿ ಕರ್ತವ್ಯಕ್ಕೆ ತೊಂದರೆಯಾಗುತ್ತಿದೆ. ಇನ್ನು ಮುಂದೆ ಯಾವುದೇ ಪೊಲೀಸ್ ಅಧಿಕಾರಿ, ಸಿಬ್ಬಂದಿ ಗಂಭೀರ ಸ್ವರೂಪದ ಕಾಯಿಲೆಯಿಂದ ಬಳಲುತ್ತಿದ್ದ ಮಾತ್ರ ಹಾಗೂ ಮನೆಗಳಲ್ಲಿ ಯಾರಾದರೂ ಮೃತಪಟ್ಟಲ್ಲಿ ಮಾತ್ರ ರಜೆಯ ಮೇಲೆ ತೆರಳಲು ಸೂಚಿಸಲಾಗಿದೆ. ಸಕಾರಣವಿಲ್ಲದೆ ರಜೆ ಪಡೆಯುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಯಾವುದೇ ಠಾಣಾಧಿಕಾರಿಗಳು ಹಾಗೂ ಎಸಿಪಿ ಅವರು ಮೇಲೆ ತಿಳಿಸಿರುವ ಕಾರಣ ಹೊರತುಪಡಿಸಿ ಯಾವುದೇ ರೀತಿಯ ರಜೆಗೆ ಶಿಫಾರಸು ಮಾಡದಂತೆ ಸೂಚಿಸಲಾಗಿದೆ. ಈ ಬಗ್ಗೆ ಪದೇಪದೆ ಕಚೇರಿಗೆ ಬಂದು ರಜೆಯ ಬಗ್ಗೆ ಪ್ರಸ್ತಾಪಿಸಿದರೆ ಸೂಕ್ತ ಶಿಸ್ತುಕ್ರಮ ಕೈಗೊಳ್ಳಲಾಗುವುದು. ರಜೆ ಹೋಗುವ ಎಲ್ಲಾ ಪೊಲೀಸ್ ಅಧಿಕಾರಿ / ಸಿಬ್ಬಂದಿ ಹಾಗೂ ಲಿಪಿಕ ಸಿಬ್ಬಂದಿ ಡಿಸಿಪಿಯಿಂದ ರಜೆ ಮಂಜೂರು ಮಾಡಿಕೊಳ್ಳಬೇಕು’ ಎಂದು ಜ್ಞಾಪನ ಪತ್ರದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.