ಗಟ್ಟಿಮೇಳ ಕಥೆಯಲ್ಲಿ ಟ್ವಿಸ್ಟ್​..! ವೇದಾಂತ್​ ಬದುಕಿಗೆ ಎಂಟ್ರಿ ಕೊಟ್ಟ ಆ ಫೇಮಸ್​ ನಟಿ ಯಾರು?

ಮನಸಾರೆ ಧಾರಾವಾಹಿಯಲ್ಲಿ  ಪಾರ್ಥನಾ ತಾಯಿ ದೇವಕಿ ಪಾತ್ರ ಅದ್ಭುತವಾದದ್ದು..  ಪಾರ್ಥನಾಗೆ ಮಲತಾಯಿ ಆದ್ರೂ ತನ್ನ ಮಗಳು ಹಾಗೂ ಪ್ರಾರ್ಥನಾಳನ್ನಾ ಒಂದೇ ರೀತಿ ನೋಡಿಕೊಂಡು ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ ದೇವಕಿ.. ಒಬ್ಬ ತಾಯಿಯ ಜವಾಬ್ದಾರಿಯನ್ನು ಈ ಪಾತ್ರದಲ್ಲಿ ದೇವಿಕಿ ಅಲಿಯಾಸ್​ ನಟಿ ಸ್ವಾತಿ ಅಚ್ಚುಕಟ್ಟಾಗಿ ನಿಭಾಯಿಸಿದ್ದಾಳೆ..

ಇತ್ತೀಚೆಗಷ್ಟೆ ಮನಸಾರೆ ಧಾರಾವಾಹಿ ವೈಂಡಪ್​ ಆಯ್ತು… ಆ ಧಾರಾವಾಹಿಯ ಒಂದಿಷ್ಟು ಕಲಾವಿದರು ಬೇರೆ ಬೇರೆ ಪ್ರಾಜೆಕ್ಟ್​ಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ನಟಿ ಸ್ವಾತಿ ಕೂಡ ಟಾಪ್​ ಸೀರಿಯಲ್​ನಲ್ಲಿ ಒಂದೊಳ್ಳೆ ಪಾತ್ರಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ..

ಹೌದು, ಜ್ಹೀ ಕನ್ನಡದಲ್ಲಿ ಪ್ರಾರಂಭವಾಗ್ತಾಯಿರುವ ಗಟ್ಟಿಮೇಳ ಧಾರಾವಾಹಿಯಲ್ಲಿ ಒಂದು ಪ್ರಮುಖ ರೋಲ್​ನಲ್ಲಿ ಸ್ವಾತಿ ಕಾಣಿಸಿಕೊಳ್ಳಲ್ಲಿದ್ದಾರೆ.. ಕಳೆದ 15 ದಿನಗಳಿಂದ ವೇದಾಂತ್​ ಹಾಗೂ ಅಮೂಲ್ಯ ಮದುವೆ ಸಂಭ್ರಮ ಭರ್ಜರಿಯಾಗಿ ಜರುಗಿತ್ತು.. ಒಂದಿಷ್ಟು  ಟ್ವಿಸ್ಟ್​ ಹಾಗೂ ಟರ್ನ್​ಗಳನ್ನ ಹುಟ್ಟು ಹಾಕಿ.. ಸಾಕಷ್ಟು ಅಡೆ ತಡೆಗಳಾದ್ರೂ ಅಮ್ಮು ವೇದಾಂತ್​ ಮದುವೆ ಅದ್ಧೂರಿಯಾಗಿ ನೇರವೆರಿದೆ.. ಈ ಮುಂಚೆ ಅಮುಲ್ಯಾ ಕಿಡ್ನ್ಯಾಪ್​ ಆದಾಗ ಹೊಸ ಕಥೆಯೊಂದು ತೆರೆದುಕೊಂಡಿತ್ತು.. ಅದೂ ಬರೋಬ್ಬರಿ 20 ವರ್ಷಗಳ ಹಿಂದಿನ ರೋಚಕ ಕಹಾನಿ.. ವೇದಾಂತ್​ ತಾಯಿ ಅಂದ್ರೆ ಸುಹಾಸಿನಿ ಮಹಿಳೆಯೊಬ್ಬರನ್ನು ಬಂಧನಗೊಳಿಸಿದ ಎಳೆ..

ಹೌದು, ವೇದಾಂತ್​, ವಿಕ್ರಾಂತ್​ ಆದ್ಯಾ ಹಾಗೂ ದೃವ ಈ 4 ಮಕ್ಕಳ ಸ್ವಂತ ತಾಯಿ… ಅಂದ್ರೆ ವೈದೇಹಿ ವಸಿಷ್ಠರನ್ನೂ  ಸುಹಾಸಿನಿ 20 ವರ್ಷಗಳಿಂದ ಕೂಡ ಬಂಧನದಲ್ಲಿಟ್ಟಿರುತ್ತಾಳೆ.. ಇದೀಗ ವೈದೇಹಿ ಅವ್ರ ಕಥೆ ತೆರೆದುಕೊಂಡಿದೆ.. ಅಮುಲ್ಯಾ ಕಿಡ್ನ್ಯಾಪ್​ ಆದಾಗ ವೈದೆಹಿ ಅವ್ರನ್ನಾ ಬಂಧನಗೊಳಿಸಿದ ಸ್ಥಳದಲ್ಲಿಯೇ ಅಮ್ಮುಲ್ಯಾಳನ್ನೂ ಕೂಡ ಕಟ್ಟಿ ಹಾಕಿರ್ತಾರೆ.. ಆ ಸಂದರ್ಭದಲ್ಲಿ  ವೈದೇಹಿ ಅವ್ರನ ಮೀಟ್​ ಆಗಿರ್ತಾಳೆ.. ಅವ್ರನ್ನಾ ಕೂಡಾ ಆ ಬಂಧನದಿಂದ ಹೊರ ತರಲು ನೋಡ್ತಾಳೆ.. ಆದ್ರೇ ಆಗಲ್ಲಾ..

ಸದ್ಯ ಆ ಎಳೆಯಿಂದ ಧಾರಾವಾಹಿಯಲ್ಲಿ ಮುಂಬರುವ ದಿನಗಳಲ್ಲಿ ದೊಡ್ಡದೊಂದು ಟ್ವಿಸ್ಟ್​ ಸೀಗೊದು ಫಿಕ್ಸ್​.  ವೈದೇಹಿ ಪಾತ್ರವನ್ನು ಯಾರೂ ನಿಭಾಯಿಸ್ತಾರೆ ಎಂಬ ಕುತೂಹಲ ಎಲ್ಲರಲ್ಲು ಮನೆ ಮಾಡಿತ್ತು… ಇದೀಗ ಆ ಕ್ಯೂರಿಯಾಸಿಟಿಗೆ ಬ್ರೇಕ್​ ಸಿಕ್ಕಿದ್ದು.. ನಟಿ ಸ್ವಾತಿ ವೈದೆಹಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.. ಆ ಪಾತ್ರದ ಬಗ್ಗೆ ಕೇಳಿದಾಗ  ತುಂಬಾನೆ ಚಾಲೆಂಜಿಂಗ್​ ಅನಿಸ್ತು.. ಹಾಗೂ ಇದು ಒಂದು ವಿಭಿನ್ನ ಪಾತ್ರ ಕೂಡಾ ಹೌದು..  ಹಾಗಾಗಿ ಪಾತ್ರವನ್ನು ಒಪ್ಪಿಕೊಂಡೆ.. ಸದ್ಯ ಈ ವೈದೇಹಿ ಪಾತ್ರದ ಶೂಟಿಂಗ್​ ಕೂಡಾ ಶುರುವಾಗಿದ್ದು ಮುಂದಿನ ದಿನಗಳಲ್ಲಿ ಪ್ರಸಾರ ಆಗಲಿದೆ ಎಂದು ಸ್ವತಃ ನಟಿ ಸ್ವಾತಿ ನ್ಯೂಸ್​ಫಸ್ಟ್​ ಜೊತೆ ಹಂಚಿಕೊಂಡಿದ್ದಾರೆ..ಒಟ್ನಲ್ಲಿ ಹೊಸ ಪಾತ್ರದ ಮೂಲಕ ನಿಮ್ಮನ್ನು ರಂಜಿಸಲು ಸಜ್ಜಾಗ್ತಾಯಿರುವ ನಟಿ ಸ್ವಾತಿಗೆ ನಮ್​ ಕಡೆಯಿಂದ ಆಲ್​ ದಿ ಬೆಸ್ಟ್​

News First Live Kannada

Leave a comment

Your email address will not be published. Required fields are marked *