‘ಗಟ್ಟಿಮೇಳ’ ನಿರ್ದೇಶಕನ ಹೊಸ ಸಾಹಸ.. ಶೀಘ್ರದಲ್ಲೇ ಶುರುವಾಗಲಿದೆ ಹೊಸ ಕತೆ


ಸ್ಟಾರ್‌ ಸುವರ್ಣದಲ್ಲಿ ಹೊಚ್ಚ ಹೊಸ ಧಾರವಾಹಿಯ ಪ್ರೊಮೋ ಬಿಡುಗಡೆಯಾಗಿದೆ. ಆ ಸೀರಿಯಲ್‌ನ ಹೆಸರು ಜೇನುಗೂಡು. ಸಂಕ್ರಾಂತಿ ಹಬ್ಬದ ವೇಳೆ ಹೊಸ ಸೀರಿಯಲ್‌ ಪ್ರೊಮೋ ರಿಲೀಸ್ ಆಗಿದ್ದು, ಕೂಡು ಕುಟುಂಬದ ಕತೆ ಅನ್ನೋದು ನೀಟಾಗಿ ಗೊತ್ತಾಗ್ತಿದೆ.

ವಿಶೇಷ ಅಂದ್ರೆ, ಈ ಸೀರಿಯಲ್ ಅ​ನ್ನ ಡೈರೆಕ್ಷನ್​ ಮಾಡ್ತಿರೋದು ಗಟ್ಟಿಮೇಳ ಧಾರಾವಾಹಿಯ ನಿರ್ದೇಶಕರಾಗಿದ್ದ ಕೋರಮಂಗಲ ಅನಿಲ್‌. ಈ ಹಿಂದೆ ಹೇಳಿ ಹೋಗು ಕಾರಣ ಅನ್ನೋ ಸೀರಿಯಲ್‌ ಅನೌನ್ಸ್ ಆಗಿತ್ತು. ಆ ಧಾರಾವಾಹಿಯನ್ನೂ ಕೋರಮಂಗಲ ಅನಿಲ್‌ ನಿರ್ಮಿಸಿ ನಿರ್ದೇಶನ ಮಾಡಿದ್ದರು. ಆದ್ರೆ, ಈ ಪ್ರಾಜೆಕ್ಟ್‌ ಕಾರಣಾಂತರಗಳಿಂದ ಟೇಕಾಫ್ ಆಗ್ಲಿಲ್ಲ. ಈಗ ಕೋರಮಂಗಲ ಅನಿಲ್ ಅವರು ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡಿದ್ದಾರೆ. ಅದೇ ಜೇನುಗೂಡು.

ಈ ಸೀರಿಯಲ್‌ನ ಹೀರೋ ಯಾರು ಗೊತ್ತಾ? ಈ ಹಿಂದೆ ಯಾರಿವಳು ಸೀರಿಯಲ್‌ನ ಹೀರೋ ಆಗಿದ್ದ ಆರವ್ ಸೂರ್ಯ. ಹೀರೋಯಿನ್ ಪಾತ್ರಕ್ಕೆ ಹೊಸ ನಾಯಕಿಯನ್ನ ಆಯ್ಕೆ ಮಾಡಿಕೊಳ್ಳಲಾಗಿದೆ. ಉಳಿದಂತೆ ಪೋಷಕ ಪಾತ್ರಗಳಲ್ಲಿ ಸೀನಿಯರ್ ನಟ-ನಟಿಯರನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಅಗ್ನಿಸಾಕ್ಷಿಯ ಐಶ್ವರ್ಯಾ, ವೀಣಾ ಸುಂದರ್ ಹಾಗೂ ರಮೇಶ್ ಪಂಡಿತ್‌ ಅಭಿನಯಿಸಿದ್ದಾರೆ.

ಹೆಸರೇ ಸೂಚಿಸುವಂತೆ ಇದೊಂದು ಕೂಡು ಕುಟುಂಬದ ಕತೆ. ಕೂಡು ಕುಟುಂಬದ ಮಹತ್ವವನ್ನ ಹೇಳಲು ಈ ಸೀರಿಯಲ್‌ ಬರ್ತಿದೆ. ಜೇನುಗೂಡು ಯಾವಾಗ ಲಾಂಚ್ ಆಗ್ಲಿದೆ ಅನ್ನೋದು ಇನ್ನೂ ಕನ್ಫರ್ಮ್ ಆಗಿಲ್ಲ.
ಗಟ್ಟಿಮೇಳ ಸೀರಿಯಲ್‌ ನಂತರ ಹೊಸ ಪ್ರಾಜೆಕ್ಟ್‌ ಕೈಗೆತ್ತಿಕೊಂಡಿರೋ ಕೋರಮಂಗಲ ಅನಿಲ್ ಅವರ ಮೇಲೆ ಹೆಚ್ಚು ನಿರೀಕ್ಷೆಗಳಿವೆ. ವೀಕ್ಷಕರ ಈ ನಿರೀಕ್ಷೆಗಳನ್ನ ಉಳಿಸಿಕೊಳ್ತಾರಾ ಅನ್ನೋ ಪ್ರಶ್ನೆಗೆ ಸದ್ಯದಲ್ಲಿಯೇ ಉತ್ತರ ಸಿಗಲಿದೆ.

News First Live Kannada


Leave a Reply

Your email address will not be published. Required fields are marked *