ಗಟ್ಟಿಮೇಳ ವೈದೇಹಿ ಪಾತ್ರದ ಬಗ್ಗೆ ನಟಿ ಸ್ವಾತಿ ಏನ್ ಹೇಳಿದ್ರು?


ಕಿರುತೆರೆಯಲ್ಲಿ ಯಾವಾಗ್ಲೂ ಟಾಪ್ 5 ನಲ್ಲಿರುವ ಧಾರಾವಾಹಿಗಳಲ್ಲಿ ಜ್ಹೀ ಕನ್ನಡದ ಗಟ್ಟಿಮೇಳ ಕೂಡ ಒಂದು. ಮೊದಲಿನಿಂದಲೂ ಗಟ್ಟಿಮೇಳ ತನ್ನ ಸ್ಥಾನವನ್ನು ಹಾಗೆ ಕಾಪಡಿಕೊಂಡು ಬಂದಿದೆ. ಈ ಧಾರಾವಾಹಿ ವೀಕ್ಷಕರ ಅಚ್ಚು ಮೆಚ್ಚಿನ ಧಾರಾವಾಹಿ.

ಗಟ್ಟಿಮೇಳ ಧಾರಾವಾಹಿಯನ್ನು ಇಷ್ಟಪಡಲು ಕಾರಣವೆನೆಂದ್ರೆ, ಧಾರಾವಾಹಿಯ ತಾರಬಳಗ. ಹೌದು ಈ ಧಾರಾವಾಹಿಯಲ್ಲಿ ನಟಿಸುವ ಪಾತ್ರಧಾರಿಗಳೆಲ್ಲರಿಗೂ ಒಂದು ತೂಕ ಇದೆ. ಸದ್ಯ, ಧಾರಾವಾಹಿಯು ಹಲವಾರು ಟ್ವಿಸ್ಟ್ ಆಂಡ್ ಟರ್ನ್ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗ್ತಿದೆ. ಈ ಧಾರಾವಾಹಿಯಲ್ಲಿ ವಸಿಷ್ಟ ಕುಟುಂಬದ ನಿಜವಾದ ತಾಯಿ ಯಾರು ಎಂದು ತಿಳಿಯುವುದೇ ಕತೆಯ ಜೀವಾಳವಾಗಿದೆ. ಇದೇ ಹೊತ್ತಲ್ಲಿ, ಗಟ್ಟಿಮೇಳ ಬಹಳ ಸಮಯ ತಗೊಂಡು ಈ ಧಾರಾವಾಹಿಗೆ ತಕ್ಕಂತ ಅದ್ಭುತವಾಗಿ ನಟಿಸುವ, ತಾಯಿಯ ಪಾತ್ರಕ್ಕೆ ಜೀವ ತುಂಬುವ, ನೈಜವಾಗಿ ನಟಿಸುವ ಕಲಾವಿದರನ್ನು ಹುಡುಕುತ್ತಿರುವಾಗ ಸಿಕ್ಕಿದೆ ನಟಿ ಸ್ವಾತಿ ಅವ್ರು. ಈ ಮುಂಚೆ ಬ್ರಹ್ಮಗಂಟು ಧಾರಾವಾಹಿಯಲ್ಲಿ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು.

ಗಟ್ಟಿಮೇಳದ ವೈದೇಹಿ ಪಾತ್ರದ ಬಗ್ಗೆ ನಟಿ ಸ್ವಾತಿ ಅವ್ರು ನ್ಯೂಸ್​ ಫಸ್ಟ್​ ಜೊತೆ ಮಾತ್ನಾಡಿ, ಜೀ ಕನ್ನಡದ ಜೊತೆ ನನ್ನ ಭಾಂಧವ್ಯ ಚೆನ್ನಾಗಿದೆ. ನನಗೆ ಇವರೊಟ್ಟಿಗೆ ಕೆಲಸ ಮಾಡಲು ತುಂಬಾ ಇಷ್ಟ. ಬ್ರಹ್ಮಗಂಟು ಆದ ನಂತರ ಜೀ ನಲ್ಲಿ ಮತ್ತೆ ಮಾಡಲು ಅವಕಾಶ ಸಿಕ್ಕಿದೆ. ಗಟ್ಟಿಮೇಳದಲ್ಲಿ ನನ್ಗೆ ಒಂದೊಳ್ಳೆ ಪಾತ್ರ ಸಿಕ್ಕಿದೆ. ನನ್ಗೆ ಇವ್ರು ಮುಂಚೆ ಹೇಳಿದ ಹಾಗೆ, ನನ್ನ 20ವರ್ಷಗಳ ಕಾಲ ಒಂದ್ ರೊಮ್​ನಲ್ಲಿ ಕೂಡಿ ಹಾಕಿರ್ತಾರೆ. ವಿತ್ ಔಟ್ ಮೇಕಪ್​ನಲ್ಲಿ ಮಾಡ್​ಬೇಕು ಅಂತಾ ಹೇಳ್ದಾಗ ನಾನ್ ಒಪ್ಕೊಂಡೆ. ಶೂಟಿಂಗ್ ಶುರು ಆಗೂ ತನಕ ನನ್ಗೆ ಗೊತ್ತಿರಲಿಲ್ಲ, ಇಷ್ಟೊಂದು ಡೀಪ್ ಇದೆ ಪಾತ್ರ ಅಂತ. ವೀಕ್ಷಕರಿಗೆ ಇಷ್ಟೊಂದು ಕನೆಕ್ಟ್ ಆಗತ್ತೆ ಅನ್ನೊದು ಉಹಿಸಿರಲಿಲ್ಲ. ಈ ಪಾತ್ರಕ್ಕೆ ಬಹಳ ರೆಸ್ಪಾನ್ಸ್ ಸಿಕ್ತಿದೆ.

ಇದಕ್ಕೆಲ್ಲ ಬಹು ಮುಖ್ಯ ಕಾರಣ ಅಂದ್ರೆ ನಮ್ ಗಟ್ಟಿಮೇಳ ಡೈರೆಕ್ಟರ್. ನಾನ್ ಇಷ್ಟೆಲ್ಲಾ ಮಾಡೋದ್ಕೆ ಕಾರಣನೆ ನಮ್ ಡೈರೆಕ್ಟರ್​. ಇನ್ನೂ ವೈದೇಹಿಯನ್ನ  20 ವರ್ಷ ಕೂಡಿ ಹಾಕಿರ್ತಾರೆ. ಹಾಗಾಗಿ ಪಾತ್ರಕ್ಕೆ ತಕ್ಕಂತೆ ಚಪ್ಪಲಿ ಹಾಕ್ಬಾರ್ದು ಅಂತಾ ನಾನ್​ ಡಿಸೈಡ್​ ಮಾಡಿ ಬರಿಗಾಲಿನಲ್ಲಿಯೇ ಶೂಟಿಂಗ್​ ಮಾಡಿದ್ದೆ. ಆದರೆ ಇದು ಜನ್ರಿಗೆ ಇಷ್ಟು ಕನೆಕ್ಟ್​ ಆಗುತ್ತೆ ಅಂತಾ ಅನ್ಕೊಂಡಿರ್ಲಿಲ್ಲ ಅಂದ್ರು ಸ್ವಾತಿ.

ಇನ್ನೂ ವೀಕ್ಷಕರ ರೆಸ್ಪಾನ್ಸ್​ ಬಗ್ಗೆ ಮಾತ್ನಾಡಿ, ನಾನು ಚಪ್ಪಲಿ ಹಾಕದೇ ಮಾಡಿರುವ ಸೀನ್ಸ್ ಆಗಿರಬಹುದು ಹಾಗೂ ಈಗ ಮೂಡಿಬರುತ್ತಿರುವ ಎಲ್ಲಾ ಸೀನ್​ಗಳನ್ನ ಜನ ತುಂಬಾ ಇಷ್ಟಪಡ್ತಿದ್ದಾರೆ. ನಾನು ಹೀಗೆ ಹೊರಗಡೆ ಹೋದಾಗ ಒಂದ್​ಸಲ ಯಾರೊ ಬಂದು ಅಳ್ತಾ ಮೇಡಮ್ ಹೇಗ ನೀವು ಚಪ್ಪಲಿ ಹಾಕೊಳ್ಳದೇ, ವಿತ್ ಔಟ್ ಮೇಕಪ್ ಎಲ್ಲಾ ಮಾಡ್ತಿರಾ ಅಂತ ಕೇಳಿದ್ರು. ಅವ್ರ ಪ್ರೀತಿ ನೋಡಿ ನಂಗೆ ಏನ್​ ಹೇಳ್ಬೇಕು ಅಂತಾ ಗೊತ್ತಾಗ್ಲಿಲ್ಲ.

ಇನ್ನು ಲಾಲಿ ಹಾಡು ಇವಾಗ ತುಂಬಾ ವೈರಲ್ ಆಗಿದೆ. ಸಂಗೀತ ನಿರ್ದೆಶಕರಾದ ಲಯ ಕೋಕಿಲ್ ಅವ್ರು ಕೂಡ ಸೀರಿಯಲ್​ನಲ್ಲಿ  ಪಾತ್ರ ಮಾಡ್ತಿದ್ದಾರೆ. ಸೆಟ್​ನಲ್ಲಿ ಆನ್​ ದಿ ಸ್ಪಾಟ್​ ಬರೆದ ಹಾಡಿದು. ಇದು ಇಷ್ಟು ವೈರಲ್​ ಆಗುತ್ತೆ ಅನ್ಕೊಂಡಿರಲಿಲ್ಲ. ರೆಸ್ಪಾನ್ಸ್​ ನೋಡಿ ತುಂಬಾನೇ ಖುಷಿಯಾಗ್ತಿದೆ ಅಂದ್ರು ಸ್ವಾತಿ. ನನ್ಗೆ ಗಟ್ಟಿಮೇಳದಲ್ಲಿ ಇರೋದು ಬಹಳ ಖುಷಿ ತಂದಿದೆ. ಮುಂದೆ ಏನೆಲ್ಲಾ ಸೀನ್ಸ್​ ಇರಲಿದೆ ಅಂತ ನನ್ಗೂ ಕೂತಹಲವಿದೆ ಎಂದು ಪಾತ್ರದ ಬಗ್ಗೆ ಮನಬಿಚ್ಚಿ ಮಾತ್ನಾಡಿದ್ರು. ಒಟ್ಟಿನಲ್ಲಿ ಈಗ ತಾಯಿ ಮಕ್ಕಳ ಪ್ರೀತಿ ಬಾಂಧವ್ಯದ ಸನ್ನಿವೇಶಗಳನ್ನ ಜನ ಸಖತ್​ ಎಂಜಾಯ್​ ಮಾಡ್ತಿದ್ದಾರೆ.

News First Live Kannada


Leave a Reply

Your email address will not be published.