
ಸುದೀಪ್-ಜಾಕ್ವೆಲಿನ್
Ra Ra Rakkamma Lyric Video: ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿದ್ದಾರೆ. ವಿಶೇಷ ಹಾಡಿನಲ್ಲಿ ಅವರು ಸುದೀಪ್ ಜೊತೆ ಸೇರಿ ಹೆಜ್ಜೆ ಹಾಕಿದ್ದಾರೆ. ಜಾಕ್ವೆಲಿನ್ ಹೆಜ್ಜೆ ಹಾಕಿದ ‘ರಾ ರಾ ರಕ್ಕಮ್ಮ..’ ಲಿರಿಕಲ್ ಸಾಂಗ್ ಬಗ್ಗೆ ಸುದೀಪ್ ಮಾಹಿತಿ ನೀಡಿದ್ದಾರೆ.
ಹತ್ತು ಹಲವು ಕಾರಣಗಳಿಂದಾಗಿ ‘ವಿಕ್ರಾಂತ್ ರೋಣ’ ಸಿನಿಮಾ (Vikrant Rona) ಸೌಂಡು ಮಾಡುತ್ತಿದೆ. ಕಿಚ್ಚ ಸುದೀಪ್ (Kichcha Sudeep) ನಟನೆಯ ಈ ಚಿತ್ರ ಜುಲೈ 28ರಂದು ತೆರೆಗೆ ಬರುತ್ತಿದೆ. ಇದಕ್ಕೆ ಇನ್ನೂ ಎರಡು ತಿಂಗಳು ಸಮಯಾವಕಾಶ ಇದೆ. ಸದ್ಯ, ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದೆ. ಸಿನಿಮಾ ಬಗ್ಗೆ ಹೊಸಹೊಸ ಅಪ್ಡೇಟ್ ನೀಡಲಾಗುತ್ತಿದೆ. ಈ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿದ್ದಾರೆ. ಅವರ ಪಾತ್ರದ ಹೆಸರು ‘ಗಡಂಗ್ ರಕ್ಕಮ್ಮ’. ಅವರ ಹೆಸರಲ್ಲಿ ‘ರಾ ರಾ ರಕ್ಕಮ್ಮ..’ ಎಂಬ ವಿಶೇಷ ಸಾಂಗ್ ಕೂಡ ಮಾಡಲಾಗಿದೆ. ಈ ಹಾಡಿನ ಲಿರಿಕಲ್ ವಿಡಿಯೋದ ರಿಲೀಸ್ಗೆ ದಿನಾಂಕ ಫಿಕ್ಸ್ ಆಗಿದೆ.
ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿದ್ದಾರೆ. ವಿಶೇಷ ಹಾಡಿನಲ್ಲಿ ಅವರು ಸುದೀಪ್ ಜೊತೆ ಸೇರಿ ಹೆಜ್ಜೆ ಹಾಕಿದ್ದಾರೆ. ಕೈಯಲ್ಲಿ ಸಾರಾಯಿ ಬಾಟಲಿ ಹಿಡಿದು, ಗ್ಲಾಮರಸ್ ಆದಂತಹ ಕಾಸ್ಟ್ಯೂಮ್ ಧರಿಸಿ ಜಾಕ್ವೆಲಿನ್ ಕಾಣಿಸಿಕೊಂಡಿದ್ದ ಪೋಸ್ಟರ್ ಈ ಮೊದಲು ರಿಲೀಸ್ ಆಗಿತ್ತು. ಈಗ ರಿಲೀಸ್ ಆಗಲಿರುವ ಸಾಂಗ್ ಹೇಗೆ ಇರಲಿದೆ ಅನ್ನೋದು ಸದ್ಯದ ಕುತೂಹಲ.