ಮೈಸೂರು: ಗಡಿಗಾಗಿ ಎರಡು ಕೆರೆ ಹಾವುಗಳು ಪೈಪೋಟಿ ಮಾಡುತ್ತಿರುವುದನ್ನು ಗಮನಿಸಿ, ಅವುಗಳನ್ನು ಸಂರಕ್ಷಣೆ ಮಾಡಿ ಅರಣ್ಯ ಪ್ರದೇಶಕ್ಕೆ ಬಿಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ‌ ವಾಗ್ದೇವಿ ನಗರದ ನಿವಾಸಿ ರವೀಂದ್ರ ಎನ್ನುವವರು ತಮ್ಮ ನಿವಾಸದ ಮುಂದೆ ಇರುವ ಮೋರಿಯನ್ನು ಸ್ವಚ್ಛ ಮಾಡಲು ಮುಂದಾಗಿದ್ದರು. ಈ ವೇಳೆ ಹಾವುಗಳನ್ನ ಕಂಡು ಕೂಡಲೇ ಸ್ನೇಕ್ ಕೀರ್ತಿ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಅವರು ಹಾವುಗಳನ್ನು ಸುರಕ್ಷಿರವಾಗಿ ಹಿಡಿದು ರಕ್ಷಣೆ ಮಾಡಿದ್ದಾರೆ. ಹಾವುಗಳು ಮಿಲನ ಮಾಡುತ್ತಿಲ್ಲ ಬದಲಾಗಿ ಗಡಿಗಾಗಿ ಹೋರಾಟ ಮಾಡುತ್ತಿದ್ದವು ಎಂದು ಸ್ಥಳೀಯರಿಗೆ ಮನವರಿಕೆ ಮಾಡಿದ್ದಾರೆ. ಸೆರೆ ಹಿಡಿದ ಹಾವುಗಳನ್ನು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

The post ಗಡಿಗಾಗಿ ಭೀಕರ ಕಾಳಗ ಮಾಡುತ್ತಿದ್ದ ಕೆರೆ ಹಾವುಗಳ ರಕ್ಷಣೆ appeared first on News First Kannada.

Source: newsfirstlive.com

Source link