ಮುಂಬೈ: ಸದಾ ಒಂದಿಲ್ಲೊಂದು ರೀತಿಯಲ್ಲಿ ಸಾರ್ವಜನಿಕ ಸೇವೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಇದೀಗ ಗಡಿಭಾಗದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ದೊಡ್ಡ ಕೊಡುಗೆಯನ್ನೇ ನೀಡಿದ್ದಾರೆ.

ಜಮ್ಮು ಕಾಶ್ಮೀರದ ಬಂಡಿಪೋರ ಜಿಲ್ಲೆಯ ಲೈನ್ ಆಫ್ ಕಂಟ್ರೋಲ್​(LoC) ಭಾಗದಲ್ಲಿನ ತುಳಾಯಿ ಗ್ರಾಮದಲ್ಲಿ ಬಡವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲೆ ನಿರ್ಮಿಸಲು ಅಕ್ಷಯ್ ಕುಮಾರ್ ಬರೋಬ್ಬರಿ ₹1 ಕೋಟಿ ಹಣ ನೀಡಿದ್ದಾರೆ.

ನಿನ್ನೆ ಗಡಿಯಲ್ಲಿನ ಸೈನಿಕರ ಜೊತೆ ಸಮಯ ಕಳೆದಿದ್ದ ಅಕ್ಷಯ್ ಕುಮಾರ್ ಯೋಧರ ಜೊತೆ ಸಕತ್ತಾಗಿಯೇ ಸ್ಟೆಪ್​ಗಳನ್ನ ಹಾಕುವ ಮೂಲಕ ಅಕ್ಕಿ ಗಮನ ಸೆಳೆದಿದ್ದರು.

The post ಗಡಿಭಾಗದಲ್ಲಿ ಶಾಲೆ ನಿರ್ಮಾಣಕ್ಕೆ ₹1 ಕೋಟಿ ನೆರವು ನೀಡಿದ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ appeared first on News First Kannada.

Source: newsfirstlive.com

Source link