ಗಡಿಯಲ್ಲಿ ಚೀನಾ ಹಳ್ಳಿ ನಿರ್ಮಿಸಿದ್ದರೂ ಪ್ರಧಾನಿ ಮೋದಿ ಸೈಲೆಂಟ್- ಕಿಡಿಕಾರಿದ ಕಾಂಗ್ರೆಸ್​


ನವದೆಹಲಿ: ನೆರೆ ರಾಷ್ಟ್ರ ಚೀನಾ ನಮ್ಮ ಪ್ರದೇಶಗಳನ್ನು ಆಕ್ರಮಿಸಿಕೊಂಡಿದ್ದರೂ ಕೂಡ ಪ್ರಧಾನಿ ನರೇಂದ್ರ ಮೋದಿ ಸೈಲೆಂಟ್​ ಆಗಿದ್ದಾರೆ ಎಂದು ರಾಷ್ಟ್ರೀಯ ಕಾಂಗ್ರೆಸ್​ ತನ್ನ ಟ್ವೀಟರ್​ನಲ್ಲಿ ಕಿಡಿಕಾರಿದೆ.

ಬಿಜೆಪಿ ಸೋಲಿಸಿ, ಭಾರತವನ್ನು ಉಳಿಸಿ ಎಂಬ ಟ್ವಿಟರ್‌ ಅಭಿಯಾನ ನಡೆಸುತ್ತಿರುವ ಕಾಂಗ್ರೆಸ್‌, ಪೋಸ್ಟರ್‌ ಒಂದನ್ನು ಟ್ವೀಟ್‌ ಮಾಡಿದೆ. ಚೀನಾ ನಮ್ಮ ಗಡಿಯೊಳಗೆ ಪೂರ್ತಿ ಹಳ್ಳಿಯನ್ನೇ ನಿರ್ಮಿಸಿಕೊಂಡಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮಾತ್ರ ಮೌನವಹಿಸಿದ್ದಾರೆ ಅಂತ ಕಾಂಗ್ರೆಸ್‌ ಗರಂ ಆಗಿದೆ. ಅಂಕೆಯಿಲ್ಲದ ಭಾಷಣಗಳಲ್ಲಿ ಚೀನಾ ಅತಿಕ್ರಮಣವನ್ನು ಉಲ್ಲೇಖಿಸಲು ಪ್ರಧಾನಿ ಮೋದಿ ವಿಫಲರಾಗಿದ್ದಾರೆ ಎಂದು ಟೀಕಿಸಿದೆ.

ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನಾ ನೆಲೆಯಂತೆ ಹಳ್ಳಿಯೊಂದನ್ನು ನಿರ್ಮಿಸಿದೆ. ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಚೀನಾ ನಿರ್ಮಿಸಿಕೊಂಡಿರುವ ಅಂತಹ ಹಳ್ಳಿಗಳ ಪೈಕಿ ಇದು ಕೂಡ ಒಂದು. ಈ ಬಗ್ಗೆ ಪೆಂಟಗಾನ್‌ ಕೂಡ ಉಲ್ಲೇಖಿಸಿದೆ. ಇದು ರಾಷ್ಟ್ರೀಯ ಭದ್ರತೆಯ ಕಳವಳಕ್ಕೆ ಕಾರಣವಾಗಿದೆ ಅಂತ ಕಾಂಗ್ರೆಸ್‌ ಹೇಳಿದೆ.

News First Live Kannada


Leave a Reply

Your email address will not be published. Required fields are marked *