ಗಡಿಯಾಚೆಗೂ ಕಾಡುತ್ತಿದೆ ಅಪ್ಪು ನೆನಪು: ಆಸ್ಟ್ರೇಲಿಯಾ ಕನ್ನಡಿಗರಿಂದ ‘ಗೀತ ನಮನ’


ಪ್ರೀತಿಯ ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್​ ನಮ್ಮೆಲ್ಲರನ್ನ ಅಗಲಿ ನಾಳೆಗೆ ಒಂದು ತಿಂಗಳ. ಅವರ ಅಗಲಿಕೆಯ ನೋವು ಇಂದಿಗೂ ಕಾಡುತ್ತಲೇ ಇದೆ. ದೇಶದ ಗಡಿಯಾಚೆಗಿರುವ ಕನ್ನಡಿಗರೂ ಕೂಡ ಅಪ್ಪು ಅವರನ್ನ ನೆನೆದು ವಿವಿಧ ಕಾರ್ಯಕ್ರಮಗಳನ್ನ ಮಾಡುತ್ತಿದ್ದಾರೆ.

ಅದರಂತೆ ಆಸ್ಟ್ರೇಲಿಯಾದ ಅಡಿಲೇಡ್​ನಲ್ಲಿ ಅಪ್ಪು ನಮನ ಕಾರ್ಯಕ್ರಮ ನಡೆಯಿತು. ಅಡಿಲೇಡ್ ಕನ್ನಡ ಸಂಘದಿಂದ ಪುನೀತ್ ನಮನ ಕಾರ್ಯಕ್ರಮ ಆಯೋಜನೆ ನಡೆಯಿತು. ಆಸ್ಟ್ರೇಲಿಯಾದಲ್ಲಿರುವ ಕನ್ನಡಿಗರೆಲ್ಲರೂ ಒಗ್ಗೂಡಿ ಕಾರ್ಯಕ್ರಮವನ್ನ ನಡೆಸಿದರು.

ಈ ಸಂದರ್ಭದಲ್ಲಿ ಅಪ್ಪು, ರಾಜಕುಮಾರ ಚಿತ್ರದ ಚಿತ್ರೀಕರಣಕ್ಕಾಗಿ ಮೇಲ್ಬರ್ನ್​ಗೆ ತೆರಳಿದ್ದಾಗ ಅಲ್ಲಿನ ಕನ್ನಡಿಗರೆಲ್ಲರಿಗೂ ಔತಣಕೂಟ  ಏರ್ಪಡಿಸಲಾಗಿತ್ತು. ಆ ಸಂದರ್ಭವನ್ನ ಅಲ್ಲಿನ ಕನ್ನಡಿಗರು ನೆನಪಿಸಿಕೊಂಡರು. ನಂತರ ಪುನೀತ್ ರಾಜ್​ಕುಮಾರ್ ನಟಿಸಿರುವ ವಿವಿಧ ಚಿತ್ರಗಳ ಗೀತೆಗಳನ್ನ ಹಾಡುವ ಮೂಲಕ ಗೀತಾಂಜಲಿ ಅರ್ಪಣೆ ಮಾಡಿದರು. ಅಕ್ಟೋಬರ್ 29 ರಂದು ಸಂಭವಿಸಿದ್ದ ಹಠಾತ್ ಹೃದಯಾಘಾತದಿಂದ ಪುನೀತ್ ರಾಜ್​ಕುಮಾರ್ ನಿಧನರಾದರು.

News First Live Kannada


Leave a Reply

Your email address will not be published. Required fields are marked *