ಗಡ್ಡಕ್ಕೆ ಬೆಂಕಿ ಹತ್ತಿದಾಗ! ಸ್ಟಂಟ್​ ಮಾಡಲು ಹೋದ ವ್ಯಕ್ತಿಯ ಈ ಅವಸ್ಥೆ – Viral Video Of Man’s Beard Catching Fire as Stunt goes wrong


Man‘s Beard Catches Fire : ಈ ವಯಸ್ಸು, ಮನಸ್ಸು ಹೀಗೇ ಹುಚ್ಚುಕೋಡಿಯೇ. ಇಲ್ಲದ್ದನ್ನೆಲ್ಲ ಮೈಮೇಲೆ ಎಳೆದುಕೊಂಡು ಸಾಹಸಕ್ಕೆ ಬೀಳುತ್ತದೆ. ಈಗ ನೋಡಿ ಸ್ಟಂಟ್​ ಮಾಡಲು ಹೋದ ಈ ಯುವಕನ ಪರಿಸ್ಥಿತಿ ಏನಾಗಿದೆ?

ಗಡ್ಡಕ್ಕೆ ಬೆಂಕಿ ಹತ್ತಿದಾಗ! ಸ್ಟಂಟ್​ ಮಾಡಲು ಹೋದ ವ್ಯಕ್ತಿಯ ಈ ಅವಸ್ಥೆ

Man’s Beard Catching Fire as Stunt goes wrong

Viral Video : ಸಾಹಸ ಪ್ರದರ್ಶನಗಳು ಈಗೀಗ ಸಿನೆಮಾಗಳಿಗಷ್ಟೇ ಸೀಮಿತವಾಗಿಲ್ಲ. ಕಾಲೇಜು ಕಾರ್ಯಕ್ರಮ, ಹಬ್ಬ, ಜಾತ್ರೆ, ಉತ್ಸವಗಳಲ್ಲಿಯೂ ಯುವಕರು ಅತ್ಯುತ್ಸಾಹದಿಂದ ಸಾಹಸ ಪ್ರದರ್ಶನಗಳಲ್ಲಿ ತೊಡಗಿಕೊಳ್ಳಲು ಆರಂಭಿಸಿದ್ದಾರೆ. ಏಕೆಂದರೆ ಅವರನ್ನು ಸೋಶಿಯಲ್​ ಮೀಡಿಯಾ ಬಾ ಎಂದು ಕರೆಯುತ್ತಿರುವಾಗ ಹೇಗೆ ಸುಮ್ಮನಿದ್ಧಾರು!? ಆದರೆ ಎಲ್ಲ ಬಾರಿಯೂ ಇಂಥ ಸಾಹಸ ಪ್ರದರ್ಶನಗಳು ಯಶಸ್ವಿಯಾಗುತ್ತವೆಯೇ? ಅದಕ್ಕೆ ಅದರದೇ ಆದ ನೈಪುಣ್ಯತೆ, ನಿರಂತರ ಅಭ್ಯಾಸ ಬೇಕಾಗುತ್ತದೆ. ಕೇವಲ ರೀಲಿಗಾಗಿ ಇಂಥ ಪ್ರಯೋಗ ಮಾಡ ಹೋದರೆ ಈ ವಿಡಿಯೋದಲ್ಲಿ ಆಗುವ ಗತಿಯೇ ಆಗುವುದು.

ರವಿ ಪಾಟೀದಾರ್ ಎನ್ನುವವರು ಇನ್​ಸ್ಟಾಗ್ರಾಮ್​ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈಗಾಗಲೇ ಈ ವಿಡಿಯೋ ಅನ್ನು 12 ಮಿಲಿಯನ್​ಗಿಂತಲೂ ಹೆಚ್ಚು ಜನ ನೋಡಿದ್ದಾರೆ. ಯುವಕನೊಬ್ಬ ಪೆಟ್ರೋಲ್​ ಅನ್ನು ಬಾಯಿಯೊಳಗೆ ಹಾಕಿಕೊಂಡು ನಂತರ ಬೆಂಕಿ ಕಡ್ಡಿ ಗೀರಿ ಪೆಟ್ರೋಲ್​ ಉಗುಳುತ್ತಿದ್ದಂತೆ ಆತನ ಗಡ್ಡಕ್ಕೇ ಬೆಂಕಿ ಹೊತ್ತಿಕೊಂಡುಬಿಟ್ಟಿದೆ!

ಅಲ್ಲಿದ್ದ ಯುವಕರೆಲ್ಲ ಸೇರಿ ಬೆಂಕಿ ನಂದಿಸಿದ್ದಾರೆ. ನೆಟ್ಟಿಗರಂತೂ ಇದನ್ನು ನೋಡಿ ಅಂಜಿದ್ದಾರೆ. ಎಂಥಾ ಸ್ಟಂಟ್​ ಮಾರಾಯಾ ಇದು, ಬೇಕಿತ್ತಾ ಇದೆಲ್ಲಾ? ಎಂದಿದ್ದಾರೆ. ಯಾರೂ ಇಂಥದೆಲ್ಲ ಮಾಡಬೇಡಿ ಇದೆಲ್ಲ ಬಹಳ ಅಪಾಯ ಎಂದಿದ್ದಾರೆ ಇನ್ನೂ ಒಬ್ಬರು. ಈ ವಯಸ್ಸು ಹಾಗಿರುತ್ತದೆ, ಹುಚ್ಚು ಸಾಹಸಕ್ಕೆ ಬೀಳುತ್ತದೆ. ಆದರೆ ಪರಿಣಾಮ? ಹಾಗಾಗಿ ಯಾರೂ ಇಂಥದನ್ನೆಲ್ಲ ಪ್ರಯತ್ನಿಸಬೇಡಿ ಎಂದಿದ್ದಾರೆ ಮತ್ತೊಬ್ಬರು. ಜೀವನ ಬಹಳ ಬೆಲೆಯುಳ್ಳದ್ದು. ಇಂಥದೆಲ್ಲ ಮಾಡಬೇಡಿ ಎಂದಿದ್ದಾರೆ ಇನ್ನೂ ಒಬ್ಬರು. ಹೀಗೆಲ್ಲ ಮಾಡಬೇಡಿ ಅಣ್ಣಾ, ಮನಸಿಗೆ ಬಹಳ ನೋವಾಗತ್ತೆ ಎಂದಿದ್ದಾರೆ ಮಗದೊಬ್ಬರು.

ಬೆಂಕಿ ಒಮ್ಮೆ ಕಸಿದಕೊಂಡರೆ ಮುಗಿಯಿತು! ಹುಷಾರು

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published.