ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ರಾರಾಜಿಸಿದ ನೂಪುರ್ ಶರ್ಮಾ ಫ್ಲೆಕ್ಸ್ | Nupur Sharma flexes at the Ganapati Vasarjana procession


ಗಣಪತಿ ವಿಸರ್ಜನಾ ಮೆರವಣಿಗೆ ವಾಹನಗಳ ಮೇಲೆ ರಾಷ್ಟ್ರ ನಾಯಕರ ಫ್ಲೆಕ್ಸಗಳ ಜೊತೆ ನೂಪುರ್ ಶರ್ಮಾ ಫ್ಲೆಕ್ಸ್ ಕಾಣಿಸಿಕೊಂಡಿದೆ.

ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ರಾರಾಜಿಸಿದ ನೂಪುರ್ ಶರ್ಮಾ ಫ್ಲೆಕ್ಸ್

ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನೂಪುರ್ ಶರ್ಮಾ ಫ್ಲೆಕ್ಸ್​​

ಮೈಸೂರು: ಗಣಪತಿ (Ganesh Festival) ವಿಸರ್ಜನಾ ಮೆರವಣಿಗೆ ವಾಹನಗಳ ಮೇಲೆ ರಾಷ್ಟ್ರ ನಾಯಕರ ಫ್ಲೆಕ್ಸಗಳ ಜೊತೆ ನೂಪುರ್ ಶರ್ಮಾ (Nupur Sharma) ಫ್ಲೆಕ್ಸ್ ಕಾಣಿಸಿಕೊಂಡಿದೆ. ಇತ್ತೀಚಿಗೆ ವಿವಾದಾತ್ಮ ಹೇಳಿಕೆ ನೀಡಿ ನೂಪುರ್ ಶರ್ಮಾ ಭಾರಿ ಸುದ್ದಿಯಾಗಿದ್ದರು. ಮೆರವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ,ನೂಪುರ್ ಶರ್ಮಾ, ಆರ್ ಎಸ್ ಎಸ್ ಸಂಸ್ಥಾಪಕ ಹೆಡ್ಗೆವಾರ್ ಸೇರಿ ಹಲವರ ಫ್ಲೆಕ್ಸ್​ಗಳನ್ನು ಹಾಕಲಾಗಿದೆ.

ಮೆರವಣಿಗೆಯಲ್ಲಿ ಹತ್ಯೆಯದ ಹಿಂದೂ ಕಾರ್ಯಕರ್ತರಾದ ಕ್ಯಾತಮಾರನಹಳ್ಳಿ ರಾಜು, ಶಿವಮೊಗ್ಗದ ಹರ್ಷ ಭಾವಚಿತ್ರದ ಫ್ಲೆಕ್ಸ್​ಗಳು ರಾರಾಜಿಸುತ್ತಿವೆ.

ನೀರಿನಲ್ಲಿ ವಿಸರ್ಜನೆಯಾಗಲು ಗಣಪನೊಂದಿಗೆ ಹೊರಟ ಅಪ್ಪು: ಮೈಸೂರಿನ ವಿವಿಧೆಡೆ ಗಣೇಶನ ಜೊತೆ ಪುನೀತ್ ರಾಜ್ ಕುಮಾರ್ ವಿಗ್ರಹ ಪ್ರತಿಷ್ಟಾಪನೆ ಮಾಡಲಾಗಿದೆ. ಇದೀಗ ಗಣಪತಿಯೊಂದಿಗೆ ಪುನೀತ್ ವಿಗ್ರಹ ಸಹ ವಿಸರ್ಜನೆ ಮಾಡಲಾಗುತ್ತದೆ.

ನಟ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಂದ ಮೈಸೂರಿನ ರಾಜೇಂದ್ರ ನಗರದ 101ಗಣಪತಿ ದೇವಸ್ಥಾನದ ಬಳಿ ಪುನೀತ್ ವಿಗ್ರಹ ಕೂರಿಸಲಾಗಿತ್ತು. ರಾಜೇಂದ್ರ ನಗರದಿಂದ ನಗರದ ಕೋಟೆ ಆಂಜನೇಯ ದೇವಸ್ಥಾನದವರೆಗೂ ಮೆರವಣಿಗೆ ಮಾಡಲಾಗುತ್ತದೆ. ಮೆರವಣಿಗೆ ಬಳಿಕ ಶ್ರೀರಂಗಪಟ್ಟಣದ ನದಿಯಲ್ಲಿ ಇಂದು ರಾತ್ರಿ ಪುನೀತ್ ವಿಗ್ರಹವನ್ನು ಸಹ ವಿಸರ್ಜನೆ ಮಾಡಲಾಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ತಾಜಾ ಸುದ್ದಿ

TV9 Kannada


Leave a Reply

Your email address will not be published.