ಹೊಸದಿಲ್ಲಿ: ಎಂದಿನಂತೆ ಈ ವರ್ಷವೂ ಗಣರಾಜ್ಯೋತ್ಸವಕ್ಕೆ ಸ್ತಬ್ದಚಿತ್ರಗಳ ಪರೇಡ್ ಆಯೋಜಿಸಲಾಗಿದೆ. ಈ ಗಣರಾಜ್ಯೋತ್ಸವ ಪರೇಡ್ನಲ್ಲಿ ಕರ್ನಾಟಕದಿಂದ ಸುಪ್ರಸಿದ್ದ ಇಳಕಲ್ ಸೀರೆ, ಗುಳೇದಗುಡ್ಡ ಖಣ ಕರಕುಶಲ ವಸ್ತುಗಳಾಗಿ ಆಯ್ಕೆಗೊಂಡಿದೆ.
ಜಿಯೋಲಾಜಿಕಲ್ ಐಡೆಂಟಿಟಿ ಟ್ಯಾಗ್ ಹೊಂದಿರುವ 16 ಕರಕುಶಲ ವಸ್ತುಗಳು ಆಯ್ಕೆಯಾಗಿವೆ. ಬಾಗಲಕೋಟೆಯ ಇಳಕಲ್ ಸೀರೆ ಹಾಗೂ ಗುಳೇದಗುಡ್ಡ ಖಣವೂ(ಕುಪ್ಪಸ) ಜಿಐ ಟ್ಯಾಗ್ ಪಡೆದಿವೆ.
ವಿಶಿಷ್ಟ ವಿನ್ಯಾಸದ ಮೂಲಕ ಜನರ ಗಮನ ಸೆಳೆಯೋ ಈ ಸೀರೆ ಖಣಕ್ಕೆ ಇತ್ತಿಚಿನ ದಿನಗಳಲ್ಲಿ ಮಾರುಕಟ್ಟೆ ಕುಸಿದಿದೆ. ಇಳಕಲ್ ಸೀರೆಗಳಿಗೆ ಆನ್ಲೈನ್ ಮೂಲಕವು ಮಾರಾಟ ವ್ಯವಸ್ಥೆ ಪ್ರಾರಂಭವಾಗಿದೆ. ಹೀಗಾಗಿ ಗುಳೇದಗುಡ್ಡದ ನೇಕಾರರು ಖಣಕ್ಕೆ ಹೊಸ ಹೊಸ ರೂಪ ಕೊಟ್ಟು ಬೇಡಿಕೆ ಬರುವಂತೆ ಮಾಡ್ತಿದ್ದಾರೆ.
ಇಳಕಲ್ ಖಣದಿಂದ ಮಾಸ್ಕ್ ಮತ್ತು ಆಕಾಶಬುಟ್ಟಿ ತಯಾರಿಸಿ ಮಾರುಕಟ್ಟೆಗೆ ಬಿಟ್ಟಿದ್ದಾರೆ. ಇವು ಈಗ ಗಣರಾಜ್ಯೋತ್ಸವದ ಸ್ತಬ್ದಚಿತ್ರಗಳ ಪ್ರದರ್ಶನಕ್ಕೆ ಆಯ್ಕೆಯಾಗಿದ್ದು, ರಾಷ್ಟ್ರದಲ್ಲಿ ಹೆಚ್ಚಿನ ಗಮನ ಸೆಳೆಯಲಿದೆ. ಇದು ನೇಕಾರರಿಗೆ ಸಂಭ್ರಮದ ವಿಷಯವಾಗಿದೆ. ವಾರ್ತಾ ಇಲಾಖೆಯಿಂದ ನ್ಯೂಸ್ ಫಸ್ಟ್ಗೆ ಮಾಹಿತಿ ಲಭ್ಯವಾಗಿದೆ.