ವಿಜಯನಗರ: ಗಣಿನಾಡಿನಲ್ಲಿ ಬ್ಲಾಕ್​ ಫಂಗಸ್​ಗೆ ಮೊದಲ ಸಾವಾಗಿದೆ. ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉದ್ಗಟ್ಟಿ ತಾಂಡಾದ ಕೊಟ್ರೇಶ್ ನಾಯ್ಕ್ ಎಂಬ ವ್ಯಕ್ತಿ ಬ್ಲ್ಯಾಕ್ ಫಂಗಸ್​ನಿಂದಾಗಿ ಸಾವನ್ನಪ್ಪಿದ್ದಾರೆ.

ಹರಪನಹಳ್ಳಿಯಲ್ಲಿ 04 ದಿನಗಳ ಕಾಲ ಕೊರೊನಾ ಚಿಕಿತ್ಸೆ ಪಡೆದಿದ್ರು. ನಂತರ, ಬ್ಲ್ಯಾಕ್ ಫಂಗಸ್ ಲಕ್ಷಣಗಳು ಪತ್ತೆಯಾಗಿ  ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಕೊಟ್ರೇಶ್ ನಾಯ್ಕ್ ಸಾವನ್ನಪ್ಪಿದ್ದಾರೆ ಅಂತ  ಆರೋಗ್ಯ ಇಲಾಖೆಯ ಅಧಿಕಾರಿಗಳು, ಹರಪನಹಳ್ಳಿ ಟಿಎಚ್ಓ ಡಾ. ವೆಂಕಟೇಶ್​ ಮಾಹಿತಿ ನೀಡಿದ್ದಾರೆ. ಇದುವರೆಗೂ, 8 ಬ್ಲ್ಯಾಕ್ ಫಂಗಸ್ ಕೇಸ್​ಗಳು ಬಳ್ಳಾರಿ ಜಿಲ್ಲೆಯಲ್ಲಿ ಪತ್ತೆಯಾಗಿದೆ.

The post ಗಣಿನಾಡಿನಲ್ಲಿ ಬ್ಲ್ಯಾಕ್​ ಫಂಗಸ್​ಗೆ ಮೊದಲ ಸಾವು appeared first on News First Kannada.

Source: newsfirstlive.com

Source link