ಕಲಬುರಗಿ: ಗಣಿ ಸಚಿವರ ಉಸ್ತುವಾರಿ ಜಿಲ್ಲೆ ಕಲಬುರಗಿಯಲ್ಲೇ ಅಕ್ರಮ ಮರಳು ದಂಧೆ ನಡೆಯುತ್ತಿದ್ದು ಅತ್ತ ಕೋವಿಡ್ ಡ್ಯೂಟಿಯಲ್ಲಿ ಅಧಿಕಾರಿಗಳು ಬ್ಯುಸಿಯಾಗಿದ್ದು ಇತ್ತ ದಂಧೆಕೋರರು ಮರಳು ಲೂಟಿ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

ನದಿಗೆ ಜೆಸಿಬಿ ಇಳಿಸಿ, ಟ್ರಾಕ್ಟರ್, ಟಿಪ್ಪರ್ ಮೂಲಕ ಮರಳು ಸಾಗಾಟ ಮಾಡಲಾಗುತ್ತಿದ್ದು ಇದರಿಂದ ನದಿ ಪಾತ್ರದ ಜನರು ನಲುಗುವಂತಾಗಿದೆಯಂತೆ. ರಾತ್ರಿ ಆಗ್ತಿದ್ದಂತೆ ಮರಳು ದೋಚುತ್ತಿರುವ ಖದೀಮರು ನದಿ ತಟದ ಸುತ್ತಮುತ್ತ ಮರಳು ಸ್ಟಾಕ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಸಂಬಂಧ ಪಟ್ಟ ಪೊಲೀಸ್ ಠಾಣೆ ಅಧಿಕಾರಿಗಳು ಫುಲ್ ಸೈಲೆಂಟ್ ಆಗಿದ್ದು ಅಕ್ರಮದ ಬಗ್ಗೆ ಎಲ್ಲರ ಗಮನಕ್ಕಿದ್ರೂ ಗಪ್ ಚುಪ್ ಅಂತ ಅಧಿಕಾರಿಗಳು ಕುಳಿತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ನಿತ್ಯ ನೂರಾರು ಟ್ರಾಕ್ಟರ್, ಟಿಪ್ಪರ್ ಮೂಲಕ ಮರಳು ಸಾಗಾಟ ಮಾಡಲಾಗ್ತಿದ್ದು ಕ್ರಮ ಕೈಗೊಳ್ಳಲು ಮೈನ್ಸ್ ಅಧಿಕಾರಿಗಳು ಮುಂದಾಗುತ್ತಿಲ್ಲವಂತೆ. ಜಿಲ್ಲೆಯ ಅಫಜಲಪುರ ಹಾಗೂ ಜೇವರ್ಗಿ ತಾಲ್ಲೂಕು ಭೀಮಾ ನದಿಯಲ್ಲಿ ಮರಳುಗಾರಿಕೆ ನಡೆಯುತ್ತಿದ್ದು ಮೈನ್ಸ್ ಖಾತೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿಯವರ ಗಮನಕ್ಕೆ ಈ ವಿಚಾರ ಬಂದಿದ್ರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎನ್ನಲಾಗಿದೆ.

The post ಗಣಿ ಸಚಿವರ ಜಿಲ್ಲೆಯಲ್ಲೇ ಅಕ್ರಮ ಮರಳು ದಂಧೆ: ಅಧಿಕಾರಿಗಳು ಗಪ್​ಚುಪ್​ appeared first on News First Kannada.

Source: newsfirstlive.com

Source link