ಗಣೇಶನ ಹಬ್ಬಕ್ಕೆ ಶಿವಣ್ಣನ ದರ್ಶನ; ಬಿಗ್​ ಸ್ಕ್ರೀನ್​ಗೆ ಬರಲಿದೆ ‘ಭಜರಂಗಿ 2’

ಗಣೇಶನ ಹಬ್ಬಕ್ಕೆ ಶಿವಣ್ಣನ ದರ್ಶನ; ಬಿಗ್​ ಸ್ಕ್ರೀನ್​ಗೆ ಬರಲಿದೆ ‘ಭಜರಂಗಿ 2’

ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ.? ಎಷ್ಟೇ ವಯ್ಯಸಾದ್ರೂ, ತಮ್ಮ ಌಕ್ಟಿಂಗ್​ ಸ್ಕಿಲ್ಸ್​, ಡ್ಯಾನ್ಸಿಂಗ್​ ಮೂವ್ಸ್​ನಿಂದ ದೊಡ್ಡ ಅಭಿಮಾನಿ ಬಳಗವನ್ನೇ ಸೃಷ್ಟಿಸಿಕೊಂಡಿದ್ದಾರೆ. ದೊಡ್ಮನೆಯ ಕುಡಿ ಶಿವಣ್ಣನ ಅಭಿಮಾನಿಗಳಿಗೆ ಈ ಬಾರಿಯ ಗಣೇಶ ಹಬ್ಬಕ್ಕೆ ಸೂಪರ್​ ಸಿಹಿ ಸುದ್ದಿಯೊಂದು ಸಿಕ್ಕಿದೆ.

ಹೌದು ಸರ್ಕಾರ ಥಿಯೇಟರ್ ಓಪನ್​ಗೆ ಅನುಮತಿ ನೀಡ್ತಿದ್ದಂತೆ ಭಜರಂಗಿ 2 ರಿಲೀಸ್​ಗೆ ರೆಡಿಯಾಗಿದ್ದು.. ಇದೇ ಸೆಪ್ಟೆಂಬರ್ 10ಕ್ಕೆ ಚಿತ್ರ ರಿಲೀಸ್ ಮಾಡುವುದಾಗಿ ನ್ಯೂಸ್​ಫಸ್ಟ್​ಗೆ ನಿರ್ಮಾಪಕ ಜಯಣ್ಣ ತಿಳಿಸಿದ್ದಾರೆ. ಲಾಕ್ಡೌನ್​ನ ನಂತ್ರ ರಿಲೀಸ್ ಡೇಟ್ ಅನೌನ್ಸ್ ಮಾಡಿದ ಮೊದಲ ಚಿತ್ರ ಭಜರಂಗಿ 2 ಆಗಿದ್ದು ಹ್ಯಾಟ್ರಿಕ್ ಹೀರೋ ಶಿವಣ್ಣ ನಿರ್ದೇಶಕ ಎ ಹರ್ಷ ಅವರ ಹ್ಯಾಟ್ರಿಕ್ ಕಾಂಬಿನೇಶನ್ ಚಿತ್ರ ಅಭಿಮಾನಿಗಳ ಮುಂದೆ ಬರಲಿದೆ. ಅಷ್ಟೇ ಅಲ್ಲದೇ ಭಜರಂಗಿ 2 ಸಿನಿಮಾದ ಟೀಸರ್ ಈಗಾಗಲೇ ಸಾಕಷ್ಟು ಸೌಂಡ್ ಮಾಡಿದ್ದು, ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಇನ್ನೂ ಹೆಚ್ಚಿದೆ.

The post ಗಣೇಶನ ಹಬ್ಬಕ್ಕೆ ಶಿವಣ್ಣನ ದರ್ಶನ; ಬಿಗ್​ ಸ್ಕ್ರೀನ್​ಗೆ ಬರಲಿದೆ ‘ಭಜರಂಗಿ 2’ appeared first on News First Kannada.

Source: newsfirstlive.com

Source link